ETV Bharat / international

ಭಾರತದೊಂದಿಗೆ ಸಂಬಂಧ ಬಲಪಡಿಸಿ: ಪ್ರಜಾಪ್ರಭುತ್ವವಾದಿಗಳಿಂದ ಪಾಕ್​ ಸರ್ಕಾರಕ್ಕೆ ಒತ್ತಾಯ - ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ಧ ಸಂಬಂಧ ಬಲಪಡಿಸಲು ಪಾಕ್​ ಸರ್ಕಾರಕ್ಕೆ ಕರೆ

ಪ್ರಧಾನಿ ಸ್ಥಾನದಿಂದ ಇಮ್ರಾನ್ ಖಾನ್ ನಿರ್ಗಮಿಸಿದ ನಂತರ ರಚಿಸಲಾದ ಹೊಸ ಸರ್ಕಾರವು ತಕ್ಷಣವೇ ಬಲೂಚ್ ರಾಷ್ಟ್ರೀಯವಾದಿಗಳೊಂದಿಗೆ ಮಾತುಕತೆ ನಡೆಸುವಂತೆ ಹಾಗೂ ಆ ಭಾಗದಲ್ಲಿನ ಹಿಂಸಾಚಾರಕ್ಕೆ ಅಂತ್ಯ ಹಾಡಬೇಕಿದ್ದು, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಜಾಪ್ರಭುತ್ವ ಪರ ವಾದಿಗಳು ಪಾಕ್​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭಾರತದೊಂದಿಗೆ ಸಂಬಂಧ ಬಲಪಡಿಸಿ: ಪ್ರಜಾಪ್ರಭುತ್ವವಾದಿಗಳಿಂದ ಪಾಕ್​ ಸರ್ಕಾರಕ್ಕೆ ಒತ್ತಾಯ

author img

By

Published : Apr 26, 2022, 8:08 AM IST

ವಾಷಿಂಗ್ಟನ್: ಪಾಕಿಸ್ತಾನದ ಹೊಸ ಸರ್ಕಾರವು ಜನಾಂಗೀಯ ಮತ್ತು ಧಾರ್ಮಿಕ ಸಂಘರ್ಷಗಳನ್ನು ಶಮನಗೊಳಿಸುವಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಬೇಕು ಎಂದು ಪ್ರಜಾಪ್ರಭುತ್ವವಾದಿಗಳು, ಬುದ್ಧಿಜೀವಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಯಕರ್ತರ ಗುಂಪು ಒತ್ತಾಯಿಸಿದೆ. ಭಾರತ ಮತ್ತು ಇತರ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಶ್ರಮಿಸಬೇಕು ಎಂದು ಇವರೆಲ್ಲ ಒತ್ತಾಯಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಮತ್ತು ಮಾನವ ಹಕ್ಕುಗಳ (SAATH) ವಿರುದ್ಧ ದಕ್ಷಿಣ ಏಷ್ಯನ್ನರು ಆಯೋಜಿಸಿದ್ದ ವರ್ಚುಯಲ್​​​ ಸಮ್ಮೇಳನದಲ್ಲಿ ಈ ಒತ್ತಾಯ ಕೇಳಿ ಬಂದಿದೆ. ಪ್ರಧಾನಿ ಸ್ಥಾನದಿಂದ ಇಮ್ರಾನ್ ಖಾನ್ ನಿರ್ಗಮಿಸಿದ ನಂತರ ರಚಿಸಲಾದ ಹೊಸ ಸರ್ಕಾರವು ತಕ್ಷಣವೇ ಬಲೂಚ್ ರಾಷ್ಟ್ರೀಯವಾದಿಗಳೊಂದಿಗೆ ಮಾತುಕತೆ ನಡೆಸುವಂತೆ ಹಾಗೂ ಆ ಭಾಗದಲ್ಲಿನ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಕರೆ ನೀಡಿದೆ. ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಜಾಪ್ರಭುತ್ವ ಪರ ವಾದಿಗಳು ಪಾಕ್​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ಧ ಸಂಬಂಧ ಬಲಪಡಿಸಲು ಕರೆ: ನೆರೆಯ ರಾಷ್ಟ್ರಗಳು, ವಿಶೇಷವಾಗಿ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಬೇಕು ಎಂದು ಸಮ್ಮೇಳನದಲ್ಲಿ ಭಾಗವಹಿಸಿದವರು ಆಗ್ರಹಿಸಿದ್ದಾರೆ. SAATH ಸಹ ಸಂಸ್ಥಾಪಕ ಮತ್ತು ಅಮೆರಿಕದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ, ರಾಜಕೀಯದ ಮಿಲಿಟರೀಕರಣ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಬಳಸುವುದನ್ನು ಕೊನೆಗೊಳಿಸಬೇಕಿದೆ. ಇದಾಗದ ಹೊರತು ಪಾಕಿಸ್ತಾನವು ತನ್ನ ಪ್ರಸ್ತುತ ಅವ್ಯವಸ್ಥೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆ ಕೊನೆಗೊಳಿಸುವುದು ಮೊದಲ ಆದ್ಯತೆ ಆಗಬೇಕಿದ್ದು, ಈ ಮೂಲಕ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಲಪಡಿಸಬೇಕಿದೆ. ಪಾಕಿಸ್ತಾನಿಗಳು ತಮ್ಮ ಆರ್ಥಿಕತೆ ಪುನರ್​ ನಿರ್ಮಿಸಲು ಗಮನಹರಿಸುವುದು ಸದ್ಯದ ಅಗತ್ಯತೆ ಆಗಿದೆ ಎಂದು ಹುಸೇನ್​ ಹಕ್ಕಾನಿ ಪ್ರತಿಪಾದಿಸಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಸೆನೆಟರ್ ಫರ್ಹತುಲ್ಲಾ ಬಾಬರ್ ಅವರು ಭದ್ರತೆಯಲ್ಲಿನ ವಿಭಜನೆ ಕಳವಳಕಾರಿ ಎಂದಿದ್ದಾರೆ.

ಮಾಜಿ ಸೆನೆಟರ್ ಅಫ್ರಾಸಿಯಾಬ್ ಖಟ್ಟಕ್ ಮಾತನಾಡಿ, "ಜನರಲ್ ಶಾಹಿ" ಕೊನೆಗೊಳಿಸಬೇಕೆಂದು ಕರೆ ನೀಡಿದ್ದಾರೆ. ಹೈಬ್ರಿಡ್ ಆಡಳಿತ ವಿಫಲವಾಗಿದೆ ಎಂದೂ ಖಟ್ಟಕ್ ಅಭಿಪ್ರಾಯಪಟ್ಟಿದ್ದಾರೆ. ಭಿನ್ನಾಭಿಪ್ರಾಯದ ಧ್ವನಿಗಳು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ರಾಷ್ಟ್ರೀಯತೆ ಹಕ್ಕುಗಳನ್ನು ರಕ್ಷಿಸಲು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಶಕ್ತಿಗಳು ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ:ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ.. ಒಂದೇ ಕುಟುಂಬದ ನಾಲ್ವರು ಭಾರತೀಯರು ಸೇರಿ ಐವರು ದುರ್ಮರಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.