ETV Bharat / international

ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಿಂದ ನಾನು ಪ್ರಭಾವಿತನಾಗಿ ಹೊರಬಂದೆ: ಬೋಸ್ಟನ್‌ ವಿವಿ ರಾಜ್ಯಶಾಸ್ತ್ರಜ್ಞ!

ನ್ಯೂಯಾರ್ಕ್​ ನಗರದಲ್ಲಿ ಪ್ರಧಾನಿ ಮೋದಿ ಅಮೆರಿಕದ ವಿವಿಧ ಕ್ಷೇತ್ರಗಳ​ ತಜ್ಞರೊಂದಿಗೆ ಸಂವಾದ ನಡೆಸಿದರು.

us ವಿವಿಧ ಕ್ಷೇತ್ರದ ತಜ್ಞರೊಂದಿಗೆ ಮೋದಿ ಸಭೆ
us ವಿವಿಧ ಕ್ಷೇತ್ರದ ತಜ್ಞರೊಂದಿಗೆ ಮೋದಿ ಸಭೆ
author img

By

Published : Jun 22, 2023, 7:27 AM IST

ನ್ಯೂಯಾರ್ಕ್ (ಅಮೆರಿಕ): ನಾಲ್ಕು ದಿನ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ​ ಕೃಷಿ, ಮಾರುಕಟ್ಟೆ, ಇಂಜಿನಿಯರಿಂಗ್, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಖ್ಯಾತ ಶಿಕ್ಷಣ ತಜ್ಞರ ಗುಂಪಿನೊಂದಿಗೆ ಬುಧವಾರ ನ್ಯೂಯಾರ್ಕ್‌ನಲ್ಲಿ ಸಭೆ ನಡೆಸಿದರು.

  • In New York City, held an extensive interaction with a group of academics. They shared their views on how to further strengthen the education sector in India with a focus on skills and innovation. I talked about the transformative potential of our National Education Policy. pic.twitter.com/SZFvsxYvIZ

    — Narendra Modi (@narendramodi) June 21, 2023 " class="align-text-top noRightClick twitterSection" data=" ">

ಇದರಲ್ಲಿ ಭಾಗಿಯಾಗಿದ್ದ ಅಮೆರಿಕದ ಚಿಂತಕ ಹಾಗೂ ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ ಮ್ಯಾಕ್ಸ್ ಅಬ್ರಹ್ಮ್ಸ್ ಪ್ರಧಾನಿ ಮೋದಿ ಸಮೀಪ್ಯತೆ ಮತ್ತು ಮುಕ್ತತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂವಾದದ ನಂತರ ಈ ಕುರಿತು ಟ್ವೀಟ್​ ಮಾಡಿದ ಅವರು "ನಾನು ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದಿಂದ ಪ್ರಭಾವಿತನಾಗಿ ಬಂದಿದ್ದೇನೆ. ಸಂವಾದದಲ್ಲಿ ಭಾಗಿಯಾಗಿದ್ದ ಎಲ್ಲಾ ತಜ್ಞರಿಗೂ ಹೇಳಲು ಮತ್ತು ಕೇಳಲು ಮೋದಿ ಅವಕಾಶ ನೀಡಿದರು. ಅಲ್ಲದೇ ತಜ್ಞರ ಮಾತುಗಳನ್ನು ಬಹಳ ಸೂಕ್ಷ್ಮವಾಗಿ ಆಲಿಸಿ ಅವುಗಳಿಗೆ ಪ್ರತಿಕ್ರಿಯಿಸಿದರು. ಈ ನಿಟ್ಟಿನಲ್ಲಿ ನಮಗೆ ತುಂಬಾ ನಮ್ರತೆ ಇದೆ" ಎಂದು ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಅಬ್ರಾಹ್ಮ್ಸ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿದ್ದು, "ನ್ಯೂಯಾರ್ಕ್ ನಗರದಲ್ಲಿ, ಶಿಕ್ಷಣತಜ್ಞರ ಗುಂಪಿನೊಂದಿಗೆ ಸಂವಾದ ನಡೆಸಲಾಯಿತು. ಕೌಶಲ್ಯ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಿ ಭಾರತದಲ್ಲಿ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂಬುದರ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಾನು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿವರ್ತಕ ಸಾಮರ್ಥ್ಯದ ಬಗ್ಗೆ ಮಾತನಾಡಿದೆ". ಎಂದು ಟ್ವೀಟ್ ಮಾಡಿದ್ದಾರೆ

ಥಿಂಕ್ ಟ್ಯಾಂಕ್‌ನ ತಜ್ಞರ ಜೊತೆ ಪ್ರಧಾನಿ ಮೋದಿ, ಭೌಗೋಳಿಕ ರಾಜಕೀಯ, ಜಾಗತಿಕ ಆರ್ಥಿಕ ಪರಿಸ್ಥಿತಿ, ಭಯೋತ್ಪಾದನೆ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಸಂವಾದ ನಡೆಸಿದರು.

ಇದನ್ನೂ ಓದಿ: 'ಯೋಗಕ್ಕೆ ಕಾಪಿರೈಟ್​, ಪೇಟೆಂಟ್‌, ರಾಯಲ್ಟಿ ಇಲ್ಲ': ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮೋದಿ ಮಾತು

ಸಂವಾದದಲ್ಲಿ ಭಾಗವಹಿಸಿದ ಶಿಕ್ಷಣ ತಜ್ಞರ ವಿವರಗಳು ಹೀಗಿವೆ: ನ್ಯೂಯಾರ್ಕ್‌ನ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (CFR)ನ ನಿಯೋಜಿತ ಅಧ್ಯಕ್ಷ ಮೈಕೆಲ್ ಫ್ರೊಮಾನ್, ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಅಂತಾರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕತೆಯ ಉಪಾಧ್ಯಕ್ಷ ಡೇನಿಯಲ್ ರಸ್ಸೆಲ್, ಏಷ್ಯನ್ ಸ್ಟಡೀಸ್ ಸೆಂಟರ್ ನಿರ್ದೇಶಕ, ದಿ ಹೆರಿಟೇಜ್ ಫೌಂಡೇಶನ್, ಎಲ್ಬ್ರಿಡ್ಜ್ ಕಾಲ್ಬಿ, ವಾಷಿಂಗ್ಟನ್ ಡಿಸಿ ಮೂಲದ 'ದಿ ಮ್ಯಾರಥಾನ್ ಇನಿಶಿಯೇಟಿವ್' ನ ಸಹ-ಸಂಸ್ಥಾಪಕ ಜೆಫ್ ಎಂ ಸ್ಮಿತ್, ಕೃಷಿ ವಿಜ್ಞಾನಿ, ಗಾಯಕ ಮತ್ತು ಇಲಿನಾಯ್ಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಬರ್ಟ್ ಜೆ ಜೋನ್ಸ್, ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಅಧ್ಯಕ್ಷ ಅರ್ಬಾನಾ-ಚಾಂಪೇನ್; ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಕುಲಪತಿ ಡಾ. ಡಾ. ಪ್ರದೀಪ್ ಖೋಸ್ಲಾ ಸೇರಿ ಇತರರು ಹಾಜರಿದ್ದರು.

ಇದನ್ನೂ ಓದಿ: Guinness Record: ವಿಶ್ವಸಂಸ್ಥೆ ಆವರಣದಲ್ಲಿ ಮೋದಿ ಮುನ್ನಡೆಸಿದ ಯೋಗಾಭ್ಯಾಸಕ್ಕೆ ಗಿನ್ನಿಸ್ ದಾಖಲೆ ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.