ETV Bharat / international

2ನೇ ತಿಂಗಳಿಗೆ ಕಾಲಿಟ್ಟ ಸುಡಾನ್ ಸಂಘರ್ಷ: ಮಾನವೀಯ ಬಿಕ್ಕಟ್ಟು ಉಲ್ಬಣ

ಸುಡಾನ್​ನಲ್ಲಿ ಮುಂದುವರೆದಿರುವ ಸಶಸ್ತ್ರ ಸಂಘರ್ಷದಿಂದ ಮಾನವೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನಿತ್ಯದ ಅಗತ್ಯ ವಸ್ತುಗಳ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದು, ಹಸಿವಿನ ಪರಿಸ್ಥಿತಿ ಎದುರಾಗುವ ಬಿಕ್ಕಟ್ಟು ತಲೆದೋರಿದೆ.

Humanitarian crisis worsens in Sudan's capital as clashes continue

author img

By

Published : May 17, 2023, 7:57 PM IST

ಖಾರ್ಟೂಮ್ (ಸುಡಾನ್) : ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ನಡೆಯುತ್ತಿರುವ ಹಿಂಸಾತ್ಮಕ ಸಶಸ್ತ್ರ ಘರ್ಷಣೆಗಳು ಎರಡನೇ ತಿಂಗಳಿಗೆ ಪ್ರವೇಶಿಸುತ್ತಿದ್ದಂತೆ ಖಾರ್ಟೂಮ್‌ನಲ್ಲಿ ಮಾನವೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಸುಡಾನ್ ವೈದ್ಯರ ಒಕ್ಕೂಟದ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್ 15 ರಂದು ಘರ್ಷಣೆಗಳು ಪ್ರಾರಂಭವಾದಾಗಿನಿಂದ ಕನಿಷ್ಠ 822 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೋರಾಟ ನಡೆಯುತ್ತಿರುವ ಪ್ರದೇಶಗಳಲ್ಲಿನ ನಿವಾಸಿಗಳು ಮೂಲಭೂತ ಸೇವೆಗಳು, ಆಹಾರ, ವಿದ್ಯುತ್ ಮತ್ತು ನೀರಿನ ಪೂರೈಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ.

ವಾಯು ಬಾಂಬ್ ದಾಳಿ ಮತ್ತು ಪ್ರಮುಖ ಸ್ಥಳೀಯ ಮಾರುಕಟ್ಟೆಗಳಲ್ಲಿನ ಲೂಟಿಯಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದೆ. ಇದರಿಂದ ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗಿದೆ. ಆಹಾರ ವಸ್ತುಗಳ ಬೆಲೆಗಳು ಈಗಾಗಲೇ ಗಗನಕ್ಕೇರಿದ್ದು, ಲಕ್ಷಾಂತರ ಸೂಡಾನಿಗಳನ್ನು ಹಸಿವಿನ ಅಂಚಿಗೆ ತಳ್ಳಬಹುದಾದ ಮಟ್ಟಕ್ಕೆ ಹಣದುಬ್ಬರದ ಉಲ್ಬಣವಾಗುತ್ತಿರುವುದು ಆತಂಕ ಮೂಡಿಸಿದೆ. ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸುಡಾನ್‌ನ ಅರ್ಥಶಾಸ್ತ್ರಜ್ಞ ಮೊಹಮದ್ ನೂರೆದ್ದೀನ್ ಹಾಶಿಮ್, ದೇಶದ ಪ್ರಮುಖ ಆಹಾರ ತಯಾರಿಕಾ ಕಾರ್ಖಾನೆಗಳು ಮತ್ತು ಆಮದು ಕಂಪನಿಗಳು ಖಾರ್ಟೂಮ್‌ನಲ್ಲಿವೆ. ಆದರೆ ಆ ಕಾರ್ಖಾನೆಗಳಲ್ಲಿ ಹೆಚ್ಚಿನವು ಈಗ ಧ್ವಂಸಗೊಂಡು ಮುಚ್ಚಲ್ಪಟ್ಟಿವೆ ಎಂದು ಹೇಳಿದರು.

ಯುದ್ಧದ ಕಾರಣದಿಂದಾಗಿ ಲಕ್ಷಾಂತರ ಉದ್ಯೋಗಿಗಳು ಪ್ರಸ್ತುತ ಕೆಲಸ ಮಾಡಲು ಸಾಧ್ಯವಾಗದ ಕಾರಣದಿಂದ ತುರ್ತು ಸಹಾಯದ ಅಗತ್ಯವಿರುವ ನಾಗರಿಕರ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅತ್ಯಾವಶ್ಯಕ ಸರಕುಗಳ ಬೆಲೆಗಳು ವಿಪರೀತವಾಗಿ ಹೆಚ್ಚಾಗಿವೆ ಮತ್ತು ಗೋಧಿ ಹಿಟ್ಟು, ಎಣ್ಣೆ ಮತ್ತು ಟೊಮೆಟೊ ಪೇಸ್ಟ್‌ನಂತಹ ಆಮದು ಮಾಡಿಕೊಳ್ಳುವ ಸರಕುಗಳ ಕೊರತೆ ಎದುರಾಗಿದೆ ಎಂದು ಮರ್ಸಿ ಕಾರ್ಪ್ಸ್‌ನ ವರದಿಯನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಹೇಳಿದೆ. ಕೆಲವು ಪ್ರದೇಶಗಳಲ್ಲಿ, ಅಭದ್ರತೆ ಅಥವಾ ಸರಕುಗಳ ಕೊರತೆಯಿಂದಾಗಿ ಅಂಗಡಿಗಳು ಮುಚ್ಚಲ್ಪಟ್ಟಿವೆ. ಖಾರ್ಟೂಮ್ ಮತ್ತು ಸೌತ್ ಡಾರ್ಫೂರ್ನಲ್ಲಿ ನಗದು ಲಭ್ಯತೆಗೆ ಅಡ್ಡಿಯಾಗಿದೆ. ಇಂಧನ ಬೆಲೆಗಳು ಮತ್ತು ಸಾರಿಗೆ ವೆಚ್ಚಗಳ ಹೆಚ್ಚಳವು ದೈನಂದಿನ ಜೀವನ ಮತ್ತು ಅಸುರಕ್ಷಿತ ಪ್ರದೇಶಗಳಿಂದ ಜನರ ಪ್ರಯಾಣಿಸುವ ಸಾಮರ್ಥ್ಯ ಎರಡಕ್ಕೂ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ವಿದ್ಯುತ್ ನಿಗಮದ ಪ್ರಕಾರ, ಬ್ಯಾಂಕ್ ಅಪ್ಲಿಕೇಶನ್‌ಗಳು ಅಥವಾ ನೇರ ಮಾರಾಟದ ಮೂಲಗಳ ಮೂಲಕ ವಿದ್ಯುತ್ ಖರೀದಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ಖಾರ್ಟೂಮ್‌ನ ನಿವಾಸಿಗಳು ದೀರ್ಘಕಾಲದವರೆಗೆ ಆಗಾಗ್ಗೆ ವಿದ್ಯುತ್ ಕಡಿತ ಎದುರಿಸಬೇಕಾಗಿದೆ. ಉತ್ತರ ಭಾಗದ ಅಲ್ ಶಬಿಯಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು. ಕೆಲವು ನಿವಾಸಿಗಳು ಜನರೇಟರ್‌ಗಳಂತಹ ಇತರ ಪರ್ಯಾಯ ಇಂಧನ ಮೂಲಗಳನ್ನು ಬಳಸಲು ಯತ್ನಿಸಿದರೂ ಇಂಧನ ಕೊರತೆಯಿಂದಾಗಿ ಅದೂ ಕೂಡ ಸಾಧ್ಯವಾಗುತ್ತಿಲ್ಲ. ವಿದ್ಯುತ್ ವ್ಯತ್ಯಯದಿಂದ ನೀರು ಪೂರೈಕೆಗೂ ವ್ಯತ್ಯಯ ಉಂಟಾಗಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆಯ ಅಡ್ಡಿಯು ದೇಶದಲ್ಲಿ ಕಳವಳ ಉಂಟುಮಾಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತವಾಗಲಿದೆ ಎಂದು ವೀಕ್ಷಕರು ಹೇಳಿದ್ದಾರೆ.

ಇದನ್ನೂ ಓದಿ : ಅಫ್ಘಾನಿಸ್ತಾನದ ನೂತನ ಹಂಗಾಮಿ ಪ್ರಧಾನಿಯಾಗಿ ಮೌಲಾವಿ ಅಬ್ದುಲ್ ಕಬೀರ್ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.