ETV Bharat / international

ಹಮಾಸ್​ನ ಕೃತ್ಯ ಭಯಾನಕ, ಪ್ಯಾಲೆಸ್ಟೈನ್​ ಮೇಲಿನ ದಾಳಿ ಖಂಡನೀಯ: ಬರಾಕ್ ಒಬಾಮಾ

Barack Obama reaction on Israel-Hamas war: ಇಸ್ರೇಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮಾತನಾಡಿದ್ದಾರೆ.

'What Hamas did was horrific, what's happening to Palestinians is unbearable

author img

By ETV Bharat Karnataka Team

Published : Nov 5, 2023, 1:45 PM IST

Updated : Nov 5, 2023, 2:30 PM IST

ವಾಷಿಂಗ್ಟನ್: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಎರಡೂ ಕಡೆಗಳಿಂದ ನಡೆಯುತ್ತಿರುವ ಹಿಂಸಾಚಾರದ ಕೃತ್ಯಗಳನ್ನು ಸಮಾನವಾಗಿ ಖಂಡಿಸಿದ್ದಾರೆ. ತಮ್ಮ ಮಾಜಿ ಸಿಬ್ಬಂದಿ 'Pod Save America' ಸಂಸ್ಥೆಗಾಗಿ ನಡೆಸಿದ ಪಾಡ್​ಕಾಸ್ಟ್​ನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ - ಹಮಾಸ್ ಸಮಸ್ಯೆ ನೂರು ವರ್ಷ ಹಳೆಯದಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಿವೆ ಮತ್ತು ದ್ವೇಷ ಹೆಚ್ಚಿಸುತ್ತಿವೆ ಎಂದು ಅವರು ಹೇಳಿದ್ದಾರೆ.

"ಈ ವಿಷಯದಲ್ಲಿ ನಾನು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಈ ಸಮಸ್ಯೆಯ ನಿವಾರಣೆಗೆ ನಾನು ಮತ್ತೇನು ಮಾಡಬಹುದಿತ್ತು ಎಂದು ಪ್ರಶ್ನಿಸಿಕೊಳ್ಳುತ್ತೇನೆ. ನಾನು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ನಿಜವಾದರೂ, ಅವುಗಳೆಲ್ಲದರ ಹೊರತಾಗಿ ನಾನು ಮತ್ತೇನೋ ಮಾಡಬಹುದಿತ್ತಾ ಎಂದು ನನ್ನ ಮನಸ್ಸು ನನಗೆ ಕೇಳುತ್ತಿರುತ್ತದೆ" ಎಂದು ಒಬಾಮಾ ಪಾಡ್​ಕಾಸ್ಟ್​ನಲ್ಲಿ ತಿಳಿಸಿದ್ದಾರೆ.

ಚಿಕಾಗೊದಲ್ಲಿ ಶುಕ್ರವಾರ ತಮ್ಮ ಮಾಜಿ ಸಿಬ್ಬಂದಿಗಳನ್ನು ಒಳಗೊಂಡ ಗುಂಪಿನೊಂದಿಗೆ ಸಂವಾದ ನಡೆಸಿದ ಅವರು, ಇಸ್ರೇಲ್-ಗಾಜಾ ಯುದ್ಧದ ಬಗ್ಗೆ ವಿವರವಾದ ವಿಶ್ಲೇಷಣೆ ಮಾಡಿದರು. ನಡೆಯುತ್ತಿರುವ ಹಿಂಸಾಚಾರದಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

"ಹಮಾಸ್​ನ ಕೃತ್ಯ ಅತ್ಯಂತ ಕ್ರೂರತನದಿಂದ ಕೂಡಿದ್ದು ಅದನ್ನು ಯಾರೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಆಕ್ರಮಣ ಮತ್ತು ಸದ್ಯ ಪ್ಯಾಲೆಸ್ಟೈನಿಯನ್ನರ ಮೇಲೆ ಏನು ನಡೆಯುತ್ತಿದೆ ಅದು ಖಂಡನೀಯ ಎಂಬುದು ಸಹ ವಾಸ್ತವ" ಎಂದು ಹೇಳಿದರು. "ಇನ್ನು ಯಹೂದಿಗಳ ಇತಿಹಾಸದ ಬಗ್ಗೆ ನಿಮ್ಮ ಅಜ್ಜ, ಅಜ್ಜಿ ಅಥವಾ ಮತ್ತಾರೋ ನಿಮಗೆ ಹೇಳದಿದ್ದರೆ ಅವರ ವಿರುದ್ಧ ನಡೆದ ಕೃತ್ಯಗಳ ಬಗ್ಗೆ ನಿಮಗೆ ಗೊತ್ತಾಗುವುದೇ ಇಲ್ಲ. ಆದರೆ ಈಗ ಹಮಾಸ್​ ಮಾಡಿದ್ದಕ್ಕೆ ಇನ್ನಾರೋ ಸಾಯುತ್ತಿದ್ದಾರೆ. ಹಮಾಸ್​ಗೂ ಅವರಿಗೂ ಸಂಬಂಧವೇ ಇಲ್ಲ" ಎಂದು ಒಬಾಮಾ ನುಡಿದರು.

ನಾನು ಈಗ ಏನೇ ಹೇಳುತ್ತಿದ್ದರೂ ಮಕ್ಕಳ ಸಾವನ್ನು ತಡೆಗಟ್ಟುವುದು ಹೇಗೆಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಎಂದು ಹೇಳಿದ ಒಬಾಮಾ, ಈ ವಿಷಯದಲ್ಲಿ ಸತ್ಯ ವಿಷಯಗಳನ್ನು ಜಗತ್ತಿನ ಮುಂದೆ ತೆರೆದಿಡುವಂತೆ ಮತ್ತು ಸಮತೋಲನ ಸಾಧಿಸುವಂತೆ ತಮ್ಮ ಮಾಜಿ ಸಿಬ್ಬಂದಿಗೆ ಕರೆ ನೀಡಿದರು. ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ನಂತರ ಗಾಜಾದಲ್ಲಿನ ಸಂಘರ್ಷ ಉಲ್ಬಣಗೊಂಡಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೆ 10 ಬಸ್​ಗಳಿಗೆ ಬೆಂಕಿ; ಮಾಜಿ ಗೃಹ ಸಚಿವನ ಬಂಧನ

Last Updated : Nov 5, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.