ದುಬೈ: ವಿಪರೀತ ಹವಾಮಾನ ಮತ್ತು ಅಪಾಯದ ಪರಿಸರ ಬದಲಾವಣೆಗಳ ಪರಿಣಾಮದಿಂದ ಹೆಚ್ಚಿನ ಜೀವ ರಕ್ಷಣೆ ಮಾಡಲಾಗುತ್ತಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನೂ ಸಾಗಬೇಕಿದೆ. ಜಾಗತಿಕವಾಗಿ ಅರ್ಧದಷ್ಟು ಹೆಚ್ಚಿನ ದೇಶಗಳು ಬಹು ಅಪಾಯದ ಮುನ್ಸೂಚನೆಯ ಎಚ್ಚರಿಕೆ ವ್ಯವಸ್ಥೆಯನ್ನು ಇನ್ನೂ ಹೊಂದಿಲ್ಲ ಎಂದು ವರದಿ ತಿಳಿಸಿದೆ.
ಯುನೈಟೆಡ್ ನೇಷನ್ ಆಫೀಸ್ ಫಾರ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ (ಯುಎನ್ಡಿಆರ್ಆರ್) ಮತ್ತು ವಿಶ್ವ ಹವಾಮಾನ ಸಂಘಟನೆ (ಡಬ್ಲ್ಯೂಎಂಒ) ಈ ಕುರಿತು ಪ್ರಕಟಿಸಲಾಗಿದೆ. ಆಫ್ರಿಲಾ ಅಪಾಯದ ಮುನ್ಸೂಚನೆಯ ವ್ಯವಸ್ಥೆಯ ಕವರೇಜ್ನ ಗುಣಮಟ್ಟವನ್ನು ದುಪ್ಪಟ್ಟು ಮಾಡಿದೆ. ಆದರೆ ಜಾಗತಿಕ ಸರಾಸರಿಯಲ್ಲಿ ಅದು ಇನ್ನೂ ಹಿಂದೆಯೇ ಉಳಿದಿದೆ.
ಕಡಿಮೆ ಅಭಿವೃದ್ಧಿ ಹೊಂದಿರುವ ಅರ್ಧದಷ್ಟು ದೇಶ ಮತ್ತು ಶೇ 40ರಷ್ಟು ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪಗಳು ಬಹು ಅಪಾಯದ ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದೆ. ಅರಬ್ ರಾಜ್ಯದಲ್ಲಿ ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆ ಕಡಿಮೆ ಇದೆ.
2023 ಬಹು ಅಪಾಯದ ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆಯ ಜಾಗತಿಕ ಪರಿಸ್ಥಿತಿ 2023ರ ವರದಿ 2027 ರ ವೇಳೆಗೆ ಎಲ್ಲರನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಎಲ್ಲಾ ಉಪಕ್ರಮಕ್ಕಾಗಿ ಆರಂಭಿಕ ಎಚ್ಚರಿಕೆಗಳ ವರದಿ ವಿಶ್ಲೇಷಿಸಿದೆ.
ಸಿಒಪಿ28 ಹವಾಮಾನ ಶೃಂಗಸಭೆಯಲ್ಲಿ ಇದನ್ನು ಉದ್ಘಾಟಿಸಲಾಗಿದೆ. ವರದಿಗಳು ತಿಳಿಸಿರುವಂತೆ 101 ದೇಶಗಳು ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆಯ ವರದಿಯನ್ನು ಹೊಂದಿವೆ.
ಹವಾಮಾನದ ಕೆಟ್ಟ ಪರಿಣಾಮದಿಂದಾಗಿ ದುರ್ಬಲ ಸಮುದಾಯವನ್ನು ಈ ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆ ಮೂಲಕ ರಕ್ಷಣೆ ಮಾಡುವ ಎಲ್ಲಾ ಕ್ರಮವನ್ನು ಹೊಂದಬೇಕು. ಇದು ನಮ್ಮ ಗುರಿಯಾಗಿದ್ದು, ಇದನ್ನು ಸಾಧಿಸಲು ಸಾಧ್ಯ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟ್ಟೆರಸೋ ತಿಳಿಸಿದ್ದಾರೆ. ಅಲ್ಲದೇ 2024ರಲ್ಲಿ ದೇಶಗಳು ಇದರ ವೇಗವನ್ನು ಮತ್ತು ಬೆಂಬಲವನ್ನು ದುಪ್ಪಟ್ಟು ಮಾಡಲು ಕರೆ ನೀಡಿದ್ದಾರೆ.
ಕಡಿಮೆ ಅಭಿವೃದ್ಧಿ ಹೊಂದಿರುವ 400 ಮಿಲಿಯನ್ ಜನರಿಗೆ ಮತ್ತು ಸಣ್ಣ ದ್ವೀಪದ ಅಭಿವೃದ್ಧಿ ರಾಜ್ಯಗಳು ಇದೀಗ ಪ್ರವಾಹ, ಬರ, ಶಾಖದ ಅಲೆ ಮತ್ತು ಚಂಡಮಾರುತಗಳ ಮನ್ಸೂಚನೆಯ ಎಚ್ಚರಿಕೆಯನ್ನು ನೀಡುತ್ತಿದೆ. ಇತ್ತೀಚೆಗೆ ಪಪುವಾ ನ್ಯೂ ಗಿನಿಯಾ ಮತ್ತು ಬುರ್ಕಿನಾ ಫಾಸೊ ಸಣ್ಣ ರೈತರಿಗೆ ಬರದ ಕುರಿತು ಋತುಮಾನದ ಮುನ್ಸೂಚನೆ ನೀಡಿದೆ. ಹವಾಮಾನ ಅಪಾಯ ಮತ್ತು ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆಯ ಕ್ರಮಕ್ಕೆ ಅನೇಕ ಮಹಿಳೆಯರು ಧನ್ಯವಾದ ಅರ್ಪಿಸಿದ್ದಾರೆ.
ಫ್ರಾನ್ಸ್ ಪ್ರತಿ ವರ್ಷ 8 ಮಿಲಿಯನ್ ಜನರಿಗೆ ಹವಾಮಾನ ಅಪಾಯ ಮತ್ತು ಮುನ್ಸೂಚನೆ ಎಚ್ಚರಿಕೆ ವ್ಯವಸ್ಥೆಯ ಕ್ರಮ ಸೂಚನೆ ಒದಗಿಸುತ್ತಿದೆ. ಬರುವ ವರ್ಷದಲ್ಲಿ ಇದನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದೆ. (ಐಎಎನ್ಎಸ್)
ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳ ಒಪ್ಪಂದ: ವಿಶ್ವಸಂಸ್ಥೆಯ ಪ್ರಸ್ತಾಪಕ್ಕೆ ಸಹಿ ಹಾಕದ ಭಾರತ, ಚೀನಾ