ETV Bharat / international

ಹಿಜಾಬ್ ವಿರೋಧಿಸಿದ ಯುವತಿ ಹದಿಸ್ ನಜಾಫಿಗೆ ಗುಂಡಿಕ್ಕಿ ಕೊಲೆ

ಕಳೆದ ಒಂದು ವಾರದಿಂದ ಇರಾನ್​ನಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಸರಿಯಾಗಿ ಹಿಜಾಬ್ ಧರಿಸದ ಕಾರಣದಿಂದ ಬಂಧಿಸಲ್ಪಟ್ಟಿದ್ದ 22 ವರ್ಷದ ಯುವತಿ ಮಹ್ಸಾ ಅಮೀನಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಮೃತಪಟ್ಟ ನಂತರ ದೇಶಾದ್ಯಂತ ಸರ್ಕಾರ ವಿರೋಧಿ ಗಲಭೆಗಳು ಭುಗಿಲೆದ್ದಿವೆ.

author img

By

Published : Sep 28, 2022, 1:29 PM IST

Hadis Najafi
ಹಿಜಾಬ್ ವಿರೋಧಿಸಿದ ಯುವತಿ ಹದಿಸ್ ನಜಾಫಿ

ಟೆಹ್ರಾನ್ (ಇರಾನ್): ತಲೆಗೆ ಸ್ಕಾರ್ಫ್ ಕಟ್ಟದೆ ಹಿಂದೆ ಕಟ್ಟಿದ ತಲೆಗೂದಲು ಇಳಿಬಿಟ್ಟು ಅತ್ಯಂತ ಧೈರ್ಯದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇರಾನಿನ ಯುವತಿ ಹದಿಸ್ ನಜಾಫಿಯ ವಿಡಿಯೋ ವೈರಲ್ ಆಗಿತ್ತು. ಇರಾನ್​ನಲ್ಲಿ ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇವರು ಭಾಗವಹಿಸಿದ್ದರು. ಆದರೆ ಸದ್ಯ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಸ್ಮಶಾನದಲ್ಲಿ ತೋಡಿದ ಗುಂಡಿಯ ಎದುರು ಯುವತಿಯ ಪೋಟೋ ಇಟ್ಟು ಅದರ ಮುಂದೆ ಹಲವಾರು ಜನ ರೋದಿಸುತ್ತಿರುವ ಚಿತ್ರ ಈಗ ಇಂಟರ್​ನೆಟ್​​ನಲ್ಲಿ ಕಾಣಿಸಿಕೊಂಡಿದೆ. ಯುವತಿಯ ಹೊಟ್ಟೆ, ಕುತ್ತಿಗೆ, ಎದೆ ಮತ್ತು ಕೈಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎನ್ನಲಾಗ್ತಿದೆ.

A photo said to be of the funeral of young woman Hadith Najafi
ಯುವತಿ ಹದಿಸ್ ನಜಾಫಿ ಅಂತ್ಯ ಸಂಸ್ಕಾರದ್ದೆಂದು ಹೇಳಲಾದ ಫೋಟೊ

ಕಳೆದ ಒಂದು ವಾರದಿಂದ ಇರಾನ್​ನಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಸರಿಯಾಗಿ ಹಿಜಾಬ್ ಧರಿಸದ ಕಾರಣದಿಂದ ಬಂಧಿಸಲ್ಪಟ್ಟಿದ್ದ 22 ವರ್ಷದ ಯುವತಿ ಮಹ್ಸಾ ಅಮೀನಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಮೃತಪಟ್ಟ ನಂತರ ದೇಶಾದ್ಯಂತ ಸರ್ಕಾರ ವಿರೋಧಿ ಗಲಭೆಗಳು ಭುಗಿಲೆದ್ದಿವೆ. ಈ ವಾರಾಂತ್ಯದಲ್ಲಿ ನೂರಾರು ಜನರು ಮಹ್ಸಾ ಅಮೀನಿಯ ಸಾವಿನ ವಿರುದ್ಧ ಲಂಡನ್‌ನಲ್ಲಿ ಕೂಡ ಪ್ರತಿಭಟನೆ ನಡೆಸಿದ್ದಾರೆ. ಅಮೀನಿ ಸೆಪ್ಟೆಂಬರ್ 16 ರಂದು ನಿಧನರಾಗಿದ್ದರು.

Violence against women by Iranian police
ಮಹಿಳೆಯರ ಮೇಲೆ ಇರಾನ್ ಪೊಲೀಸರ ದೌರ್ಜನ್ಯ

1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನಲ್ಲಿ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಧರಿಸಬೇಕು. ಆದರೆ ಈ ಕಾನೂನು ಹೆಚ್ಚು ಜನಪ್ರಿಯವಾಗಿಲ್ಲ. ಇರಾನಿನ ಮಹಿಳೆಯರು ಸಾಮಾನ್ಯವಾಗಿ ತಲೆಗೆ ಸ್ಕಾರ್ಫ್ ಅನ್ನು ತಮ್ಮ ಕಿವಿಯ ಸುತ್ತಲೂ ಸಡಿಲವಾಗಿ ಧರಿಸುತ್ತಾರೆ.

ಕಳೆದ ವಾರ ಇರಾನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 35 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಬಹುತೇಕರು ಪೊಲೀಸರ ಹಿಂಸಾತ್ಮಕ ದೌರ್ಜನ್ಯದಿಂದ ಸಾವಿಗೀಡಾಗಿದ್ದಾರೆ. ಕಡ್ಡಾಯ ಹಿಜಾಬ್‌ನಂತಹ ಇರಾನ್‌ನ ಅನೇಕ ನೀತಿಗಳು ಇರಾನಿನ ಬಹಳಷ್ಟು ಜನರಿಗೆ ಇಷ್ಟವಾಗಿಲ್ಲ.

ಇದನ್ನೂ ಓದಿ: ಕರ್ನಾಟಕದಿಂದ ಇರಾನ್‌ವರೆಗೆ...: ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್‌ ವಿರೋಧಿಸಿ ಮಹಿಳೆಯರ ಒಕ್ಕೊರಲ ಧ್ವನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.