ETV Bharat / international

ಭಾರತದ ಡಿಜಿಟಲೀಕರಣದಲ್ಲಿ 'Google' 10 ಬಿಲಿಯನ್ ಹೂಡಿಕೆ ಮಾಡಲಿದೆ: ಸಿಇಒ ಸುಂದರ್ ಪಿಚೈ - ಸುಂದರ್ ಪಿಚೈ

PM Modi US Visit: ಐತಿಹಾಸಿಕ ಯುಎಸ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ಸಂತಸವಾಗಿದೆ. ಈ ವೇಳೆ ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ನಾವು ಪ್ರಧಾನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

Google CEO Sundar Pichai
Google CEO Sundar Pichai
author img

By

Published : Jun 24, 2023, 7:42 AM IST

ವಾಷಿಂಗ್ಟನ್ ಡಿಸಿ: (ಅಮೆರಿಕ): ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್​ 10 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಶುಕ್ರವಾರ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಪಿಚೈ "ಐತಿಹಾಸಿಕ ಅಮೆರಿಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ಸಂತಸವಾಗಿದೆ. ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ನಾವು ಪ್ರಧಾನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ. ಡಿಜಿಟಲ್ ಇಂಡಿಯಾ ಇತರ ದೇಶಗಳಿಗೆ ಬ್ಲೂಪ್ರಿಂಟ್ ಆಗಿ ಕಾರ್ಯನಿರ್ವಹಿಸುತ್ತದೆ" ಎಂದು ಪಿಚೈ ಇದೇ ವೇಳೆ ಗುಣಗಾನ ಮಾಡಿದರು.

ಗುಜರಾತ್​ನಲ್ಲಿ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರ:"ನಾವು ಇಂದು ನಮ್ಮ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗಿಫ್ಟ್ ಸಿಟಿ(Gujarat International Finance Tec-City)ಗುಜರಾತ್‌ನಲ್ಲಿ ತೆರೆಯುವುದಾಗಿ ಘೋಷಿಸುತ್ತಿದ್ದೇವೆ ಎಂದು ಹೇಳಲು ಉತ್ಸುಕರಾಗಿದ್ದೇವೆ. ಭಾರತದಲ್ಲಿ ಗಮನಾರ್ಹವಾಗಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯು ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ವ್ಯಾಪಾರ ಕೇಂದ್ರವಾಗಿದೆ. ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಧಾನಿಯವರ ಹೊಂದಿರುವ ದೃಷ್ಟಿಕೋನ ಶ್ಲಾಘನೀಯ. ಈಗ ನಾನು ಅದನ್ನು ಇತರ ದೇಶಗಳು ಅನುಸರಿಸಬಹುದಾದ ನೀಲನಕ್ಷೆಯಾಗಿ ನೋಡುತ್ತೇನೆ" ಎಂದು ಪಿಚೈ ಹೇಳಿದರು.

  • #WATCH | Google CEO Sundar Pichai after meeting PM Modi, says "It was an honour to meet PM Modi during the historic visit to the US. We shared with the Prime Minister that Google is investing $10 billion in India's digitisation fund. We are announcing the opening of our global… pic.twitter.com/ri42wI3Adv

    — ANI (@ANI) June 23, 2023 " class="align-text-top noRightClick twitterSection" data=" ">

2004ರಲ್ಲಿ ಗೂಗಲ್‌ಗೆ ಸೇರಿದ್ದ ಪಿಚೈ, 2015ರಲ್ಲಿ ಕಂಪನಿಯ ಸಿಇಒ ಆದರು. ಸಿಇಒ ಆಗಿ ನೇಮಕಗೊಂಡಿದ್ದಕ್ಕೆ ಪಿಚೈ ಅವರನ್ನು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು. ಸುಂದರ್ ಪಿಚೈ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ಮೋದಿ ನಾಯಕತ್ವದಲ್ಲಿ ಭಾರತ ತ್ವರಿತವಾಗಿ ತಾಂತ್ರಿಕ ಬದಲಾವಣೆ ಕಾಣುತ್ತಿದ್ದು, ನೋಡಲು ಸ್ಫೂರ್ತಿದಾಯಕವಾಗಿದೆ ಎಂದು ಪಿಚ್ಚೈ ಹೇಳಿದ್ದಾರೆ.

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಆಗಿರುವ ಪಿಚೈ ಅವರು, ಭಾರತದೊಂದಿಗೆ ದೊಡ್ಡ ಪಾಲುದಾರಿಕೆ ಮುಂದುವರಿಸಲು ಮತ್ತು ಎಲ್ಲರಿಗೂ ಕೆಲಸ ಮಾಡುವ ಮುಕ್ತ ಇಂಟರ್ನೆಟ್ ಅನ್ನು ಕಲ್ಪಿಸಲು, ಹಾಗೂ ಭಾರತದ ಜಿ 20 ನಾಯಕತ್ವವನ್ನು ಬೆಂಬಲಿಸಲು ಇಚ್ಚಿಸುತ್ತೇನೆ ಎಂದು ಸುಂದರ್​ ಪಿಚ್ಚೈ ಹೇಳಿದರು. ಕಳೆದ ವರ್ಷ ಭಾರತ ಭೇಟಿಯ ಸಂದರ್ಭದಲ್ಲಿ ಪಿಚೈ ಅವರು ಗೂಗಲ್ ಫಾರ್ ಇಂಡಿಯಾ ಈವೆಂಟ್‌ನ 8ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆಯಲ್ಲಿ ಹಾಜರಿದ್ದರು.

ನಾವು ಡಿಜಿಟಲಿಕರಣಕ್ಕಾಗಿ ಮುಂದಿನ ದಿನಗಳಲ್ಲಿ 10 ಶತಕೋಟಿ ಡಾಲರ್​ ಹೂಡಿಕೆ ಮಾಡುತ್ತೇವೆ. ಎಐ ಮಾದರಿಯು ಭಾಷಣ ಮತ್ತು ಪಠ್ಯದಂತಹ 100 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಪಂಚದ 1,000 ಹೆಚ್ಚು ಮಾತನಾಡುವ ಭಾಷೆಗಳನ್ನು ಆನ್‌ಲೈನ್‌ಗೆ ತರಲು ಮತ್ತು ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಜ್ಞಾನ ಮತ್ತು ಮಾಹಿತಿಯನ್ನು ಪ್ರವೇಶಿಸಲು ಸಹಾಯ ಮಾಡಲು ನಾವು ಅಣಿಯಾಗಿದ್ದೇವೆ. ಐಐಟಿ ಮದ್ರಾಸ್‌ನೊಂದಿಗೆ ಜವಾಬ್ದಾರಿಯುತ ಹೊಸ ಎಐಗಾಗಿ ಕೇಂದ್ರವನ್ನು ನಾವು ಸಹ ಬೆಂಬಲಿಸುತ್ತೇವೆ ಎಂದು ಪಿಚೈ ಇದೇ ವೇಳೆ ಹೇಳಿದರು.

ಪ್ರಾಜೆಕ್ಟ್ ರಿಲೇಟ್- ಹಿಂದಿ ಬಳಕೆದಾರರಿಗೆ ಅಪ್ಲಿಕೇಶನ್ ಲಭ್ಯ: ಮುಖ್ಯವಾಗಿ ಪ್ರಾಜೆಕ್ಟ್ ರಿಲೇಟ್ ಎಂಬುದು ಬೈನರಿ ಅಲ್ಲದ ಭಾಷಣ ಕಲೆಯನ್ನು ಅರ್ಥಮಾಡಿಕೊಳ್ಳುವ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಷನ್​ ಮೂಲಕ ಕೇಳಬಹುದು, ಪುನರಾವರ್ತಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. 2023ರ ಆರಂಭದಲ್ಲಿ ಹಿಂದಿ ಬಳಕೆದಾರರಿಗೆ ಈ ಅಪ್ಲಿಕೇಶನ್ ಲಭ್ಯವಿರುತ್ತದೆ. ಹುಡುಕಾಟದ ಫಲಿತಾಂಶ ಬಯಸುವವರಿಗೆ ಈ ಆ್ಯಪ್​ ದ್ವಿಭಾಷಿಯಾಗಿ ಕೆಲಸ ಮಾಡುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಹಿಂದಿಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಲಿಯಲ್ಲಿ ಈ ಆ್ಯಪ ಗ್ರಾಹಕರಿಗೆ ಲಭ್ಯವಾಗಲಿದೆ. ಧ್ವನಿ ಹುಡುಕಾಟದ ಈ ಆ್ಯಪ್​ನಲ್ಲಿ ಹಿಂಗ್ಲಿಷ್ ಮಾತನಾಡುವ ಜನರು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಪಿಚ್ಚೈ ಇದೇ ವೇಳೆ ತಮ್ಮ ಹೊಸ ಆ್ಯಪ್​​​ನ ಬಗ್ಗೆ ಮಾಹಿತಿ ನೀಡಿದರು.

ಅಮೆರಿಕ ಪ್ರವಾಸದಲ್ಲಿದ್ದ ಮೋದಿ ಅವರು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮತ್ತು ಅಮೆಜಾನ್‌ನ ಸಿಇಒಗಳಾದ ಆಂಡ್ರ್ಯೂ ಜಾಸ್ಸಿ ಮತ್ತು ಬೋಯಿಂಗ್ ಡೇವಿಡ್ ಎಲ್ ಕ್ಯಾಲ್ಹೌನ್ ಅವರನ್ನು ವಾಷಿಂಗ್ಟನ್, ಡಿಸಿಯಲ್ಲಿ ಭೇಟಿ ಮಾಡಿ, ವ್ಯಾಪಾರೋದ್ಯಮದ ಬಗ್ಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: ನನಗೆ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ: ​ಅಮೆರಿಕ ಸಂಸದ ಕನ್ನಡಿಗ ಶ್ರೀ ಥಾನೇದಾರ್ ಸಂತಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.