ಬೆಂಗಳೂರು: ಕ್ರಿಶ್ಚಿಯನ್ನರ ಪ್ರಮುಖ ದಿನಗಳಲ್ಲಿ ಒಂದು ಗುಡ್ ಫ್ರೈಡೆ (ಶುಭ ಶುಕ್ರವಾರ). ಪ್ರತಿ ವರ್ಷ ಈಸ್ಟರ್ಗೆ ಮುನ್ನ ದಿನದ ಶುಕ್ರವಾರವನ್ನು ಗುಡ್ ಫ್ರೈಡೆಯಾಗಿ ಆಚರಿಸಲಾಗುವುದು. ಈ ದಿನ ಕ್ರಿಶ್ಚಿಯನ್ನರಿಗೆ ನೋವಿನ ದಿನ. ಕಾರಣ ಈ ದಿನದಂದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ದಿನವನ್ನು ಕ್ರಿಶ್ಚಿಯನ್ನರು ಉಪವಾಸ, ದುಃಖ, ಶೋಕ, ತ್ಯಾಗದ ದಿನವಾಗಿ ಆಚರಿಸುತ್ತಾರೆ ಎಂದು ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ತಿಳಿಸುತ್ತದೆ.
ಗುಡ್ ಫ್ರೈಡೆ ದಿನ ನಿಗದಿ: ಮ್ಯಾಥ್ಯೂ, ಮಾರ್ಕ್ ಮತ್ತು ಲ್ಯೂಕ್ ಪ್ರಕಾರ ಸುವಾರ್ತೆಗಳ ಪ್ರಕಾರ, ಯೇಸುವನ್ನು ಶಿಲುಬೆಗೇರಿಸುವ ಮುನ್ನ ಆತ ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡುತ್ತಾನೆ. ಇದನ್ನು ಪಾಸ್ ಓವರ್ ಸೆಡರ್ ಎನ್ನುತ್ತಾರೆ. ಈ ಪಾಸ್ ಓವರ್ ಸೆಡರ್ ಅನ್ನು ಈಜಿಪ್ಟ್ನಿಂದ ಹೀಬ್ರೂಗಳ ವಿಮೋಚನೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನ ಮರಣವು ಯಹೂದಿ ಕ್ಯಾಲೆಂಡರ್ ನಿಸಾನ್ನ 15ನೇ ತಾರೀಖು ಅಥವಾ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ 7ರಂದು ಬರುತ್ತದೆ.
ಜಾನ್ ಪ್ರಕಾರ, ಯೇಸು ಅಂತಿಮ ಭೋಜನ ವೇಳೆ ಪಾಸೋವರ್ ಆರಂಭವಾಗಿರಲಿಲ್ಲ. ಇದನ್ನು ನಿಗದಿತ ದಿನಾಂಕಕ್ಕೆ ಸ್ಮರಿಸುವ ಬದಲು ಪಾಸೋವರ್ ಹೊಂದಿಕೊಳ್ಳುವ ದಿನಾಂಕಕ್ಕೆ ಅನುಸರಿಸುತ್ತಾರೆ. ಕಡೆಯ ಭೋಜನವನ್ನು ಪಾಸೋವರ್ ಸೆಡರ್ಗೆ ತಳುಕು ಹಾಕುತ್ತಾರೆ. ಆದ್ದರಿಂದ ಈ ಗುಡ್ ಪ್ರೈಡೆಯನ್ನು ಮಾರ್ಚ್ 20 ಮತ್ತು ಏಪ್ರಿಲ್ 23 ರ ನಡುವೆ ಆಚರಿಸಲಾಗುತ್ತದೆ. ಗುಡ್ ಫ್ರೈಡೆ ನಂತರದ ಭಾನುವಾರದಂದು ಯೇಸು ಪುನರ್ಜೀವನ ಪಡೆದನು ಎಂದು ನಂಬಲಾಗಿದೆ. ಇದನ್ನು ಈಸ್ಟರ್ ಎನ್ನಲಾಗುವುದು
ಪ್ರಾರ್ಥನಾ ವಿಧಾನ: ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ, ಈ ದಿನದಂದು ಸಾಮೂಹಿಕವಾಗಿ ಪ್ರಾರ್ಥನೆ ಆಚರಿಸಲಾಗುವುದಿಲ್ಲ, ಆದರೆ, ಪ್ರಾರ್ಥನೆಯನ್ನು ನಡೆಸಲಾಗುತ್ತದೆ. ಶುಭ ಶುಕ್ರವಾರದ ಹ ಹಿಂದಿನ ದಿನ ಮಾಂಡಿ ಗುರುವಾರ ಸಾಮೂಹಿಕವಾಗಿ ಬ್ರೆಡ್ ಮತ್ತು ವೈನ್ ಅನ್ನು ಪವಿತ್ರಗೊಳಿಸಲಾಗುತ್ತದೆ. ಶುಭ ಶುಕ್ರವಾರದ ಪ್ರಾರ್ಥನೆಯ ಪ್ರಕಾರ, ಗಾಸ್ಪೆಲ್ ಪ್ಯಾಷನ್ ನಿರೂಪಣೆ, ಶಿಲುಬೆಯ ಆರಾಧನೆ ಮತ್ತು ಕಮ್ಯುನಿಯನ್ ಪ್ರಮುಖ ಅಂಶಗಳಾಗಿವೆ. ಶುಭ ಶುಕ್ರವಾರವು ಯೇಸುವಿನ ಮರಣ ಮತ್ತು ಈಸ್ಟರ್ ಆತನ ಪುನರುತ್ಥಾನವನ್ನು ಸ್ಮರಿಸುತ್ತದೆ. ಶುಭ ಶುಕ್ರವಾರವನ್ನು ನೋವಿನ ದಿನವಾಗಿ ಆಚರಿಸಿದರೆ, ಈಸ್ಟರ್ ಅನ್ನು ಅಂದರೆ ಭಾನುವಾರವನ್ನು ಸಂತೋಷದ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ಚರ್ಚ್ಗಳಲ್ಲಿ ಗಾಯನಗಳು, ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ
ಈ ದಿನ ವಿಭಿನ್ನ: ಶುಭ ಶುಕ್ರವಾರದ ಪ್ರಾರ್ಥನಾ ಆಚರಣೆಯು ಶತಮಾನಗಳಿಂದ ವಿವಿಧ ಬದಲಾವಣೆಗಳಿಗೆ ಒಳಗಾಗಿವೆ. 20 ನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ರೊಟೆಸ್ಟಾಂಟಿಸಂನಲ್ಲಿ ಧಾರ್ಮಿಕ ಪ್ರಾಧಾನ್ಯತೆಯ ಪುನರುಜ್ಜೀವನದೊಂದಿಗೆ, ಕ್ಯಾಥೊಲಿಕ್ ಆಚರಣೆಯನ್ನು ಅಳವಡಿಸಿಕೊಳ್ಳುಲಾಯಿತು. ಈ ವೇಳೆ ಸಭೆ ಮತ್ತು ಗಾಯನಗಳನ್ನು ಹಾಡುವುದಿಲ್ಲ. ಗುಡ್ ಫ್ರೈಡೇ ಕ್ರಿಸ್ಮಸ್ ಮತ್ತು ಈಸ್ಟರ್ಗಿಂತ ವಿಭಿನ್ನವಾಗಿದೆ. ಕ್ರಿಸ್ಮಸ್ ಮತ್ತು ಈಸ್ಟರ್ ಸಂಭ್ರಮದ ದಿನವಾಗಿ ಆಚರಿಸಿದರೆ, ಗುಡ್ಫ್ರೈಡೆ ಧಾರ್ಮಿಕತೆ ಸಂಪರ್ಕದ ಜೊತೆಗೆ ಆಚರಿಸಲಾಗುವುದು.
ಇದನ್ನೂ ಓದಿ: ಟಿಬೆಟ್ನ ಎರಡನೇ ಬುದ್ಧ ಪದ್ಮ ಸಂಭವ; ಈತನ ಬಗ್ಗೆ ಇದೆ ಕುತೂಹಲದ ಮಾಹಿತಿ!