ETV Bharat / international

ಗಾಜಾದಲ್ಲಿ ಸಾಂಕ್ರಾಮಿಕ ರೋಗ ಭೀತಿ: ಪ್ಯಾಲೆಸ್ಟೈನ್ ಆರೋಗ್ಯ ಸಚಿವರಿಂದ ಎಚ್ಚರಿಕೆ - ಸಾಮಾನ್ಯರ ಬದುಕು ಮೂರಬಟ್ಟೆ

ಯುದ್ಧದಿಂದಾಗಿ ಬಹುತೇಕ ಎಲ್ಲವನ್ನೂ ಕಳೆದುಕೊಂಡಿರುವ ಗಾಜಾದಲ್ಲಿ ಇದೀಗ ಸಾಂಕ್ರಾಮಿಕತೆ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಕಂಡುಬಂದಿದೆ.

Gaza warned of the possible outbreak  of a major epidemic wave

author img

By ETV Bharat Karnataka Team

Published : Oct 25, 2023, 4:08 PM IST

ಗಾಜಾ: ಹಮಾಸ್​ ಉಗ್ರರ ಅಟ್ಟಹಾಸ ಮತ್ತು ಇಸ್ರೇಲ್​ ದಾಳಿಗೆ ನಲುಗಿರುವ ಗಾಜಾ ಪಟ್ಟಿಯ ನಿವಾಸಿಗಳ ಬದುಕು ಶೋಚನೀಯವಾಗಿದೆ. ನೆಲೆ ಹಾಗು ತಮ್ಮವರನ್ನು ಕಳೆದುಕೊಂಡ ಅನೇಕರು ಜೀವ ಉಳಿಸಿಕೊಳ್ಳಲು ಆಶ್ರಯಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಯುದ್ಧದಿಂದಾಗಿ ಎಲ್ಲವನ್ನೂ ಕಳೆದುಕೊಂಡಿರುವ ಗಾಜಾದಲ್ಲಿ ಸಾಂಕ್ರಾಮಿಕ ರೋಗಭೀತಿಯೂ ಶುರುವಾಗಿದೆ. ಪ್ಯಾಲೆಸ್ಟೈನ್ ಆರೋಗ್ಯ ಸಚಿವರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್​ ನಡೆಸುತ್ತಿರುವ ವೈಮಾನಿಕ ದಾಳಿ ಮತ್ತು ಹಮಾಸ್ ಉಗ್ರರ​ ನಿಯಂತ್ರಣದ ಈ ಪ್ರದೇಶದಲ್ಲಿ ಸಾಂಕ್ರಾಮಿಕತೆ ಎದುರಾಗಲಿದೆ ಎಂದಿದ್ದಾರೆ.

ಇಸ್ರೇಲ್-ಹಮಾಸ್​ ಸಂಘರ್ಷದಿಂದ ಒಂದೇ ದಿನದಲ್ಲಿ 3,150 ಮಂದಿ ರೋಗಿಬಾಧೆಗೆ ಸಿಲುಕಿದ್ದಾರೆ ಎಂದು ವರದಿಯಾಗಿರುವುದಾಗಿ ಸಚಿವರ ವಕ್ತಾರ ಅಶ್ರಫ್​​ ಅಲ್​ ಕ್ವೆಡ್ರಾ ಹೇಳಿದ್ದಾರೆ. ಇದರಲ್ಲಿ ಹೆಚ್ಚು ಹಾನಿಗೆ ಒಳಗಾದವರು ಮಕ್ಕಳು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಯುದ್ಧದಿಂದ ಆಶ್ರಯತಾಣದಲ್ಲಿ ಭಾರಿ ಜನ ಸೇರಿದ್ದಾರೆ. ಅಲ್ಲಿ ಶುದ್ದ ಕುಡಿಯುವ ನೀರಿನ ಲಭ್ಯತೆ ಇಲ್ಲ. ಕಳಪೆ ನೈರ್ಮಲ್ಯದಿಂದಾಗಿ ರೋಗಗಳು ಉಲ್ಬಣವಾಗುತ್ತಿವೆ. ಇದನ್ನು ತಡೆಯುವುದು ಸವಾಲಾಗಿದೆ. ಈ ರೋಗಗಳು ಹರಡುವುದನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯಗಳು ತಕ್ಷಣಕ್ಕೆ ಸಹಾಯ ನೀಡಬೇಕಿದೆ. ಗಾಜಾದಲ್ಲಿ ನೀರು, ವಿದ್ಯುಚ್ಛಕ್ತಿ, ನೈರ್ಮಲ್ಯದಂತಹ ಕನಿಷ್ಠ ಸೌಲಭ್ಯಗಳನ್ನು ಪುನರ್‌ನಿರ್ಮಾಣ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಕುಸಿದ ಆರೋಗ್ಯ ವ್ಯವಸ್ಥೆ: ಯುದ್ಧದಿಂದಾಗಿ ಗಾಜಾ ಪಟ್ಟಿಯಲ್ಲಿ ಆಸ್ಪತ್ರೆ ನಿರ್ವಹಣೆಗೆ ಬೇಕಾದ ವಿದ್ಯುತ್ ಸೌಲಭ್ಯಗಳು ಮತ್ತು ಅಗತ್ಯ ಇಂಧನಗಳು ಕಡಿತಗೊಂಡಿದೆ ಎಂದು ಪ್ಯಾಲೆಸ್ಟೈನ್ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್​ ದಾಳಿಯಿಂದಾಗಿ ಇಲ್ಲಿಯವರೆಗೆ 65 ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದು, 25 ಅಂಬ್ಯುಲೆನ್ಸ್​​ ನಾಶವಾಗಿದೆ. ಪ್ಯಾಲೆಸ್ಟೈನ್ ಎನ್‌ಕ್ಲೇವ್‌ನಲ್ಲಿ 12 ಆಸ್ಪತ್ರೆಗಳು ಮತ್ತು 32 ಆರೋಗ್ಯ ಕೇಂದ್ರಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇಂಧನಗಳು ಈಗಾಗಲೇ ಮುಗಿಯುತ್ತಿವೆ. ಮುಂದಿನ ದಿನದಲ್ಲಿ ಈ ಸೇವೆಗಳು ಮತ್ತಷ್ಟು ದುರ್ಬಲವಾಗಲಿದೆ. 32 ಆರೋಗ್ಯ ಕೇಂದ್ರಗಳಲ್ಲಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯ ಅಭಾವವಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಒದಗಿಸಿದ್ದಾರೆ.

ಅಕ್ಟೋಬರ್​ 7ರಂದು ಆರಂಭವಾದ ಯುದ್ದದಿಂದ ಇಲ್ಲಿಯವರೆಗೆ ಗಾಜಾ ಪಟ್ಟಿಯಲ್ಲಿರುವ 5,800 ಪ್ಯಾಲೇಸ್ಟೈನಿಯನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್​ನಲ್ಲಿ 1,400 ಮಂದಿ ಅಸುನೀಗಿದ್ದಾರೆ. ಇಸ್ರೇಲ್​ ರಾಜಧಾನಿ ಟೆಲ್​ ಅವಿವ್‌​ ಗಾಜಾಗೆ ನೀರು, ಆಹಾರ ಮತ್ತು ವಿದ್ಯುಚ್ಚಕ್ತಿ ನಿಲ್ಲಿಸಿದ್ದು, ಗಾಜಾ ಪಟ್ಟಿಯಲ್ಲಿ ಬಿಕ್ಕಟ್ಟು ಎದುರಾಗಿದೆ. ಉತ್ತರ ಗಾಜಾದಲ್ಲಿ 1.1 ಮಿಲಿಯನ್​ ಮಂದಿ ಸ್ಥಳಾಂತರಗೊಂಡಿದ್ದು ದಕ್ಷಿಣ ಗಾಜಾದಲ್ಲಿರುವ ಅರ್ಧದಷ್ಟು ಪ್ಯಾಲೆಸ್ಟೈನಿಯನ್ನರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಾಜಾ ಪಟ್ಟಿಯಲ್ಲಿ ಬಾಂಬ್​ ದಾಳಿ ಹೆಚ್ಚಿಸಿದ ಇಸ್ರೇಲ್​: ಹಲವರ ಸಾವು, ಕಳವಳ ವ್ಯಕ್ತಪಡಿಸಿದ ಅಮೆರಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.