ಬರ್ಲಿನ್ (ಜರ್ಮನಿ): ಶರ್ಟ್ ಹಾಕಿಕೊಳ್ಳದೇ ಬರಿಮೈ ಮೇಲೆ ಕುದುರೆ ಸವಾರಿ ಮಾಡುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಚಿತ್ರಕ್ಕೆ ಜಿ7 ನಾಯಕರು ಗೇಲಿ ಮಾಡಿದ್ದಾರೆ. ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹಾಗೂ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇವರಿಬ್ಬರೂ ಪುಟಿನ್ ಬಗ್ಗೆ ಜೋಕ್ ಮಾಡುತ್ತ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
"ಜಾಕೆಟ್ಸ್ ಹಾಕಿಕೊಳ್ಳುವುದಾ ಅಥವಾ ಬೇಡವಾ? ನಾವೂ ಕೂಡ ಶರ್ಟ್ ಬಿಚ್ಚೋಣವಾ?" ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಟೇಬಲ್ ಸುತ್ತ ಕುಳಿತ ಇತರ ಎಲ್ಲ ನಾಯಕರ ಕಡೆಗೆ ನೋಡಿ ಕೇಳುತ್ತಾರೆ.
"ಪುಟಿನ್ಗಿಂತ ನಾವೇ ಸ್ಟ್ರಾಂಗ್ ಆಗಿದ್ದೇವೆ ಎಂದು ತೋರಿಸಬೇಕಿದೆ. ನಾವೂ ಕೂಡ ಶರ್ಟ್ ಬಿಚ್ಚಿ ಕುದುರೆ ಸವಾರಿ ಮಾಡಿ ಜನರಿಗೆ ತೋರಿಸೋಣ." ಎಂದು ಟ್ರುಡೊ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನೋಡಿ.. ನಾವೂ ಬಂದೆವು.. ನಾವೂ ಬಂದೆವು. ಆತನಿಗೆ ನಮ್ಮ ಚಿತ್ರಗಳನ್ನೂ ತೋರಿಸೋಣ." ಎಂದು ಬೋರಿಸ್ ಜಾನ್ಸನ್ ಇದಕ್ಕೆ ಮರು ಉತ್ತರ ನೀಡುತ್ತಾರೆ.
ಪುಟಿನ್ ಶರ್ಟ್ ಹಾಕಿಕೊಳ್ಳದೆ ಸಾಹಸ ಕ್ರೀಡೆಗಳಲ್ಲಿ ತೊಡಗಿರುವ ಚಿತ್ರಗಳನ್ನು ಕ್ರೆಮ್ಲಿನ್ ಆಡಳಿತ ಆಗಾಗ ಶೇರ್ ಮಾಡುತ್ತಿರುತ್ತದೆ. ತಾನೊಬ್ಬ ಅತ್ಯಂತ ಬಲಿಷ್ಠ ವ್ಯಕ್ತಿ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಲು ಪುಟಿನ್ ಉದ್ದೇಶಪೂರ್ವಕವಾಗಿ ಇದೆಲ್ಲವನ್ನು ಮಾಡುತ್ತಾರೆ ಎನ್ನಲಾಗಿದೆ.
ಇದನ್ನು ಓದಿ: ಜರ್ಮನಿಯಲ್ಲಿ ಪ್ರಧಾನಿ ಮೋದಿ: ಇಂದು ಜಿ-7 ಶೃಂಗಸಭೆಯಲ್ಲಿ ಭಾಗಿ, ಪ್ರಮುಖ ವಿಷಯಗಳ ಬಗ್ಗೆ ಚರ್ಚೆ