ETV Bharat / international

ಪ್ರಧಾನಿ ಮೋದಿ ಜೊತೆಗೆ ಇಮ್ಯಾನುಯೆಲ್ ಮ್ಯಾಕ್ರನ್ ಸೆಲ್ಫಿ.. ಫ್ರಾನ್ಸ್​ ಪ್ರವಾಸ ಬಳಿಕ ಅಬುದಾಬಿಗೆ ಪ್ರಯಾಣ ಬೆಳೆಸಿದ ಮೋದಿ - Prime Minister Narendra Modi

ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಜೊತೆಗೆ ಇಮ್ಯಾನುಯೆಲ್ ಮ್ಯಾಕ್ರನ್ ಸೆಲ್ಫಿ

author img

By

Published : Jul 15, 2023, 10:10 AM IST

ಪ್ಯಾರಿಸ್ (ಫ್ರಾನ್ಸ್): ಪ್ರಧಾನಿ ಮೋದಿ ಅವರ ಫ್ರಾನ್ಸ್​ ಭೇಟಿಯು ಪೂರ್ಣಗೊಂಡಿದ್ದು, ಅಬುದಾಬಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್​ ಮತ್ತು ಪ್ರಧಾನಿ ಮೋದಿಯವರು ತಮ್ಮ ಸ್ನೇಹದ ಭೇಟಿಯ ಸವಿನೆನಪಿಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ಸೆಲ್ಫಿ ಫೋಟೋವನ್ನು ಇಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, "ಭಾರತ ಮತ್ತು ಫ್ರಾನ್ಸ್ ನಡುವಿನ ಸ್ನೇಹ ಚಿರಾಯುವಾಗಲಿ!" ಎಂದು ಫ್ರೆಂಚ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಮ್ಯಾಕ್ರನ್ ಅವರ ಟ್ವೀಟ್‌ಗೆ ಪ್ರಧಾನಿ ಮೋದಿ ಫ್ರೆಂಡ್ಸ್​ ಫಾರೆವರ್​(Friends Forever) ಎಂದು ರಿಟ್ವೀಟ್​ ಮಾಡಿದ್ದಾರೆ.

ಜತೆಗೆ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಫ್ರಾನ್ಸ್​ ಭೇಟಿಯ ಕುರಿತಾದ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ' ಫ್ರಾನ್ಸ್​ ಭೇಟಿಯು ನನಗೆ ಸ್ಮರಣೀಯವಾಗಿದೆ. ನನಗೆ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಇನ್ನು, ಪರೇಡ್​ನಲ್ಲಿ ಭಾರತೀಯ ಸೇನಾ ತುಕಡಿ ಭಾಗವಹಿಸುವುದನ್ನು ನೋಡಿ ಹೆಮ್ಮೆಯಾಗಿದೆ ಮತ್ತು ಪರೇಡ್​ ಅದ್ಭುತವಾಗಿತ್ತು. ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಹಾಗು ಫ್ರೆಂಚ್ ಜನರ ಆತಿಥ್ಯಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಮ್ಮ ಸ್ನೇಹ ಹೀಗೆ ಮುಂದುವರೆಯಲಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • The talks with my friend, President @EmmanuelMacron were very productive. We reviewed the full range of India-France relations. I am particularly enthusiastic about deepening cooperation in futuristic sectors like green hydrogen, renewable energy, AI, semiconductors and more. pic.twitter.com/kNxPGYj5Fh

    — Narendra Modi (@narendramodi) July 14, 2023 " class="align-text-top noRightClick twitterSection" data=" ">

ಪ್ಯಾರಿಸ್​ನಲ್ಲಿ ನಾನು ಮತ್ತು ಇಮ್ಯಾನುಯೆಲ್ ಮ್ಯಾಕ್ರನ್ ವ್ಯಾಪಾರ ಸಹಕಾರವನ್ನು ವೈವಿಧ್ಯಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಉನ್ನತ ಮಟ್ಟದ CEO ಗಳನ್ನು ಭೇಟಿಯಾದೆವು. ಅಲ್ಲಿ ಭಾರತದಲ್ಲಿನ ಸುಧಾರಣೆಗಳನ್ನು ವಿವರಿಸಿದೆ, ಜೊತೆಗೆ ನಮ್ಮ ರಾಷ್ಟ್ರವು ನೀಡುವ ಅನೇಕ ಅವಕಾಶಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಅಲ್ಲದೆ, ನನ್ನ ಸ್ನೇಹಿತನಾದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್​ನೊಂದಿಗೆ ಭಾರತ-ಫ್ರಾನ್ಸ್ ಸಂಬಂಧಗಳ ಕುರಿತಾಗಿ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ಫ್ರಾನ್ಸ್​ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ, ಕೃತಕ ಬುದ್ಧಿಮತ್ತೆ ಮುಂದಾದವುಗಳ ಕ್ಷೇತ್ರಗಳಲ್ಲಿ ಸಹಕಾರ ನೀಡಲಿದ್ದು, ಇದರ ಪ್ರಾರಂಭಿಸುವ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಮೋದಿ ಟ್ವೀಟ್​ ಮಾಡಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  • PM @narendramodi bids adieu to France following a successful visit that heralded a new chapter in 🇮🇳-🇫🇷 relationship.

    PM now emplanes for Abu Dhabi for the next leg of his visit. pic.twitter.com/6PFLI9RdiL

    — Arindam Bagchi (@MEAIndia) July 14, 2023 " class="align-text-top noRightClick twitterSection" data=" ">

ಅಬುದಾಬಿಗೆ ಮೋದಿ ಪ್ರಯಾಣ: ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್)ಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ(13/07/2023) ರಂದು ಫ್ರಾನ್ಸ್​ ತಲುಪಿ, ಅಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಫ್ರಾನ್ಸ್​ ಅಧ್ಯಕ್ಷರೊಂದಿಗೆ ಉಭಯ ರಾಷ್ಟ್ರಗಳ ಸಂಬಂಧದ ಕುರಿತು ಮಾತುಕತೆ ನಡೆಸಿ ಇಂದು ದುಬೈನ ಅಬುದಾಬಿಗೆ ಪ್ರಯಾಣ ಬೆಳೆಸಿದ್ದಾರೆ. ಫಿನ್‌ಟೆಕ್, ರಕ್ಷಣೆ, ಭದ್ರತೆ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಭೆಗಳಿಗಾಗಿ ಅಬುಧಾಬಿಗೆ ತೆರಳಿದ್ದು, ಈ ವೇಳೆ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಲಿದ್ದಾರೆ.

ಅಬುದಾಬಿ ಪ್ರವಾಸದ ಕುರಿತು ಪ್ರಧಾನಿ ಮೋದಿ ಅವರು ಭಾರತದಿಂದ ಫ್ರಾನ್ಸ್​ಗೆ ತೆರಳುವ ಮುನ್ನ ಭಾರತದಲ್ಲೇ, 'ಪ್ಯಾರಿಸ್‌ನಿಂದ, ನಾನು ಜುಲೈ 15 ರಂದು ಅಧಿಕೃತ ಭೇಟಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಗೆ ಪ್ರಯಾಣಿಸಲಿದ್ದೇನೆ. ನನ್ನ ಸ್ನೇಹಿತ, ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹೆಚ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲು ನಾನು ಕಾತರನಾಗಿದ್ದೇನೆ' ಎಂದಿದ್ದಾರೆ.

ಜೊತೆಗೆ "ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಫಿನ್‌ಟೆಕ್, ರಕ್ಷಣೆ, ಭದ್ರತೆಯ ವಿಚಾರದಲ್ಲಿ ಎರಡು ದೇಶಗಳು ಸಂಬಂಧ ಹೊಂದಿದ್ದು ಇವುಗಳೊಂದಿಗೆ ತೊಡಗಿಸಿಕೊಂಡಿದೆ. ಕಳೆದ ವರ್ಷ, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಮತ್ತು ನಾನು ನಮ್ಮ ಪಾಲುದಾರಿಕೆಯ ಭವಿಷ್ಯದ ಕುರಿತು ಮಾರ್ಗಸೂಚಿಯನ್ನು ಒಪ್ಪಿಕೊಂಡಿದ್ದೇವೆ. ಇನ್ನು ಈ ವರ್ಷಾಂತ್ಯದಲ್ಲಿ ಯುಎಇ ಯುಎನ್‌ಎಫ್‌ಸಿಸಿಸಿ (ಸಿಒಪಿ-28) ಪಕ್ಷದ 28ನೇ ಸಮ್ಮೇಳನವನ್ನು ಆಯೋಜಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ನನ್ನ ಯುಎಇ ಭೇಟಿಯು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂಬ ವಿಶ್ವಾಸ ನನಗಿದೆ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿ ಕೊಟ್ಟಿದ್ದರು.

ಇದನ್ನೂ ಓದಿ: ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಅದ್ಭುತವೆನಿಸಿತು: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.