ನ್ಯೂಯಾರ್ಕ್: ಅಮೆರಿಕದ ಪ್ರಮುಖ ಮಾಧ್ಯಮಗಳಲ್ಲಿ ಒಂದಾದ ಫಾಕ್ಸ್ ನ್ಯೂಸ್ ಅಧ್ಯಕ್ಷ ಜೋ ಬೈಡನ್ರನ್ನು ಸರ್ವಾಧಿಕಾರಿ (ವನ್ನಾಬೇ ಡಿಕ್ಟೇಟರ್) ಎಂದು ಜರಿದು ಸುದ್ದಿ ಮಾಡಿದ್ದು, ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಅಪಮಾನಕರ ಪದ ಪ್ರಯೋಗದ ಬಗ್ಗೆ ಸುದ್ದಿಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ ಪ್ರವೇಶ ರಂಗೇರಿಸಿದೆ. ಗೌಪ್ಯ ದಾಖಲೆ ಕದ್ದೊಯ್ದ ಆರೋಪದ ಮೇಲೆ ಮೊನ್ನೆಯಷ್ಟೇ ಟ್ರಂಪ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಇದರ ಬಳಿಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಟ್ರಂಪರ್ನ್ನು ಬೆಂಬಲಿಸುವ ಭರದಲ್ಲಿ ಫಾಕ್ಸ್ ನ್ಯೂಸ್ ಅಧ್ಯಕ್ಷ ಜೋ ಬೈಡನ್ರನ್ನು ಟೀಕಿಸಿ ವರದಿ ಭಿತ್ತರಿಸಿತ್ತು.
-
Fox News chyron under split screen of Biden and Trump as Trump speaks live: "WANNABE DICTATOR SPEAKS AT THE WHITE HOUSE AFTER HAVING HIS POLITICAL RIVAL ARRESTED." pic.twitter.com/9eWZxhoXE4
— Natasha Korecki (@natashakorecki) June 14, 2023 " class="align-text-top noRightClick twitterSection" data="
">Fox News chyron under split screen of Biden and Trump as Trump speaks live: "WANNABE DICTATOR SPEAKS AT THE WHITE HOUSE AFTER HAVING HIS POLITICAL RIVAL ARRESTED." pic.twitter.com/9eWZxhoXE4
— Natasha Korecki (@natashakorecki) June 14, 2023Fox News chyron under split screen of Biden and Trump as Trump speaks live: "WANNABE DICTATOR SPEAKS AT THE WHITE HOUSE AFTER HAVING HIS POLITICAL RIVAL ARRESTED." pic.twitter.com/9eWZxhoXE4
— Natasha Korecki (@natashakorecki) June 14, 2023
ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಅವರು ಭಾಷಣ ಮಾಡುತ್ತಿದ್ದ ದೃಶ್ಯವನ್ನು ಎರಡು ಬದಿಯಲ್ಲಿ ತೋರಿಸುತ್ತಾ, 'ತನ್ನ ರಾಜಕೀಯ ಪ್ರತಿಸ್ಪರ್ಧಿಯ ಬಂಧನದ ಬಳಿಕ ದೇಶದ ಸರ್ವಾಧಿಕಾರಿಯಾಗಲು ಬಯಸುವ ವ್ಯಕ್ತಿ ಶ್ವೇತಭವನದಲ್ಲಿ ಮಾತನಾಡುತ್ತಿದ್ದಾರೆ' ಎಂದು ಅಡಿಬರಹ ನೀಡಿತ್ತು. ಇದೀಗ ಟೀಕೆಗೆ ಗುರಿಯಾಗಿದೆ.
ಪದಬಳಕೆಗೆ ವಿಷಾದಿಸಿದ ಸುದ್ದಿ ವಾಹಿನಿ: ಇದರ ಬೆನ್ನಲ್ಲೇ ಫಾಕ್ಸ್ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ. ಅಧ್ಯಕ್ಷರ ವಿರುದ್ಧ ಬಳಸಲಾದ ಪದದ ಬಗ್ಗೆ ವಿಷಾದವಿದೆ. ಇದು ದುರುದ್ದೇಶಪೂರ್ವಕವಾಗಿ ಭಿತ್ತರಿಸಿದ್ದಲ್ಲ. ತಕ್ಷಣವೇ ಸರಿ ಮಾಡಲಾಗಿದೆ ಎಂದು ವಾಹಿನಿ ಸಮಜಾಯಿಷಿ ನೀಡಿದೆ. ಸರ್ವಾಧಿಕಾರಿ ಆಗಲು ಬಯಸುವ ಜೋ ಬೈಡನ್ ಎಂಬ ಸಾಲು ಟಿವಿ ಪರದೆಯ ಮೇಲೆ 27 ಸೆಕೆಂಡುಗಳ ಕಾಲ ಇತ್ತು ಎಂದು ವರದಿಯಾಗಿದೆ. ಇದು ಕಾರ್ಯಕ್ರಮದ ಮರುಪ್ರಸಾರದ ವೇಳೆಯೂ ಭಿತ್ತರವಾಗಿದೆ ಎಂದು ಹೇಳಲಾಗಿದೆ.
ಈ ಅಡಿಬರಹ ಟಿವಿ ಪರದೆ ಮೇಲೆ ಮೂಡಿ ಬಂದಿದ್ದು ಹೇಗೆ ಮತ್ತು ಯಾಕೆ ಎಂಬುದರ ಬಗ್ಗೆ ವಾಹಿನಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದಲ್ಲದೇ ಫಾಕ್ಸ್ ನ್ಯೂಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಸಾರದ ದೃಶ್ಯಗಳನ್ನು ನೇರಪ್ರಸಾರ ಮಾಡುವ ಏಕೈಕ ವಾಹಿನಿಯಾಗಿದೆ.
ಟ್ರಂಪ್ ಕೇಸಲ್ಲಿ ಬೈಡನ್ ಪಾತ್ರವಿಲ್ಲ: ಇತ್ತ, ಟ್ರಂಪ್ ವಿರುದ್ಧ ಸರ್ಕಾರವೇ ಪಿತೂರಿ ನಡೆಸುತ್ತಿದೆ. ಹೀಗಾಗಿಯೇ ಗೌಪ್ಯ ದಾಖಲೆ ಕದ್ದೊಯ್ದ ಕೇಸ್ನಲ್ಲಿ ಬೇಕಂತಲೇ ಅವರನ್ನು ಸಿಕ್ಕಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶ್ವೇತಭವನ, ಟ್ರಂಪ್ ಅಕ್ರಮವಾಗಿ ರಹಸ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿರುವ ವಿಶೇಷ ಸಲಹೆಗಾರ ಜಾಕ್ ಸ್ಮಿತ್ ಅವರ ದೋಷಾರೋಪಣೆ ಹಿಂದೆ ಬಿಡೆನ್ ಸರ್ಕಾರವಿಲ್ಲ. ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರೊಂದಿಗೆ ಬಿಡೆನ್ ಯಾವುದೇ ಸಂಪರ್ಕವನ್ನೂ ಹೊಂದಿಲ್ಲ ಎಂದು ಸ್ಟಷ್ಟನೆ ನೀಡಿದೆ.
ತಪ್ಪು ಮಾಡಿಲ್ಲ- ಟ್ರಂಪ್: ಇತ್ತ ತಮ್ಮ ವಿರುದ್ಧ ಕೇಳಿಬಂದ ದಾಖಲೆ ಕಳವು ಆರೋಪದಲ್ಲಿ ತನ್ನ ತಪ್ಪಿಲ್ಲ. ತಾನು ಏನೂ ಮಾಡಿಲ್ಲ ಎಂದು ಟ್ರಂಪ್ ತಮ್ಮ ವಾದವನ್ನು ಕೋರ್ಟ್ ಮುಂದೆ ವಾದಿಸಿದ್ದಾರೆ. ಇದೇ ಪ್ರಕರಣದಲ್ಲಿ 2 ದಿನದ ಹಿಂದೆ ವಿಚಾರಣೆ ಹಾಜರಾದಾಗ ಬಂಧನವಾಗಿದ್ದರು ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಬಿಡುಗಡೆಯಾಗಿ ಅವರು ಮತ್ತೆ ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: Donald Trump: ಗೌಪ್ಯ ದಾಖಲೆ ಕದ್ದ ಕೇಸಲ್ಲಿ 2ನೇ ಸಲ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ?