ETV Bharat / international

ಮನಸೋಇಚ್ಛೆ ಗುಂಡು ಹಾರಿಸಿದ ಆಗಂತುಕ; ಅಮೆರಿಕದ ಓಹಿಯೋದಲ್ಲಿ ನಾಲ್ವರು ಸಾವು - ಗುಂಡಿನ ದಾಳಿ

ಅಮೆರಿಕದ ಓಹಿಯೋದಲ್ಲಿ ನಡೆದ ಶೂಟೌಟ್​​ನಲ್ಲಿ ನಾಲ್ವರು ಸಾವನ್ನಪ್ಪಿದ್ಧಾರೆ. ಶಸ್ತ್ರಸಜ್ಜಿತ ಶಂಕಿತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Ohio shooting police searching for suspect
ಗುಂಡಿನ ದಾಳಿ: ಶಂಕಿತನ ಹುಡುಕಾಟದಲ್ಲಿ ಪೊಲೀಸರು
author img

By

Published : Aug 7, 2022, 7:48 AM IST

ಓಹಿಯೋ(ಅಮೆರಿಕ): ಓಹಿಯೋದ ಬಟ್ಲರ್ ಟೌನ್‌ಶಿಪ್‌ನಲ್ಲಿ ಶುಕ್ರವಾರ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ಧಾರೆ. ದುಷ್ಕರ್ಮಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಬಟ್ಲರ್ ಟೌನ್‌ಶಿಪ್ ಪೊಲೀಸ್ ಮುಖ್ಯಸ್ಥ ಜಾನ್ ಪೋರ್ಟರ್, "ಡೇಟನ್‌ನ ಉತ್ತರದಲ್ಲಿರುವ ಸಣ್ಣ ಓಹಿಯೋ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ಶಂಕಿತ ವ್ಯಕ್ತಿ ಶಸ್ತ್ರಸಜ್ಜಿತ ಮತ್ತು ಅಪಾಯಕಾರಿಯಾಗಿದ್ದ" ಎಂದು ಹೇಳಿದ್ದಾರೆ.

ಶಂಕಿತನ ಗುರುತು: ದುಷ್ಕರ್ಮಿ ಕಂದುಬಣ್ಣದ ಕೂದಲು ಹೊಂದಿದ್ದು, ಅಂದಾಜು 39 ವಯಸ್ಸಿನವನಿರಬಹುದು. ಶಾರ್ಟ್ಸ್ ಮತ್ತು ಹಳದಿ ಟಿ-ಶರ್ಟ್ ಧರಿಸಿದ್ದ. ಬಿಳಿ ಬಣ್ಣದ ಫೋರ್ಡ್ ಎಡ್ಜ್‌ ಕಾರಿನಲ್ಲಿ ಓಡಿಹೋಗಿದ್ದಾನೆ. ಈತನ ಬಗ್ಗೆ ಮಾಹಿತಿಯಿದ್ದರೆ ಎಫ್‌ಬಿಐ ಸಂಪರ್ಕಿಸಲು ಅಧಿಕಾರಿಗಳು ತಿಳಿಸಿದ್ದಾರೆ. ಬಟ್ಲರ್ ಟೌನ್‌ಶಿಪ್ ಡೇಟನ್‌ನ ಉತ್ತರಕ್ಕೆ 9 ಮೈಲುಗಳಷ್ಟು ದೂರದಲ್ಲಿರುವ ಕೇವಲ 8,000 ನಿವಾಸಿಗಳನ್ನು ಹೊದಿರುವ ಪಟ್ಟಣವಾಗಿದೆ.

ಇದನ್ನೂ ಓದಿ: ಅಮೆರಿಕದ ಆಸ್ಪತ್ರೆ ಆವರಣದಲ್ಲಿ ಗುಂಡಿನ ದಾಳಿ: ನಾಲ್ವರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.