ETV Bharat / international

ಕ್ರಿಮಿನಲ್​ ಕೇಸ್​ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬಂಧನ, ಬಿಡುಗಡೆ

author img

By

Published : Apr 5, 2023, 7:51 AM IST

ಕ್ರಿಮಿನಲ್​ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ . ಮ್ಯಾನ್​ಹಟನ್​ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗಿದೆ.

ಡೊನಾಲ್ಡ್​ ಟ್ರಂಪ್​ ಬಂಧನ
ಡೊನಾಲ್ಡ್​ ಟ್ರಂಪ್​ ಬಂಧನ

ನ್ಯೂಯಾರ್ಕ್: ತಮ್ಮ ನಡುವಿನ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಬಾರದು ಎಂದು ವಯಸ್ಕ ಚಿತ್ರಗಳ ತಾರೆಗೆ ಹಣ ನೀಡಿದ ಕ್ರಿಮಿನಲ್​ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಮ್ಯಾನ್​ಹಟನ್​ ನ್ಯಾಯಾಲಯಕ್ಕೆ ಕರೆ ತಂದರು. ವಿಚಾರಣೆಯ ವೇಳೆ ಟ್ರಂಪ್​ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ನಿರಪರಾಧಿ ಎಂದು ವಾದ ಮಂಡಿದ್ದಾರೆ.

ಅಮೆರಿಕದ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪ ಎದುರಿಸಿ, ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್​ ಆಗಿದ್ದಾರೆ. ಟ್ರಂಪ್ 2016 ರಲ್ಲಿ ಅಮೆರಿಕದ ಅಧ್ಯಕ್ಷರಾಗುವ ಮೊದಲು ವಯಸ್ಕ ಚಿತ್ರಗಳ ತಾರೆ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಮರೆಮಾಚಲು ಹಣ ನೀಡಲಾಗಿತ್ತು ಎಂಬ ಆರೋಪ ಹೊಂದಿದ್ದರು. ಅದರಂತೆ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಲಾಗುತ್ತಿದೆ. ಅಧ್ಯಕ್ಷೀಯ ಚುನಾವಣೆ ಹೊತ್ತಲ್ಲೇ ಅವರ ಬಂಧನವಾಗಿರುವುದು ರಾಜಕೀಯ ಬಿಸಿ ಏರಿಸಿದೆ.

ನ್ಯಾಯಾಲಯಕ್ಕೆ ಶರಣಾದ ಟ್ರಂಪ್​, ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರ ಮುಂದೆ ವಿಚಾರಣೆಗೆ ಒಳಪಟ್ಟರು. ಅವರ ವಿರುದ್ಧ ಕೇಳಿಬಂದ ವೈಯಕ್ತಿಕ 34 ಕ್ರಿಮಿನಲ್ ಆರೋಪಗಳನ್ನು ನಿರಾಕರಿಸಿದ್ದಾರೆ. ಕಾನೂನು ಸಲಹಾ ಸಿಬ್ಬಂದಿ ಜೊತೆಗೆ ಕೋರ್ಟ್​ಗೆ ಬಂದ ಟ್ರಂಪ್​ ತನ್ನದು ತಪ್ಪಿಲ್ಲ ಎಂದು ವಾದಿಸಿದರು.

ರಾಜಕೀಯ ದ್ವೇಷ: ವಿಚಾರಣೆಯ ಬಳಿಕ ಹೊರಬಂದ ಟ್ರಂಪ್​ ಅವರ ಪರ ವಕೀಲ ಟಾಡ್ ಬ್ಲಾಂಚೆ ಅವರು, ತಮ್ಮ ಕಕ್ಷಿದಾರರು ಅಸಮಾಧಾನಗೊಂಡಿದ್ದಾರೆ. ಪ್ರಾಸಿಕ್ಯೂಟರ್ "ರಾಜಕೀಯ ಸಮಸ್ಯೆಯನ್ನು" "ರಾಜಕೀಯ ಪ್ರಾಸಿಕ್ಯೂಷನ್" ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು. ಟ್ರಂಪ್ ವಿರುದ್ಧ ಬಂದ ಎಲ್ಲ ಆರೋಪಗಳ ವಿರುದ್ಧ ಹೋರಾಡಲಿದ್ದೇವೆ ಎಂದು ಹೇಳಿದರು.

ಚುನಾವಣೆಯ ಕತೆಯೇನು?: ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಈ ಮಧ್ಯೆಯೇ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಕೇಸ್​ನಲ್ಲಿ ಶಿಕ್ಷೆಗೆ ಒಳಪಟ್ಟರೆ, ಚುನಾವಣೆಗೆ ಸ್ಪರ್ಧಿಸಲು ಅಸಾಧ್ಯ. ಬಂಧನ ಮುಂದುವರಿದರೆ ಟ್ರಂಪ್​ ಬೆಂಬಲಿಗರ ಮುಂದಿನ ನಡೆ ಏನು ಎಂಬುದು ಕುತೂಹಲವಾಗಿದೆ. ಬಂಧನದ ಬಳಿಕ ಕೋರ್ಟ್​ ಹಾಲ್​ಗೆ ಟ್ರಂಪ್​ ತೆರಳುವ ವೇಳೆ ನ್ಯಾಯಾಲಯದ ಮುಂದೆ ಬೆಂಬಲಿಗರು ಜಮಾಯಿಸಿದ್ದರು. ಟ್ರಂಪ್​ ಅವರತ್ತ ಕೈ ಬೀಸುತ್ತಲೇ ಕೋರ್ಟ್​ ಆವರಣ ಪ್ರವೇಶಿಸಿದ್ದರು.

ಇನ್ನು ಕೋರ್ಟ್​ ಆವರಣದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿತ್ತು. ಮಾಜಿ ಅಧ್ಯಕ್ಷರ ವಿರುದ್ಧದ ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಕೋರ್ಟ್​ನಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು. ಅಪಾರ ಪ್ರಮಾಣದಲ್ಲಿ ಟ್ರಂಪ್ ಬೆಂಬಲಿಗರು ಕೂಡ ಕೋರ್ಟ್​ ಮುಂದೆ ಕೂಡಿಕೊಂಡಿದ್ದರು.

ಬಂಧನವಾದ ಮೊದಲ ಅಧ್ಯಕ್ಷ: ಅಮೆರಿಕದ ಇತಿಹಾಸದಲ್ಲಿಯೇ ಕ್ರಿಮಿನಲ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಿದ ಮೊದಲ ಅಧ್ಯಕ್ಷ ಟ್ರಂಪ್​ ಆಗಿದ್ದಾರೆ. ತಮ್ಮನ್ನು ಬಂಧಿಸಬಹುದು ಎಂದು ಈ ಹಿಂದೆಯೇ ಟ್ರಂಪ್​ ಸುಳಿವು ನೀಡಿದ್ದರು. "ಟ್ರೂತ್​" ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು.

ಇದನ್ನೂ ಓದಿ: ಟ್ರಂಪ್ ವಿರುದ್ಧ ದೋಷಾರೋಪಣೆ: ಕ್ರಿಮಿನಲ್ ಆರೋಪ ಹೊತ್ತ ಮೊದಲ ಯುಎಸ್ ಮಾಜಿ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.