ಸಿಯೋಲ್,ದಕ್ಷಿಣ ಕೊರಿಯಾ: ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಫೇಸ್‌ಬುಕ್ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಶೇಕಡಾ 25 ರಷ್ಟು ಕುಸಿತ ಕಂಡಿದೆ ಎಂದು ಉದ್ಯಮ ವಿಶ್ಲೇಷಣೆ ವರದಿ ತಿಳಿಸಿದೆ. ಮೊಬೈಲ್ ಇಂಡೆಕ್ಸ್ ಪ್ರಕಾರ, ದಕ್ಷಿಣ ಕೊರಿಯಾದ ಫೇಸ್‌ಬುಕ್ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ ಕಳೆದ ತಿಂಗಳ ಹೊತ್ತಿಗೆ 11.09 ಮಿಲಿಯನ್ ತಲುಪಿದೆ.
2020 ರ ಮೇ ತಿಂಗಳಲ್ಲಿ ಫೇಸ್‌ಬುಕ್ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ14.87 ಮಿಲಿಯನ್ ಇತ್ತು. ಇದು ಕಳೆದ ತಿಂಗಳ ಹೊತ್ತಿಗೆ 11.09 ಮಿಲಿಯನ್ ತಲುಪಿದೆ. ಗೂಗಲ್ ಮತ್ತು ಆಪಲ್‌ನ ಮೊಬೈಲ್ ಅಪ್ಲಿಕೇಶನ್ ಸ್ಟೋರ್‌ಗಳ ಡೇಟಾವನ್ನು ಆಧರಿಸಿ ಈ ಲೆಕ್ಕಾಚಾರವನ್ನು ಮಾಡಲಾಗಿದೆ. ಕೊರಿಯಾ ಇನ್ಫರ್ಮೇಷನ್ ಸೊಸೈಟಿ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಪ್ರಕಾರ, 25 ಮತ್ತು 38 ರ ನಡುವಿನ ವಯಸ್ಸಿನವರಲ್ಲಿ ಫೇಸ್‌ಬುಕ್ ಬಳಕೆಯ ದರವು 2021 ರಲ್ಲಿ 27 ಪ್ರತಿಶತದಷ್ಟು ದಾಖಲಾಗಿದೆ. 2017 ರಲ್ಲಿ 48.6 % ದಾಖಲಾಗಿತ್ತು.
ದಕ್ಷಿಣ ಕೊರಿಯಾದ ಯುವ ಫೇಸ್‌ಬುಕ್ ಬಳಕೆದಾರರು ಇನ್ಸ್ಟಾಗ್ರಾಮ್ನತ್ತ ಮುಖ ಮಾಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಜಾಹೀರಾತುಗಳ ಮೇಲೆ ಅನೇಕ ದೂರುಗಳು ಕೇಳಿ ಬಂದಿವೆ. ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ನಗ್ನತೆಯ ದೃಶ್ಯಗಳು, ಆ್ಯಪ್‌ನ ವಿನ್ಯಾಸದಲ್ಲಿ ಸಂಕೀರ್ಣತೆ, ಸಾಕ್ಷರತೆಯ ಅಡೆತಡೆಗಳು ಹಾಗೂ ವಿಡಿಯೋ ಆಧಾರಿತ ವಿಷಯಗಳನ್ನು ಬಯಸುವಂತಹ ಇಂಟರ್‌ನೆಟ್ ಬಳಕೆದಾರರು ಫೇಸ್‌ಬುಕ್ ಬಗ್ಗೆ ನಿರಾಸಕ್ತಿ ವಹಿಸುತ್ತಿದ್ದಾರೆ. ಚೀನೀ ಕಿರು-ರೂಪದ ವಿಡಿಯೊ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಹೆಚ್ಚು ಜನಪ್ರಿಯತೆ ಗಳಿಸಿದೆ.
ಇದನ್ನೂ ಓದಿ: ಪ್ರಿಂಟೌಟ್ ಬೇಕಿತ್ತಾ.. ಬ್ಲಿಂಕಿಟ್ ಮಾಡಿ, 10 ನಿಮಿಷದಲ್ಲಿ ಮನೆಗೇ ತರಿಸಿಕೊಳ್ಳಿ..