ನವದೆಹಲಿ: ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಈ ವರ್ಷವೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 274.3 ಬಿಲಿಯನ್ ಡಾಲರ್ ಸಂಪತ್ತನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರಿಗಿಂತ 100 ಕೋಟಿಗೂ ಅಧಿಕ ಸಂಪತ್ತನ್ನು ಮಸ್ಕ್ ಹೊಂದಿದ್ದಾರೆ.
2022ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಎಲಾನ್ ಮಸ್ಕ್‌ರ ನಿವ್ವಳ ಮೌಲ್ಯವು 270 ಬಿಲಿಯನ್ ಡಾಲರ್ಗೆ ಏರಿದೆ. ಇದು ಜೆಫ್ ಬೆಜೋಸ್‌ನ ಮೌಲ್ಯವಾದ 180.2 ಬಿಲಿಯನ್ ಡಾಲರ್ಗಿಂತ ಸುಮಾರು 100 ಬಿಲಿಯನ್ ಡಾಲರ್ ಹೆಚ್ಚು. ಕೋವಿಡ್ ಸಾಂಕ್ರಾಮಿಕದ ಹೊಡೆತದ ಬಳಿಕ ಅತಿ ಹೆಚ್ಚು ನಷ್ಟ ಹೊಂದಿದವರಲ್ಲಿ ಎಲಾನ್ ಮಸ್ಕ್ ಕೂಡ ಒಬ್ಬರಾಗಿದ್ದರು.
2020 ರ ಆರಂಭದಲ್ಲಿ ಮಸ್ಕ್ ಕೇವಲ 26.6 ಬಿಲಿಯನ್ ಡಾಲರ್ ಮೌಲ್ಯ ಸಂಪತ್ತನ್ನು ಹೊಂದಿದ್ದರು. ಈ ವರ್ಷ ಅವರ ಸಂಪತ್ತು ಏಕಾಏಕಿ 110 ಬಿಲಿಯನ್ ಡಾಲರ್ಗಳಷ್ಟು ವೃದ್ಧಿಸಿದೆ. ಇದು ಫೋರ್ಬ್ಸ್ ಇತಿಹಾಸದಲ್ಲಿಯೇ ಒಂದೇ ವರ್ಷದಲ್ಲಿ ದಾಖಲಾದ ಅತ್ಯಧಿಕ ಸಂಪತ್ತಾಗಿದೆ.
-
@Forbes REAL TIME TOP 10 BILLIONAIRES LIST:#ForbesBillionaires #Bloomberg #gautamadani #adanifoundation #mukeshambani #reliance #ElonMuskTwitter #India #Gujarat pic.twitter.com/grvFmpUBKg
— Priyank Pandey (@Priyank03481425) April 11, 2022 " class="align-text-top noRightClick twitterSection" data="
">@Forbes REAL TIME TOP 10 BILLIONAIRES LIST:#ForbesBillionaires #Bloomberg #gautamadani #adanifoundation #mukeshambani #reliance #ElonMuskTwitter #India #Gujarat pic.twitter.com/grvFmpUBKg
— Priyank Pandey (@Priyank03481425) April 11, 2022@Forbes REAL TIME TOP 10 BILLIONAIRES LIST:#ForbesBillionaires #Bloomberg #gautamadani #adanifoundation #mukeshambani #reliance #ElonMuskTwitter #India #Gujarat pic.twitter.com/grvFmpUBKg
— Priyank Pandey (@Priyank03481425) April 11, 2022
ಇನ್ನು ಎಲ್ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರಿಗಿಂತ 115 ಬಿಲಿಯನ್ ಡಾಲರ್ನಷ್ಟು ಮುಂದಿದ್ದಾರೆ. ಬರ್ನಾರ್ಡ್ 165.5 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ (134.2 ಬಿಲಿಯನ್ ಡಾಲರ್) ಮತ್ತು ಸ್ಟೀವ್ ಬಾಲ್ಮರ್ (97 ಬಿಲಿಯನ್ ಡಾಲರ್) ಅವರು ನಂತರದ ಸ್ಥಾನದಲ್ಲಿದ್ದಾರೆ.
ಮುಖೇಶ್ ಅಂಬಾನಿ ಭಾರತದ ಶ್ರೀಮಂತ: ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಅಗ್ರ 10 ಶ್ರೀಮಂತರಲ್ಲಿ ಕಾಣಿಸಿಕೊಂಡಿದ್ದಾರೆ. 10 ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಅವರು ಭಾರತದ ಶ್ರೀಮಂತರಲ್ಲಿ ಪ್ರಥಮರಾಗಿದ್ದಾರೆ. ಗೌತಮ್ ಅದಾನಿ 11 ಸ್ಥಾನದಲ್ಲಿದ್ದು, ದೇಶದ 2ನೇ ಶ್ರೀಮಂತರಾಗಿದ್ದಾರೆ.
ವಿಶ್ವಕ್ಕೆ ಅಮೆರಿಕನ್ನರೇ ಸಿರಿವಂತರು: ಪಟ್ಟಿಯಲ್ಲಿ ಇಡೀ ವಿಶ್ವದಲ್ಲಿಯೇ ಅಮೆರಿಕನ್ನರು ಶ್ರೀಮಂತರಾಗಿದ್ದಾರೆ. ಅಲ್ಲಿನ ಶ್ರೀಮಂತ ವ್ಯಕ್ತಿಗಳು 4.7 ಟ್ರಿಲಿಯನ್ ಡಾಲರ್ ಸಂಪತ್ತನ್ನು ಹೊಂದುವ ಮೂಲಕ ಅಮೆರಿಕ ಶ್ರೀಮಂತ ರಾಷ್ಟ್ರವಾಗಿದೆ. ಚೀನಾ ದೇಶ ಎರಡನೇ ಶ್ರೀಮಂತ ರಾಷ್ಟ್ರವಾಗಿದೆ. ಇದು 2.3 ಟ್ರಿಲಿಯನ್ ಡಾಲರ್ ಆಸ್ತಿ ಹೊಂದಿದೆ.
ಇದನ್ನೂ ಓದಿ: ಪಾಕ್ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ: ಇಂದೇ ಪ್ರಮಾಣ ವಚನ