ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್ ಖರೀದಿಸಿದಾಗಿನಿಂದಲೂ ಅತಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಟ್ವಿಟರ್ ಬಗ್ಗೆ ಸಂಬಂಧಿಸಿದ ಹೊಸ ಘೋಷಣೆಗಳು ಮತ್ತು ಹೊಸ ಬದಲಾವಣೆಗಳನ್ನು ಮಾಡುತ್ತಲೇ ಬರುತ್ತಾ ಗಮನ ಸೆಳೆಯುತ್ತಿದ್ದಾರೆ. ಇದೀಗ ವಿಚಿತ್ರವಾದ ಘೋಷಣೆ ಮಾಡಿದ್ದು, ಟ್ವಿಟರ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನಾಗಿ ಶ್ವಾನವನ್ನು ನೇಮಿಸಿಕೊಂಡಿರುವುದಾಗಿ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.
-
The new CEO of Twitter is amazing pic.twitter.com/yBqWFUDIQH
— Elon Musk (@elonmusk) February 15, 2023 " class="align-text-top noRightClick twitterSection" data="
">The new CEO of Twitter is amazing pic.twitter.com/yBqWFUDIQH
— Elon Musk (@elonmusk) February 15, 2023The new CEO of Twitter is amazing pic.twitter.com/yBqWFUDIQH
— Elon Musk (@elonmusk) February 15, 2023
ಕಳೆದ ವರ್ಷ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗೆ ಎಲೋನ್ ಮಸ್ಕ್ ಖರೀದಿಸಿದ್ದಾರೆ. ಇದರ ನಂತರದಿಂದ ಟ್ವಿಟರ್ ಉದ್ಯೋಗಿಗಳ ಬದಲಾವಣೆ ಮತ್ತು ಬ್ಲೂ ವೆರಿಫಿಕೇಶನ್ ವಿಷಯವಾಗಿ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಹಿಂದೆ ಟ್ವಿಟರ್ಗೆ ಹೊಸ ಸಿಇಒಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಈ ಮೂಲಕ ತಾವು ಸಿಇಒ ಹುದ್ದೆ ತೊರೆಯಲು ಬಯಸಿರುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಈಗ ಹೊಸ ಸಿಇಒ ಹುಡುಕಾಟ ಮುಗಿದಂತಿದ್ದು, ಟ್ವಿಟರ್‌ನ ಮುಂದಿನ ಸಿಇಒ ಬಗ್ಗೆ ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ.
-
He’s great with numbers! pic.twitter.com/auv5M1stUS
— Elon Musk (@elonmusk) February 15, 2023 " class="align-text-top noRightClick twitterSection" data="
">He’s great with numbers! pic.twitter.com/auv5M1stUS
— Elon Musk (@elonmusk) February 15, 2023He’s great with numbers! pic.twitter.com/auv5M1stUS
— Elon Musk (@elonmusk) February 15, 2023
ಟ್ವಿಟರ್‌ನ ಹೊಸ ಸಿಇಒ ಶ್ವಾನ: ಬಿಲಿಯನೇರ್ ಎಲೋನ್ ಮಸ್ಕ್ ಪ್ರಕಾರ, ಟ್ವಿಟರ್‌ನ ಹೊಸ ಸಿಇಒ ಅವರ ಸಾಕು ಶ್ವಾನವೇ ಹೊರತು ಮನುಷ್ಯರಲ್ಲ. ಈ ಸಿಇಒ ಹೆಸರು ಫ್ಲೋಕಿ. ಈ ಬಗ್ಗೆ ಖುದ್ದು ಎಲೋನ್ ಮಸ್ಕ್ ತಮ್ಮ ಸಾಕು ಶ್ವಾನ ಫ್ಲೋಕಿ ಸಮೇತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಒಂದು ಕುರ್ಚಿಯ ಮೇಲೆ ಶ್ವಾನ ಕುಳಿತಿದ್ದು, ಅದಕ್ಕೆ ಸಿಇಒ ಎಂದು ಬರೆದಿರುವ ಟಿ-ಶರ್ಟ್ ತೊಡಗಿಸಲಾಗಿದೆ. ಇದೇ ರೀತಿಯಾಗಿ ಶ್ವಾನದ ಬೇರೆ-ಬೇರೆ ಪೋಟೋಗಳನ್ನು ಎಲೋನ್ ಮಸ್ಕ್ ಹಂಚಿಕೊಂಡಿದ್ದಾರೆ.
-
And has 🔥🔥 style pic.twitter.com/9rcEtu9w1Z
— Elon Musk (@elonmusk) February 15, 2023 " class="align-text-top noRightClick twitterSection" data="
">And has 🔥🔥 style pic.twitter.com/9rcEtu9w1Z
— Elon Musk (@elonmusk) February 15, 2023And has 🔥🔥 style pic.twitter.com/9rcEtu9w1Z
— Elon Musk (@elonmusk) February 15, 2023
ಅಲ್ಲದೇ, ತಮ್ಮ ಮೊದಲ ಟ್ವಿಟ್ನಲ್ಲಿ ಶ್ವಾನ ಫ್ಲೋಕಿ ಪೋಟೋ ಶೇರ್ ಮಾಡಿ, ಟ್ವಿಟ್ಟರ್‌ನ ಹೊಸ ಸಿಇಒ ಅದ್ಭುತವಾಗಿದೆ. ಇತರ ವ್ಯಕ್ತಿಗಳಿಂತ ತುಂಬಾ ಉತ್ತಮವಾಗಿದೆ! ಎಂದು ಎಲೋನ್ ಮಸ್ಕ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಮಧ್ಯಾಹ್ನದ 3 ಗಂಟೆ ಸುಮಾರಿಗೆ 391.4 ಸಾವಿರ ಲೈಕ್‌ಗಳು ಬಂದಿವೆ. ಅದೇ ಸಮಯದಲ್ಲಿ 32 ಸಾವಿರ ಜನ ರೀಟ್ವೀಟ್ ಮಾಡಿದ್ದು, 13ಕ್ಕೂ ಹೆಚ್ಚು ಮಂದಿ ಸಾವಿರ ಸಹ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ವಿವಿಧ ರೀತಿಯ ಪ್ರತಿಕ್ರಿಯೆಗಳನ್ನೂ ಟ್ವಿಟರ್ ಬಳಕೆದಾರರು ನೀಡುತ್ತಿದ್ದಾರೆ.
ಮತ್ತೊಂದೆಡೆ, ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಎಲೋನ್ ಮಸ್ಕ್, ಟ್ವಿಟರ್ ಕಾರ್ಯನಿರ್ವಹಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು ನನಗೆ ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳಿದ್ದಾರು. ನಾನು ಸಂಸ್ಥೆಯನ್ನು ಸ್ಥಿರಗೊಳಿಸಬೇಕು. ಜೊತೆಗೆ ಅದು ಲಾಭದಾಯಕವಾಗಿ ಉಳಿಯಬೇಕೆಂದು ನಾನು ಭಾವಿಸುತ್ತೇನೆ. ಇದರೊಂದಿಗೆ, ಈ ವರ್ಷದ ಅಂತ್ಯದ ವೇಳೆಗೆ ಟ್ವಿಟರ್‌ನ ಹೊಸ ಸಿಇಒ ಅನ್ನು ಕಂಡುಕೊಳ್ಳುತ್ತೇವೆ ಎಂದು ತಿಳಿಸಿದ್ದರು.
-
The Twitter Board of Directors is 🔥 @elonmusk pic.twitter.com/ZALeah6zWg
— DogeDesigner (@cb_doge) February 15, 2023 " class="align-text-top noRightClick twitterSection" data="
">The Twitter Board of Directors is 🔥 @elonmusk pic.twitter.com/ZALeah6zWg
— DogeDesigner (@cb_doge) February 15, 2023The Twitter Board of Directors is 🔥 @elonmusk pic.twitter.com/ZALeah6zWg
— DogeDesigner (@cb_doge) February 15, 2023
ಇತ್ತ, ಫೋರ್ಬ್ಸ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಎಲೋನ್ ಮಸ್ಕ್ ಸಂಪತ್ತು 200 ಬಿಲಿಯನ್ ಡಾಲರ್ಗಿಂತ ಕಡಿಮೆಯಿದೆ. ಇದರಿಂದ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಫ್ರೆಂಚ್ನ ಐಷಾರಾಮಿ ಬರ್ನಾರ್ಡ್ ಅರ್ನಾಲ್ಟ್ 213.7 ಬಿಲಿಯನ್ ಡಾಲರ್ ಸಂಪತ್ತಿನ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿರಾಗಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಬ್ಲೂ ವೆರಿಫಿಕೇಶನ್ ಆರಂಭ: ವೆಬ್ನಲ್ಲಿ ಮಾಸಿಕ 650, ಮೊಬೈಲ್ಗಳಲ್ಲಿ 900 ರೂ. ಶುಲ್ಕ