ETV Bharat / international

ಪತ್ನಿಯ ಹತ್ಯೆ ಪ್ರಕರಣ.. ನ್ಯಾಯಾಧೀಶರಿಗೆ ಮರಣದಂಡನೆ

ಈಜಿಪ್ಟ್‌ ಹಲವಾರು ಸ್ತ್ರೀ ಹತ್ಯೆ ಪ್ರಕರಣಗಳಿಂದ ತತ್ತರಿಸಿರುವ ಸಮಯದಲ್ಲಿ, ತನ್ನ ಹೆಂಡತಿಯನ್ನು ಹತ್ಯೆ ಮಾಡಿದ ನ್ಯಾಯಾಧೀಶರಿಗೆ ಮರಣದಂಡನೆ ವಿಧಿಸಿದೆ.

Egypt judge sentenced to death for murdering wife
ಸಾಂದರ್ಭಿಕ ಚಿತ್ರ
author img

By

Published : Aug 17, 2022, 7:38 AM IST

ಕೈರೋ: ಪತ್ನಿಯನ್ನು ಕೊಂದ ನ್ಯಾಯಾಧೀಶರಿಗೆ ಈಜಿಪ್ಟ್‌ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ ಎಂದು ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ. ಎರಡು ತಿಂಗಳಲ್ಲಿ ದೇಶದಲ್ಲಿ ನಡೆದ ಮೂರನೇ ಉನ್ನತ ಸ್ತ್ರೀ ಹತ್ಯೆ ಪ್ರಕರಣ ಇದಾಗಿದೆ.

ಈಜಿಪ್ಟ್​ ಕೋರ್ಟ್​ ಮೂಲಗಳ ಪ್ರಕಾರ, ಕೈರೋ ಬಳಿಯ ಗಿಜಾದಲ್ಲಿನ ಕ್ರಿಮಿನಲ್ ನ್ಯಾಯಾಲಯವು ಉದ್ದೇಶಪೂರ್ವಕ ಕೊಲೆಗಾಗಿ ನ್ಯಾಯಾಧೀಶ ಐಮನ್ ಹಗ್ಗಾಗ್ ಮತ್ತು ಸಹಚರನಿಗೆ ಮರಣದಂಡನೆ ವಿಧಿಸಿದೆ.

ಕ್ರಿಮಿನಲ್ ಕೋರ್ಟ್ ಈ ಪ್ರಕರಣವನ್ನು ಈಜಿಪ್ಟ್‌ನ ಗ್ರಾಂಡ್ ಮುಫ್ತಿ ಅವರಿಗೆ ಅಂತಿಮ ಆದೇಶಕ್ಕಾಗಿ ವರ್ಗಾಯಿಸಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 11 ಕ್ಕೆ ನಿಗದಿಪಡಿಸಲಾಗಿದೆ, ಈ ವೇಳೆ ಗ್ರಾಂಡ್ ಮುಫ್ತಿಯಿಂದ ಮರಣದಂಡನೆಯ ಅನುಮೋದನೆ ಘೋಷಿಸಲಾಗುತ್ತದೆ.

ಜೂನ್ ಅಂತ್ಯದಲ್ಲಿ, ಈಜಿಪ್ಟ್‌ನ ಕೌನ್ಸಿಲ್ ಆಫ್ ಸ್ಟೇಟ್‌ನ ನ್ಯಾಯಾಧೀಶರಾದ ಐಮನ್ ಹಗ್ಗಾಗ್ ಅವರು ತಮ್ಮ ಪತ್ನಿ ಶೈಮಾ ಗಮಾಲ್ (42) ಅವರ ಕಣ್ಮರೆಯಾದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಜುಲೈನಲ್ಲಿ ಪ್ರಾಸಿಕ್ಯೂಟರ್‌ಗಳು ಹಗ್ಗಾಗ್ ಮತ್ತು ಸಹಚರನನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೇ ಅವರನ್ನು ಸಮಾಧಿ ಮಾಡಿದ ಸ್ಥಳವನ್ನು ಸಹ ತೋರಿಸಿದ್ದರು.

ಇತ್ತೀಚಿನ ತಿಂಗಳುಗಳಲ್ಲಿ ಈಜಿಪ್ಟ್‌ನಲ್ಲಿ ಸ್ತ್ರೀಹತ್ಯೆಗಳು ಹೆಚ್ಚಿವೆ. ಕಳೆದ ವಾರ, ಕಾಲೇಜು ವಿದ್ಯಾರ್ಥಿನಿಯೊಬ್ಬ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅಲ್ಲದೇ ಜುಲೈ ಅಂತ್ಯದಲ್ಲಿ ವಿದ್ಯಾರ್ಥಿ ಹತ್ಯೆಯ ಹಂತಕನ ಮರಣದಂಡನೆಯನ್ನು ಮಾಧ್ಯಮಗಳು ನೇರ ಪ್ರಸಾರ ಮಾಡುವಂತೆ ಕೂಡಾ ನ್ಯಾಯಾಲಯವು ಆದೇಶಿಸಿತ್ತು.

ಈಜಿಪ್ಟ್ ಅಧಿಕಾರಿಗಳ ಪ್ರಕಾರ, 2015 ರಲ್ಲಿ ಸುಮಾರು 8 ಮಿಲಿಯನ್ ಮಹಿಳೆಯರು ಸಾರ್ವಜನಿಕವಾಗಿ ಗಂಡ, ಸಂಬಂಧಿಕರು ಅಥವಾ ಅಪರಿಚಿತರಿಂದ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.

ಈಜಿಪ್ಟ್‌ನಲ್ಲಿನ ಪಿತೃಪ್ರಭುತ್ವದ ಶಾಸನಗಳು ಮತ್ತು ಇಸ್ಲಾಂನ ಸಂಪ್ರದಾಯವಾದಿ ವ್ಯಾಖ್ಯಾನಗಳು ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿವೆ. ಅಷ್ಟೇ ಅಲ್ಲ ಮಹಿಳೆಯರ ವಿರುದ್ಧ ಹಿಂಸೆಯ ಸಂಸ್ಕೃತಿಯನ್ನು ಸೃಷ್ಟಿಸಲು ತಮ್ಮದೇ ಆದ ಕೊಡುಗೆ ನೀಡಿವೆ ಎಂಬ ವರದಿಗಳಿವೆ.

ಇದನ್ನೂ ಓದಿ: ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.