ETV Bharat / international

ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ - etv bharat kannada

ಇಂಡೋನೇಷ್ಯಾದಲ್ಲಿ ಭೂಕಂಪ- 6.2 ತೀವ್ರತೆಯಲ್ಲಿ ಕಂಪಿಸಿದ ಭೂಮಿ- ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ

Earthquake
ಟರ್ಕಿ
author img

By

Published : Feb 24, 2023, 6:46 AM IST

Updated : Feb 24, 2023, 8:57 AM IST

ಜಕಾರ್ತಾ( ಇಂಡೋನೇಷ್ಯಾ): ಚೀನಾ ಮತ್ತು ತಜಕಿಸ್ತಾನ ಗಡಿಯಲ್ಲಿ ಗುರುವಾರ ಭೂಮಿ ನಡುಗಿದ ಬೆನ್ನಲ್ಲೇ ಇದೀಗ ಇಂಡೋನೇಷ್ಯಾನದಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪನ ಹಲ್ಮೆಹೆರಾ ಉತ್ತರ ಇಂಡೋನೇಷ್ಯಾದಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್​ಸಿಎಸ್) ತಿಳಿಸಿದೆ. ಭೂಕಂಪನವು 99 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಇಂದು ತಡರಾತ್ರಿ ಅನುಭವವಾಗಿದೆ.

"6.2 ತೀವ್ರತೆಯ ಭೂಕಂಪನವು ಫೆಬ್ರವರಿ 24, ಶುಕ್ರವಾರದಂದು 99 ಕಿ.ಮೀ ಆಳದಲ್ಲಿ ಹಲ್ಮೆಹೆರಾ ಉತ್ತರ ಇಂಡೋನೇಷ್ಯಾದಲ್ಲಿ ತಡರಾತ್ರಿ ಸಂಭವಿಸಿದೆ" ಎಂದು ಎನ್​ಸಿಎಸ್​ ಟ್ವೀಟ್​ ಮಾಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ನಾಲ್ಕನೇ ಭೂಕಂಪಕ್ಕೆ ನಲುಗಿದ ಟರ್ಕಿ, ಸಿರಿಯಾ: ಮೂರು ಪ್ರಬಲ ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ನಲುಗಿರುವ ಮಧ್ಯೆಯೇ ಮತ್ತೊಂದು ಭೂಕಂಪ ಸಂಭವಿಸಿದ್ದು, ಉಭಯ ದೇಶಗಳನ್ನು ನಡುಗಿಸಿದೆ. ಸಿರಿಯಾದ ಗಡಿಯಲ್ಲಿರುವ ದಕ್ಷಿಣ ಟರ್ಕಿ ಪ್ರಾಂತ್ಯದ ಹಟಾಯ್​ನಲ್ಲಿ 5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ವಿಪತ್ತು ಸಂಸ್ಥೆ ತಿಳಿಸಿದೆ. ಭೂಕಂಪವು 9.76 ಕಿಮೀ ಆಳದಲ್ಲಿ ಸಂಭವಿಸಿದ್ದು, ಗುರುವಾರ ಸಂಜೆ 6.53 ಗಂಟೆಗೆ ಈ ಅನುಭವವಾಗಿದೆ. ಯಾವುದೇ ಹೊಸ ಸಾವು ನೋವುಗಳು ವರದಿಯಾಗಿಲ್ಲ.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ 'ಸಾವಿನ ಭೂಕಂಪ'.. 640 ಜನರ ಬಲಿ ಪಡೆದ ಪ್ರಕೃತಿ.. ಭಾರತದಿಂದ ನೆರವು!

ಫೆಬ್ರವರಿ 6 ರಂದು ನಸುಕಿನ ಜಾವ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪ್ರಬಲ ಭೂಮಿ ಕಂಪನಕ್ಕೆ ಜನರು ತತ್ತರಿಸಿ ಹೋಗಿದ್ದರು. ಕಲ್ಲು, ಮಣ್ಣು, ಸಿಮೆಂಟ್​ ಸೇರಿದಂತೆ ಇತರ ಕಟ್ಟಡದ ಅವಶೇಷಗಳಡಿ ಸಿಲುಕಿ ಮಕ್ಕಳು, ವೃದ್ಧರು ಸೇರಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಮತ್ತೆರಡು ಬಾರಿ ಭೂಮಿ ನಡುಗಿತ್ತು. ಫೆಬ್ರವರಿ 21 ರಂದು 6.4 ತೀವ್ರತೆಯಲ್ಲಿ ಭೂಮಿ ನಲುಗಿ ಒಂದಿಷ್ಟು ಮಂದಿಯನ್ನು ಬಲಿ ಪಡೆದುಕೊಂಡಿತ್ತು.

ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 47,000 ದಾಟಿದೆ. ಬಹುಮಡಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ಈಗಾಗಲೇ ಮೃತಪಟ್ಟವರ ಸಂಖ್ಯೆ 47,224 ಆಗಿದೆ ಎಂದು ಟರ್ಕಿಯ ಗೃಹ ಸಚಿವ ಸುಲೇಮನ್​ ಸೊಯ್ಲು ತಿಳಿಸಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಬಹುಮಡಿ ಕಟ್ಟಡಗಳು ಧ್ವಂಸಗೊಂಡಿದೆ. ಇವುಗಳ ಅಡಿ ಸಿಲುಕಿರುವ ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಚೀನಾ ಗಡಿ ಬಳಿಯ ತಜಕಿಸ್ತಾನದಲ್ಲಿ ಭೂಕಂಪನ: ಚೀನಾ ಮತ್ತು ತಜಕಿಸ್ತಾನ ಗಡಿಯಲ್ಲಿ ಗುರುವಾರ 6.8 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದು ತಜಕಿಸ್ತಾನದ ಮುರ್ಘೋಬ್​ನ ಪಶ್ಚಿಮಕ್ಕೆ 67 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು 20 ಕಿ.ಮೀ ಆಳದಲ್ಲಿ ಸಂಭವಿಸಿದೆ. ಈ ಪ್ರದೇಶವು ಚೀನಾದಿಂದ ದೂರದಲ್ಲಿದ್ದು ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.

ಇದನ್ನೂ ಓದಿ: ಟರ್ಕಿ, ಸಿರಿಯಾಗೆ "ಸೋಮವಾರ" ಶಾಪ: ಮತ್ತೊಂದು ಭೂಕಂಪನದಿಂದ ತತ್ತರಿಸಿದ ದೇಶಗಳು

Last Updated : Feb 24, 2023, 8:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.