ನವದೆಹಲಿ: ಇಂದು ಮುಂಜಾನೆ 3.52ರ ಸುಮಾರಿಗೆ ಭಾರತದ ಗಡಿ ರಾಷ್ಟ್ರವಾದ ಮ್ಯಾನ್ಮಾರ್‌ನ ಬರ್ಮಾದಲ್ಲಿ 5.2 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ ಭೂಕಂಪದ 140 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಯಾವುದೇ ಸಾವು, ನೋವಿನ ಬಗ್ಗೆ ವರದಿಯಾಗಿಲ್ಲ.
ಮ್ಯಾನ್ಮಾರ್‌ನ ಬರ್ಮಾದಲ್ಲಿ ಭೂಕಂಪವಾದ ಹಿನ್ನೆಲೆಯಲ್ಲಿ ದೇಶದ ಗಡಿ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಭೂಮಿ ಕಂಪಿಸಿರುವ ಸಾಧ್ಯತೆ ಇದೆ.
-
Earthquake of Magnitude:5.2, Occurred on 30-09-2022, 03:52:37 IST, Lat: 23.09 & Long: 95.01, Depth: 140 Km ,Location: 162km NW of Burma, Myanmar for more information Download the BhooKamp App https://t.co/etFR1tlGfs @Indiametdept @ndmaindia pic.twitter.com/lzvlAKjAsS
— National Center for Seismology (@NCS_Earthquake) September 29, 2022 " class="align-text-top noRightClick twitterSection" data="
">Earthquake of Magnitude:5.2, Occurred on 30-09-2022, 03:52:37 IST, Lat: 23.09 & Long: 95.01, Depth: 140 Km ,Location: 162km NW of Burma, Myanmar for more information Download the BhooKamp App https://t.co/etFR1tlGfs @Indiametdept @ndmaindia pic.twitter.com/lzvlAKjAsS
— National Center for Seismology (@NCS_Earthquake) September 29, 2022Earthquake of Magnitude:5.2, Occurred on 30-09-2022, 03:52:37 IST, Lat: 23.09 & Long: 95.01, Depth: 140 Km ,Location: 162km NW of Burma, Myanmar for more information Download the BhooKamp App https://t.co/etFR1tlGfs @Indiametdept @ndmaindia pic.twitter.com/lzvlAKjAsS
— National Center for Seismology (@NCS_Earthquake) September 29, 2022
1956ರಲ್ಲಿ ಮ್ಯಾನ್ಮಾರ್‌ನ ಮಾವ್ಲೈಕ್ನಲ್ಲಿ 7.0 ತೀವ್ರತೆಯ ಭಾರಿ ಭೂಕಂಪನ ಸಂಭವಿಸಿತ್ತು. ಈ ವೇಳೆ ಸುಮಾರು 38 ಜನರು ಸಾವನ್ನಪ್ಪಿದ್ದರು. 2012ರಲ್ಲಿ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿ 26 ಜನರು ಪ್ರಾಣ ಬಿಟ್ಟರೆ, 2016ರಲ್ಲಿ 6 ತೀವ್ರತೆಯ ಸಂಭವಿಸಿದ ಭೂಕಂಪದಲ್ಲಿ 13 ಮಂದಿ ಮೃತಪಟ್ಟಿದ್ದರು. ಈಗ ಬರ್ಮಾದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.