ಅಂಕಾರಾ: ಪಶ್ಚಿಮ ಏಷ್ಯಾದ ದೇಶ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇಂದು ಬೆಳಗ್ಗೆ 6:28ಕ್ಕೆ ಭೂಕಂಪನದ ಅನುಭವವಾಗಿದೆ. ಮಾಹಿತಿ ಪ್ರಕಾರ, ಅಂಕಾರಾದಿಂದ ಪಶ್ಚಿಮ-ವಾಯುವ್ಯಕ್ಕೆ 186 ಕಿ.ಮೀ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ತಿಳಿದುಬಂದಿಲ್ಲ.
ಇದನ್ನೂ ಓದಿ: ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
ದಕ್ಷಿಣ ಅಮೆರಿಕದ ದೇಶ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಮಂಗಳವಾರ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಬಾಜಾ ಕ್ಯಾಲಿಫೋರ್ನಿಯಾದ ಲಾಸ್ ಬ್ರಿಸಾಸ್‌ನ ಪಶ್ಚಿಮ-ನೈಋತ್ಯಕ್ಕೆ ಸುಮಾರು 30 ಕಿಮೀ (18.6 ಮೈಲುಗಳು) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಉಳಿದಂತೆ, ಇತ್ತೀಚೆಗೆ ವಿಶ್ವದ ವಿವಿಧೆಡೆ ಸಂಭವಿಸಿದ ಭೂಕಂಪನಗಳ ವರದಿ ಹೀಗಿದೆ..
- ಮಂಗಳವಾರ ಮುಂಜಾನೆ ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 7.3ರ ತೀವ್ರತೆ ದಾಖಲಾಗಿತ್ತು.
- ಕಳೆದ ಎರಡು ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ 162 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ಭೀಕರ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ: ಮೃತರ ಸಂಖ್ಯೆ 162ಕ್ಕೆ ಏರಿಕೆ