ETV Bharat / international

ಭಯೋತ್ಪಾದನೆ ಎದುರಿಸಲು ಆಫ್ಘನ್​​​​ ಸಾಮರ್ಥ್ಯ ಹೆಚ್ಚಿಸುವ ಅಗತ್ಯವಿದೆ: ಭದ್ರತಾ ಸಂವಾದದಲ್ಲಿ ದೋವಲ್ ಪ್ರತಿಪಾದನೆ

ಭಾರತವು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಮೂಲಸೌಕರ್ಯ, ಸಂಪರ್ಕ ಮತ್ತು ಮಾನವೀಯ ನೆರವಿನ ಮೇಲೆ ಕೇಂದ್ರೀಕರಿಸುತ್ತಲೇ ಬಂದಿದೆ. ತಾಲಿಬಾನ್ ಆಡಳಿತ ಜಾರಿಯಾದ ಮೇಲೂ ಭಾರತವು ಈಗಾಗಲೇ 17 ಸಾವಿರ ಮಿಲಿಯನ್​ ಟನ್​ ಗೋಧಿ 5 ಲಕ್ಷ ಡೋಸ್ ಕೋವಾಕ್ಸಿನ್, 13 ಟನ್ ಅಗತ್ಯ ಔಷಧಗಳು, 60 ಮಿಲಿಯನ್ ಡೋಸ್ ಪೋಲಿಯೊ ಲಸಿಕೆಗಳನ್ನು ಒದಗಿಸಿದೆ ಎಂದು ದೋವಲ್ ಮಾಹಿತಿ ನೀಡಿದರು.

National Security Adviser Ajit Doval
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
author img

By

Published : May 27, 2022, 3:36 PM IST

ದುಶಾಂಬೆ (ತಜಕಿಸ್ತಾನ): ಭಾರತವು ಅಫ್ಘಾನಿಸ್ತಾನದ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುವ ಭಯೋತ್ಪಾದನೆ ಮತ್ತು ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಯುದ್ಧಪೀಡಿತ ಅಫ್ಘಾನಿಸ್ತಾನದ ಸಾಮರ್ಥ್ಯ ಹೆಚ್ಚಿಸಬೇಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆ ನೀಡಿದರು.

ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದ ಅಫ್ಘಾನಿಸ್ತಾನ ಬಗೆಗಿನ 4ನೇ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ಮಾತನಾಡಿದ ಅವರು, ಭಾರತವು ಅಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಹೊಂದಿದೆ. ಯಾವಾಗಲೂ ಅಫ್ಘಾನಿಸ್ತಾನದ ಜನರ ಪರವಾಗಿ ಭಾರತ ನಿಂತಿದೆ. ತನ್ನದೇ ಆದ ವಿಧಾನದಲ್ಲಿ ಅಫ್ಘಾನಿಸ್ತಾನಕ್ಕೆ ಮಾರ್ಗದರ್ಶನ ಮಾಡುವುದನ್ನೂ ಮುಂದುವರಿಸುತ್ತದೆ ಎಂದು ಹೇಳಿದರು.

ಭಾರತ ನಿಲುವಿನಲ್ಲಿ ಬದಲಾವಣೆ ಇಲ್ಲ : ತಜಕಿಸ್ತಾನ್, ರಷ್ಯಾ, ಕಜಕಿಸ್ತಾನ್, ಉಜ್ಬೇಕಿಸ್ತಾನ್, ಇರಾನ್, ಕಿರ್ಗಿಸ್ತಾನ್ ಮತ್ತು ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ದ ಈ ಸಂವಾದದಲ್ಲಿ ದೋವಲ್, ಶತಮಾನಗಳಿಂದ ಅಫ್ಘಾನಿಸ್ತಾನದ ಜನರೊಂದಿಗೆ ಭಾರತಕ್ಕೆ ವಿಶೇಷ ಸಂಬಂಧ ಇದೆ. ಭಾರತದ ತನ್ನ ಕಾರ್ಯ ವಿಧಾನ ಮತ್ತು ಮಾರ್ಗದರ್ಶನ ಮಾಡುವುದರಲ್ಲಿ ಯಾವುದೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಅಲ್ಲದೇ, ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ಪ್ರದೇಶದಿಂದ ಹೊರಹೊಮ್ಮುವ ಭಯೋತ್ಪಾದನೆಯಿಂದ ಉಂಟಾಗುವ ಅಪಾಯಗಳನ್ನು ಎದುರಿಸಲು ರಚನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯ ಇದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಫ್ಘಾನಿಸ್ತಾನದ ಸಾಮರ್ಥ್ಯ ಹೆಚ್ಚಿಸಲು ಎಲ್ಲರೂ ಭಾಗವಹಿಸುವ ಅವಶ್ಯಕತೆಯಿದೆ ಎಂದೂ ಪ್ರತಿಪಾದಿಸಿದರು.

ಮಾನವೀಯ ನೆರವಿನ ಮೇಲೆ ಕೇಂದ್ರೀಕರಣ: ಅಫ್ಘಾನಿಸ್ತಾನದ ಪ್ರತಿ ನಾಗರಿಕನ ಮಾನವ ಹಕ್ಕುಗಳ ರಕ್ಷಣೆ ಜೊತೆಗೆ ಬದುಕುವ ಹಕ್ಕು ಮತ್ತು ಗೌರವಯುತ ಜೀವನಕ್ಕೆ ಅಗ್ರ ಆದ್ಯತೆ ನೀಡಬೇಕು. ಇದರ ನೆರವು ಎಲ್ಲರಿಗೂ ಲಭ್ಯವಾಗಬೇಕು. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿ ಎಲ್ಲ ಕಟ್ಟುಪಾಡುಗಳ ಗೌರವ ರಕ್ಷಿಸಿಕೊಳ್ಳಬೇಕು. ಭಾರತವು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಮೂಲಸೌಕರ್ಯ, ಸಂಪರ್ಕ ಮತ್ತು ಮಾನವೀಯ ನೆರವಿನ ಮೇಲೆ ಕೇಂದ್ರೀಕರಿಸುತ್ತಲೇ ಬಂದಿದೆ ಎಂದು ದೋವಲ್ ತಿಳಿಸಿದರು.

ಆಗಸ್ಟ್ 2021ರ ನಂತರ (ತಾಲಿಬಾನ್ ಆಡಳಿತ ಜಾರಿ) ಭಾರತವು ಈಗಾಗಲೇ 17 ಸಾವಿರ ಮಿಲಿಯನ್​ ಟನ್​ ಗೋಧಿ 5 ಲಕ್ಷ ಡೋಸ್ ಕೋವಾಕ್ಸಿನ್, 13 ಟನ್ ಅಗತ್ಯ ಔಷಧಿಗಳು ಮತ್ತು ಚಳಿಗಾಲಕ್ಕೆ ಉಡುಪುಗಳು ಮತ್ತು 60 ಮಿಲಿಯನ್ ಡೋಸ್ ಪೋಲಿಯೊ ಲಸಿಕೆಗಳನ್ನು ಒದಗಿಸಿದೆ. ಉತ್ತಮ ಭವಿಷ್ಯಕ್ಕಾಗಿ ಮಹಿಳೆಯರು ಮತ್ತು ಯುವಕರು ನಿರ್ಣಾಯಕರಾಗಿದ್ದಾರೆ.

ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಮಹಿಳೆಯರಿಗೆ ಮತ್ತು ಯುವಕರಿಗೆ ಉದ್ಯೋಗ ಒದಗಿಸುವುದು ಖಾತ್ರಿ ಪಡಿಸಿಕೊಳ್ಳಬೇಕು. ಇದರಿಂದ ಯುವಕರಲ್ಲಿ ತೀವ್ರಗಾಮಿ ಸಿದ್ಧಾಂತಗಳನ್ನು ಕಡಿಮೆಯಾಗಿ ಧನಾತ್ಮಕ ಸಾಮಾಜಿಕ ಪರಿಣಾಮ ಹೆಚ್ಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಮೂಹಿಕ ಪ್ರಯತ್ನದೊಂದಿಗೆ ನಾವು ಮತ್ತೊಮ್ಮೆ ಸಮೃದ್ಧ ಅಫ್ಘಾನಿಸ್ತಾನ ರಾಷ್ಟ್ರವನ್ನಾಗಿ ನಿರ್ಮಿಸಿ ಜನರು ಹೆಮ್ಮೆ ಪಡುವಂತೆ ಮಾಡಲು ಸಹಾಯ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಇದರ ಬಳಿಕ ಹೆಚ್ಚುತ್ತಿರುವ ಭಯೋತ್ಪಾದನೆ, ಆಮೂಲಾಗ್ರೀಕರಣ ಮತ್ತು ಮಾದಕವಸ್ತು ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸುವಲ್ಲಿ ಪ್ರಾಯೋಗಿಕ ಸಹಕಾರಕ್ಕಾಗಿ ನೆರವು ದೃಢಪಡಿಸುವ ಉದ್ದೇಶವನ್ನು ಈ ಸಂವಾದ ಹೊಂದಿದೆ. ನವದೆಹಲಿಯಲ್ಲಿ ನವೆಂಬರ್​ನಲ್ಲಿ ಭಾರತವು ಇಂತಹ​ ಸಂವಾದ ಆಯೋಜಿಸಿತ್ತು. ಇದರಲ್ಲಿ ಇರಾನ್ ಮತ್ತು ರಷ್ಯಾ ಸೇರಿದಂತೆ ಎಂಟು ರಾಷ್ಟ್ರಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಲೇಖಕಿ ಗೀತಾಂಜಲಿ ಶ್ರೀ ಅವರ 'ಟಾಂಬ್ ಆಫ್ ಸ್ಯಾಂಡ್'ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.