ETV Bharat / international

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೋನಾಲ್ಡ್​ ಟ್ರಂಪ್​ ಘೋಷಣೆ

ಅಮೆರಿಕವನ್ನು ಮತ್ತೊಮ್ಮೆ ವೈಭವಯುತವಾಗಿ ಮಾಡಲು, ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೋನಾಲ್ಡ್​ ಟ್ರಂಪ್​ ಘೋಷಣೆ
http://10.10.50.90:6060/reg-lowres/15-November-2022/35548b3204d2037329d9a4aa947e497a_1511a_1668531906_515.jpg
author img

By

Published : Nov 16, 2022, 3:02 PM IST

ವಾಷಿಂಗ್ಟನ್​: 2020ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನದ ವಿರುದ್ಧ ತೀಕ್ಷ್ಣದಾಳಿ ನಡೆಸಿದ್ದ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಮತ್ತೊಮ್ಮೆ ಚುನಾವಣೆಗೆ ಸಿದ್ದರಾಗುತ್ತಿದ್ದು, 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಎರಡು ಬಾರಿ ದೋಷಾರೋಪಣೆಗೆ ಗುರಿಯಾಗಿರು ಇತಿಹಾಸ ಹೊಂದಿರುವ ಟ್ರಂಪ್​ ತಮ್ಮ ಅಧಿಕಾರ ಹಸ್ತಾಂತರದ ವೇಳೆ ಶಾಂತಿಯುತ ಮಾರ್ಗ ಅನುಸರಿಸಲಿಲ್ಲ.

ಅಮೆರಿಕವನ್ನು ಮತ್ತೊಮ್ಮೆ ವೈಭವಯುತವಾಗಿ ಮಾಡಲು, ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಇಂದು ರಾತ್ರಿ ಘೋಷಿಸುತ್ತಿದ್ದೇನೆ. ಇದು ಒಟ್ಟಾರೆಯಾಗಿ ನಮ್ಮ ಪ್ರಚಾರ ನಡೆಸೋಣ ಎಂದು 76 ವರ್ಷದ ಟ್ರಂಪ್ ತಮ್ಮ ಬೆಂಬಲಿಗರನ್ನು ಹುರಿದುಂಬಿಸಿದರು

ನಾನು ನಿಮ್ಮ ಧ್ವನಿ ಎಂದ ಅವರು, 2024ರಲ್ಲಿ ಜೋ ಬೈಡನ್​ ಡೆಮಾಕ್ರಟ್​ನಿಂದ ಮರು ಅಯ್ಕೆಯಾಗುವುದಿಲ್ಲ ಎಂದರು. ಫ್ಲೋರಿಡಾದ ತಮ್ಮ ರೆಸಾರ್ಟ್​ನಲ್ಲಿ 400 ಅತಿಥಿಗಳ ಮುಂದೆ ಘೋಷಣೆ ಹೊರಡಿಸಿದ ಬಳಿಕ ಅವರು ಅಗತ್ಯವಾದ ಪೇಪರ್​ ವರ್ಕ್​ ಕೂಡ ಮಾಡಿ ಮುಗಿಸಿದರು.

ಜಗತ್ತು ಇನ್ನು ಕೂಡ ದೇಶದ ಆ ವೈಭವವನ್ನು ಕಂಡಿಲ್ಲ. ನೀವು ನಂಬಿ, ಇನ್ನು ನಾವು ಆ ಹಿಡಿತ ಸಾಧಿಸಿಲ್ಲ. ಈ ಹಿನ್ನಲೆ ನಾನು ಈ ತೀರ್ಮಾನ ಕೈಗೊಂಡಿದ್ದೇನೆ. ನೀವು ತಯಾರಾಗುತ್ತಿದ್ದೀರಾ? ಮತ್ತು ನಾನು ಕೂಡ ಎಂದ ಅವರು, ರಿಪಬ್ಲಿಕನ್ ಪಕ್ಷವು ಮಾಡಬೇಕಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ರಿಪಬ್ಲಿಕನ್ ಅಭ್ಯರ್ಥಿಗಳು ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ಅವರು ಇದೇ ವೇಳೆ ಒತ್ತಿ ಹೇಳಿದರು.

ನಮ್ಮ ಪ್ರಚಾರ ಸಮಸ್ಯೆಗಳು ಯಶಸ್ಸಿನ ಬಗ್ಗೆ ಇರುತ್ತದೆ. ನಾವು ಅತ್ಯುನ್ನತ ಗುರಿಗಳನ್ನು ಸಾಧಿಸುವವರೆಗೆ ನಮ್ಮ ದೇಶವನ್ನು ಹಿಂದೆಂದಿಗಿಂತಲೂ ದೊಡ್ಡದಾಗಿಸುವವರೆಗೆ ನಾವು ವಿಶ್ರಮಿಸುವುದಿಲ್ಲ. ಇದನ್ನು ನಾವು ಮಾಡಿಯೇ ತಿರುತ್ತೇವೆ ಎಂದು ಟ್ರಂಪ್​​ ಘೋಷಿಸಿದರು. ಅಮೆರಿಕ ಕಠಿಣ ಸಮಯವನ್ನು ಎದುರಿಸುತ್ತಿದೆ. ನಾವು ಒಟ್ಟಾಗಿ ಅತ್ಯಂತ ಭ್ರಷ್ಟ ಶಕ್ತಿಗಳು ಮತ್ತು ಭದ್ರವಾದ ಹಿತಾಸಕ್ತಿಗಳನ್ನು ಹಿಂಪಡೆಯಬೇಕು ಎಂದಿದ್ದಾರೆ.

ಇಂದಿನಿಂದ 2024 ರ ಚುನಾವಣೆಯ ದಿನದವರೆಗೆ, ಹಿಂದೆ ಯಾರೂ ಹೋರಾಟದ ರೀತಿಯಲ್ಲಿ ಹೋರಾಡುತ್ತೇನೆ. ನಮ್ಮ ದೇಶವನ್ನು ಒಳಗಿನಿಂದ ನಾಶಮಾಡಲು ಪ್ರಯತ್ನಿಸುತ್ತಿರುವ ತೀವ್ರಗಾಮಿ ಎಡ ಪ್ರಜಾಪ್ರಭುತ್ವವಾದಿಗಳನ್ನು ನಾವು ಸೋಲಿಸುತ್ತೇವೆ. ನಮ್ಮ ವಿಜಯವು ಅಮೆರಿಕದ ಭವಿಷ್ಯಕ್ಕಾಗಿ ದೊಡ್ಡ ಆಲೋಚನೆಗಳು, ಧೈರ್ಯಶಾಲಿ ನಿರ್ಧಾರ, ದಿಟ್ಟ ಮಹತ್ವಾಕಾಂಕ್ಷೆಗಳು ಕನಸುಗಳ ಮೇಲೆ ನಿರ್ಮಿಸಲಾಗುವುದು. ಈ ಕನಸುಗಳೇ ನಮಗೆ ಧೈರ್ಯ ನೀಡುತ್ತವೆ ಎಂದರು.

ಇದನ್ನೂ ಓದಿ: ಜಿ20 ಶೃಂಗಸಭೆ, 2ನೇ ದಿನ: ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ ಗಿಡ ನೆಟ್ಟ ವಿಶ್ವ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.