ETV Bharat / international

ಪ್ರಧಾನಿ ಮೋದಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು ಸೇರಿ 400 ಅತಿಥಿಗಳು ಭಾಗಿ - ಟೆಕ್ ಜಗತ್ತಿನ ಚಲನಚಿತ್ರದ ಕಲಾವಿದರು

ಪ್ರಧಾನಿ ಮೋದಿಯವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಕಲಾವಿದರು, ಕಾರ್ಪೊರೇಟ್ ನಾಯಕರು, ಸಂಸದರು, ಶ್ರೀಮಂತರು ಸೇರಿದಂತೆ ಸುಮಾರು 400 ಗಣ್ಯರು ಭಾಗಿಯಾಗಿದ್ದರು.

Corporate leaders  lawmakers among guests at State Dinner  State Dinner hosted for PM Modi  ಪ್ರಧಾನಿ ಮೋದಿಯವರ ಭೋಜನಕೂಟ  ಕಾರ್ಪೊರೇಟ್ ನಾಯಕರು  ಶ್ರೀಮಂತರು ಸೇರಿದಂತೆ ಅನೇಕ ಗಣ್ಯರು ಭಾಗಿ  ಗೌರವಾರ್ಥ ಆಯೋಜಿಸಲಾದ ರಾಜ್ಯ ಔತಣಕೂಟ  ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ  ಗೌರವಾರ್ಥ ಆಯೋಜಿಸಲಾದ ರಾಜ್ಯ ಔತಣಕೂಟ  ಟೆಕ್ ಜಗತ್ತಿನ ಚಲನಚಿತ್ರದ ಕಲಾವಿದರು  400ಕ್ಕೂ ಹೆಚ್ಚು ಅತಿಥಿಗಳು ಭಾಗಿ
ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು, ಶಾಸಕರು ಸೇರಿ 400 ಅತಿಥಿಗಳು ಭಾಗಿ
author img

By

Published : Jun 23, 2023, 7:01 AM IST

Updated : Jun 23, 2023, 7:28 AM IST

ಭೋಜನಕೂಟದಲ್ಲಿ ಕಾರ್ಪೊರೇಟ್ ನಾಯಕರು, ಶಾಸಕರು ಸೇರಿ 400 ಅತಿಥಿಗಳು ಭಾಗಿ

ವಾಷಿಂಗ್ಟನ್, ಅಮೆರಿಕ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುಎಸ್ ಕಾಂಗ್ರೆಸ್​ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಶ್ವೇತಭವನದಲ್ಲಿ ಔತಣಕೂಟಕ್ಕೆ ಆಗಮಿಸಿದರು. ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಭೇಟಿಯ ಭಾಗವಾಗಿ ಭೋಜನಕೂಟ ಆಯೋಜಿಸಿದ್ದರು. ಶ್ವೇತಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿ ಸ್ವಾಗತಿಸಿದರು.

ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಆಯೋಜಿಸಲಾದ ವಿಶೇಷ ಔತಣಕೂಟಕ್ಕೆ ಟೆಕ್ ಜಗತ್ತಿನ ಚಲನಚಿತ್ರದ ಕಲಾವಿದರು, ಫ್ಯಾಷನ್ ಉದ್ಯಮದ ಗಣ್ಯರು ಮತ್ತು ಕೈಗಾರಿಕೋದ್ಯಮಿಯ ಕೋಟ್ಯಧಿಪತಿಳು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಮಂತ ವ್ಯಕ್ತಿಗಳ ದಂಡೇ ಹರಿದುಬಂದಿದ್ದು ಗಮನಾರ್ಹ.

ಔತಣಕೂಟದಲ್ಲಿ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ಮಾಪಕ ಎಂ. ನೈಟ್ ಶ್ಯಾಮಲನ್, ಮಾನವ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್ III, ಟೆನ್ನಿಸ್ ದಂತಕಥೆ ಬಿಲ್ಲಿ ಜೀನ್ ಕಿಂಗ್, ಫ್ಯಾಶನ್ ಡಿಸೈನರ್ ರಾಲ್ಫ್ ಲಾರೆನ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಜೋಶುವಾ ಬೆಲ್ ಮತ್ತು ಉದ್ಯಮಿ ಫ್ರಾಂಕ್ ಇಸ್ಲಾಂ, ಭಾರತೀಯ ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಆನಂದ್ ಮಹೀಂದ್ರಾ, ಆ್ಯಪಲ್ ಸಿಇಒ ಟಿಮ್ ಕುಕ್ ಮತ್ತು ಕಾರ್ಪೊರೇಟ್ ನಾಯಕಿ ಇಂದಿರಾ ನೂಯಿ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಡೋಬ್‌ನ ಸಿಇಒಗಳಾದ ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಮತ್ತು ಶಾಂತನು ನಾರಾಯಣ್ ಸಹ ಔತಣಕೂಟ ಕಾರ್ಯಕ್ರಮದ ಅತಿಥಿಗಳಾಗಿದ್ದರು.

ಭಾರತೀಯ ಅಮೆರಿಕನ್ನರ ಶಾಸಕರ ಪಟ್ಟಿಯಲ್ಲಿ ಪ್ರಮೀಳಾ ಜಯಪಾಲ್, ಶ್ರೀ ತಾನೇದಾರ್, ರೋ ಖನ್ನಾ, ಅಮಿ ಬೇರಾ ಮತ್ತು ರಾಜಾ ಕೃಷ್ಣಮೂರ್ತಿ ಇದ್ದರು. ಔತಣಕೂಟದಲ್ಲಿ ಬೈಡನ್ ಕುಟುಂಬದ ಸದಸ್ಯರಾದ ಹಂಟರ್ ಬೈಡನ್, ಆಶ್ಲೇ ಬೈಡನ್, ಜೇಮ್ಸ್ ಬೈಡನ್ ಮತ್ತು ನವೋಮಿ ಬೈಡನ್ ನೀಲ್. ಪ್ರಧಾನಿ ಮೋದಿ ಅವರಿಗೆ ಉಪಾಹಾರ ಕೂಟ ಏರ್ಪಡಿಸಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಯುಎಸ್ ರಾಜತಾಂತ್ರಿಕರು ಮತ್ತು ಬೈಡನ್ ಆಡಳಿತದ ಸದಸ್ಯರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದ್ದರು.

ಮೋದಿ ಔತಣಕೂಟದಲ್ಲಿ ಸಸ್ಯಾಹಾರಿ ಭಕ್ಷ್ಯಗಳು: ಇನ್ನು ಈ ಭೋಜನಕೂಟದಲ್ಲಿ ಹೆಚ್ಚಾಗಿ ಸಸ್ಯಾಹಾರಿ ಭಕ್ಷ್ಯಗಳನ್ನು ಒಳಗೊಂಡಿತ್ತು. ಪ್ರಧಾನ ಮಂತ್ರಿ ಮೋದಿಯ ಆಹಾರದ ನಿರ್ಬಂಧಗಳನ್ನು ಗಮನಿಸಿ, ಮ್ಯಾರಿನೇಡ್ ಸಿರಿಧಾನ್ಯ, ಸ್ಟಫ್ಡ್ ಅಣಬೆಗಳು, ಹುರಿದ ಕಾರ್ನ್ ಕರ್ನಲ್ ಸಲಾಡ್ ಮತ್ತು ಏಲಕ್ಕಿ-ಇನ್ಫ್ಯೂಸ್ಡ್ ಸ್ಟ್ರಾಬೆರಿ ಶಾರ್ಟ್‌ಕೇಕ್, ಕಲ್ಲಂಗಡಿ ಮತ್ತು ಆವಕಾಡೊ ಸಾಸ್ ಮತ್ತು ಮುಖ್ಯವಾಗಿ ಪೊರ್ಟೊಬೆಲ್ಲೊ ಮಶ್ರೂಮ್‌ಗಳು ಹಾಗೂ ಕೆನೆ ಕೇಸರಿ-ಇನ್ಫ್ಯೂಸ್ಡ್ ರಿಸೊಟ್ಟೊವನ್ನು ಮಾಡಲಾಗಿತ್ತು.

ಅಷ್ಟೇ ಅಲ್ಲ ಈ ಭೋಜನಕೂಟದಲ್ಲಿ ಅತಿಥಿಗಳ ಕೋರಿಕೆಯ ಮೇರೆಗೆ ಸುಮಾಕ್ - ಹುರಿದ ಸಮುದ್ರ ಬಾಸ್, ನಿಂಬೆ-ಡಿಲ್ ಮೊಸರು ಸಾಸ್, ಕ್ರಿಸ್ಪ್ಡ್ ರಾಗಿ ಕೇಕ್​ಗಳು ಮತ್ತು ಬೇಸಿಗೆ ಸ್ಕ್ವ್ಯಾಷ್​ಗಳನ್ನು ಒಳಗೊಂಡಿತ್ತು. ಸಿಹಿತಿಂಡಿಗಾಗಿ ಗುಲಾಬಿ ಮತ್ತು ಏಲಕ್ಕಿ-ಇನ್ಫ್ಯೂಸ್ಡ್ ಸ್ಟ್ರಾಬೆರಿ ಶಾರ್ಟ್‌ಕೇಕ್ ಅನ್ನು ನೀಡಲಾಯಿತು. ಸ್ಟೋನ್ ಟವರ್ ಚಾರ್ಡೋನ್ನೆ "ಕ್ರಿಸ್ಟಿ" 2021, ಪಟೇಲ್ ರೆಡ್ ಬ್ಲೆಂಡ್ 2019 ಮತ್ತು ಡೊಮೈನ್ ಕಾರ್ನೆರೋಸ್ ಬ್ರೂಟ್ ರೋಸ್ ವೈನ್​ಗಳನ್ನು ಬಂದ ಅತಿಥಿಗಳಿಗೆ ಸರ್ವ್​ ಮಾಡಲಾಯಿತು.

ಶ್ವೇತಭವನದ ಸಾಮಾಜಿಕ ಕಾರ್ಯದರ್ಶಿ ಕಾರ್ಲೋಸ್ ಎಲಿಜಾಂಡೋ ಭೋಜನ ವ್ಯವಸ್ಥೆಯ ಪೂರ್ವವೀಕ್ಷಣೆ ಮಾಡಿದ್ದರು. ಪ್ರಥಮ ಮಹಿಳೆ ಪ್ರತಿ ಹಂತದಲ್ಲೂ ಈ ಭೋಜನಕೂಟವನ್ನು ಆಸ್ಥೆ ವಹಿಸಿ ಏರ್ಪಡಿಸಿದ್ದರು. ಪ್ರತಿ ಅತಿಥಿಯ ಅನುಭವವನ್ನು ವೈಯಕ್ತಿಕ ಮತ್ತು ಸುಂದರವಾಗಿರುವಂತೆ ಮಾಡಲು, ಅವರವರ ಇಷ್ಟದ ಭೋಜನವನ್ನು ತಯಾರಿಸಲಾಗಿತ್ತು. ಇನ್ನು ಈ ಔತಣಕೂಟ ಉದ್ದೇಶಿಸಿ ಮಾತನಾಡಿದ ಮೋದಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ವಿವರಿಸಿದರು.

ಓದಿ: ಭಾರತ- ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ

Last Updated : Jun 23, 2023, 7:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.