ಲಾಸ್ ಏಂಜಲೀಸ್ (ಅಮೆರಿಕ): ನಗರದ ಕಟ್ಟಡಗಳ ಸುತ್ತಲೂ ಹಠಾತ್ ಗಾಳಿ ಬೀಸುವಿಕೆಯಿಂದ ಉಂಟಾಗುವ ಅಸ್ಥಿರತೆಯು ಏರ್ ಟ್ಯಾಕ್ಸಿ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಸಂಶೋಧಕರು ಕಂಡುಹಿಡಿದ್ದಾರೆ. ಈ ಅಧ್ಯಯನವು 'ಡ್ರೋನ್ಸ್' ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಬೋಯಿಂಗ್, ಹ್ಯುಂಡೈ, ಏರ್‌ಬಸ್ ಮತ್ತು ಟೊಯೋಟಾದಂತಹ ಕಂಪನಿಗಳು ಪ್ರಯಾಣಿಕರನ್ನು ಆಕಾಶದಲ್ಲಿ ಸಾಗಿಸಲು ಏರ್ ಟ್ಯಾಕ್ಸಿ ಪರಿಚಯಿಸುವ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲು ಬಹುತೇಕ ಸಿದ್ಧವಾಗಿದೆ. ಮುಂದಿನ ದಶಕದೊಳಗೆ ಏರ್ ಟ್ಯಾಕ್ಸಿಗಳು ಕಾರ್ಯಾಚರಣೆ ಪ್ರಾರಂಭಿಸಲು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ಹೊಸ ನಿಯಮಗಳನ್ನು ರೂಪಿಸಿವೆ ಮತ್ತು ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ (CASA) ಕೂಡ ಈ ನಿಯಮಗಳನ್ನು ಅನುಸರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ಐಐಟಿ ಮದ್ರಾಸ್ನಿಂದ ಗಂಟೆಗೆ 200 ಕಿ.ಮೀ. ವೇಗದ ಏರ್ ಟ್ಯಾಕ್ಸಿ ವಿನ್ಯಾಸ! : ಎಷ್ಟು ಕೆಜಿ ಹೊತ್ತೊಯ್ಯುತ್ತೆ ಗೊತ್ತೇ?
ಇತ್ತೀಚಿನ ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಅಧ್ಯಯನಗಳು ಹೆಚ್ಚುತ್ತಿವೆ, RMIT ವಿಶ್ವವಿದ್ಯಾನಿಲಯದ ಅನ್‌ಕ್ರೂಡ್ ಏರ್‌ಕ್ರಾಫ್ಟ್ ಸಿಸ್ಟಮ್ಸ್ (UAS) ಸಂಶೋಧನಾ ತಂಡವು ನಗರದ ಕಟ್ಟಡಗಳ ಸುತ್ತಲೂ ಹಠಾತ್ ಗಾಳಿ ಬೀಸುವಿಕೆಯು ಹೇಗೆ ರೂಪುಗೊಳ್ಳುತ್ತದೆ ಮತ್ತು ವಿಮಾನವನ್ನು ಹೇಗೆ ಅಸ್ಥಿರಗೊಳಿಸುತ್ತದೆ ಎಂಬುದರ ಕುರಿತು ಸಂಶೋದನೆ ನಡೆಸಿದೆ.
"(Purpose-built vertiports) ಉದ್ದೇಶ-ನಿರ್ಮಿತ ವರ್ಟಿಪೋರ್ಟ್‌ಗಳು ಎಂದರೆ ನಾವು ಸಂಭವಿಸುವ ಅಪಾಯಕಾರಿ ಹರಿವಿನ ಪರಿಸ್ಥಿತಿಗಳನ್ನು ಕಡಿಮೆ ಮಾಡಲು ಜಿಯೋಮೆಟ್ರಿಕ್ ವಿನ್ಯಾಸ ವೈಶಿಷ್ಟ್ಯಗಳನ್ನು ಸಂಯೋಜಿಸಬಹುದು. ಏರ್ ಟ್ಯಾಕ್ಸಿಗಳಿಗೆ ಶಕ್ತಿಯುತ ಮೋಟಾರ್‌ಗಳು ಬೇಕಾಗುತ್ತವೆ, ಪ್ರಸ್ತುತ ನಮ್ಮ ಸಂಶೋಧನೆಯಲ್ಲಿ ಇದನ್ನು ಅನ್ವೇಷಿಸುತ್ತಿದ್ದೇವೆ. ಅಸ್ತಿತ್ವದಲ್ಲಿರುವ ಕಟ್ಟಡಗಳನ್ನು ವರ್ಟಿಪೋರ್ಟ್‌ಗಳಾಗಿ ಮರು ರೂಪಿಸಬಹುದು ಆದರೆ, ಲ್ಯಾಂಡಿಂಗ್ ಪ್ಯಾಡ್‌ಗಳ ಬಳಿ ಎರೋಡೈನಾಮಿಕ್ಸ್ ಅನ್ನು ಸುಧಾರಿಸಲು ಕೆಲ ಮಾರ್ಪಾಡುಗಳ ಅಗತ್ಯವಿದೆ" ಎಂದು ಸಂಶೋಧಕ ಮತ್ತು ಏರೋಸ್ಪೇಸ್ ಇಂಜಿನಿಯರ್ ಡಾ. ಅಬ್ದುಲ್ಘನಿ ಮೊಹಮ್ಮದ್ ತಿಳಿಸಿದ್ದಾರೆ.
ಇದನ್ನೂ ಓದಿ : ಭಾವನೆಗಳನ್ನು ಗುರುತಿಸುವ ತಂತ್ರಜ್ಞಾನ ಆವಿಷ್ಕಾರ : ಆಟಿಸಂ ಚಿಕಿತ್ಸೆಗೆ ಅನುಕೂಲ
ಇನ್ನು 2021 ರ ಏಪ್ರಿಲ್ ವೇಳೆಗೆ ಭಾರತೀಯ ತಂತ್ರಜ್ಞಾನ ವಿದ್ಯಾಲಯ ಮದ್ರಾಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗವು ಏರ್ ಟ್ಯಾಕ್ಸಿ ವಿನ್ಯಾಸಗೊಳಿಸಿತ್ತು, ಇದು ರಸ್ತೆ ಟ್ಯಾಕ್ಸಿಗಳಿಗಿಂತ ವೇಗವಾಗಿ ಆಕಾಶ ಮಾರ್ಗದಲ್ಲಿ ಸಂಚರಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಏರ್ ಟ್ಯಾಕ್ಸಿ ಸಾರ್ವಜನಿಕ ಬಳಕೆಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿವೆ ಎಂದು ಅಂದು ತಿಳಿಸಲಾಗಿತ್ತು.
ಇದನ್ನೂ ಓದಿ : ಜರ್ಮನ್ ಮಾಧ್ಯಮ ಸಂಸ್ಥೆ ಆಕ್ಸೆಲ್ ಸ್ಪ್ರಿಂಗರ್ನಲ್ಲಿ ಶೇ 20ರಷ್ಟು ಉದ್ಯೋಗ ಕಡಿತ: ಮಾನವರ ಬದಲು AI ನಿಂದ ಕೆಲಸ!
100 ಕಿ.ಮೀ ವ್ಯಾಪ್ತಿಯಲ್ಲಿ ಐದು ಕೆ.ಜಿ ವಸ್ತುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಏರ್ ಟ್ಯಾಕ್ಸಿ ಜುಲೈನಲ್ಲಿ ಪರಿಚಯಿಸಲಾಗುವುದು ಎಂದು ಐಐಟಿ ಮದ್ರಾಸ್ ಹೇಳಿತ್ತು. 5 ಕೆಜಿ ಪೇಲೋಡ್ ಸಾಮರ್ಥ್ಯದ ಸಣ್ಣ ಇ ಪ್ಲೇನ್ ಟ್ಯಾಕ್ಸಿಯನ್ನು ನಾವು ಪರಿಚಯಿಸಲು ನಾವು ಯೋಜಿಸಿದ್ದೇವೆ. ಕಠಿಣ ಮತ್ತು ಸಂಚಾರ ದಟ್ಟಣೆ ಇದ್ದ ವೇಳೆ ರಸ್ತೆ ಸಂಚಾರ ಮಾರ್ಗದಲ್ಲಿ ಕಸಿ ಶಸ್ತ್ರಚಿಕಿತ್ಸೆಗೆ ಸಾಗಿಸುವ ಪ್ರಮುಖ ಮಾನವ ಅಂಗಗಳನ್ನು ಸಾಗಿಸಲು ಈ ವಾಹನವನ್ನು ಬಳಸಬಹುದು. ಅಗತ್ಯ ಔಷಧಿ, ಲಸಿಕೆ ಮತ್ತು ಉಪಕರಣಗಳನ್ನು ಸಾಗಿಸಬಹುದು ಎಂದು ತಿಳಿಸಿತ್ತು.
ಇದನ್ನೂ ಓದಿ : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಏರ್ ಟ್ಯಾಕ್ಸಿ ಕಾರ್ಯಾಚರಣೆ