ETV Bharat / international

China-India crisis: ಭಾರತದ ಪತ್ರಕರ್ತರು ದೇಶ ತೊರೆಯುವಂತೆ ಚೀನಾ ಸೂಚನೆ

ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ವಿಷಮಯವಾಗಿದ್ದು, ಅದು ಮಾಧ್ಯಮ ಕ್ಷೇತ್ರಕ್ಕೂ ಹರಡಿದೆ. ಪತ್ರಕರ್ತರು ದೇಶ ತೊರೆಯುವಂತೆ ಸೂಚನೆ ಬಂದಿದೆ.

ಚೀನಾ ಭಾರತ ಸಂಘರ್ಷ
ಚೀನಾ ಭಾರತ ಸಂಘರ್ಷ
author img

By

Published : Jun 12, 2023, 1:55 PM IST

ನವದೆಹಲಿ: ಚೀನಾ ಮತ್ತು ಭಾರತದ ಮಧ್ಯೆ ಸಂಬಂಧ ಹಳಸಿದ್ದು, ಉಭಯ ದೇಶಗಳು ಪರಸ್ಪರ ಹಲವು ನಿರ್ಬಂಧಗಳನ್ನು ಹೇರುತ್ತಿವೆ. ಇದೇ ಹಾದಿಯಲ್ಲಿ ಚೀನಾದಲ್ಲಿರುವ ಭಾರತೀಯ ವರದಿಗಾರರನ್ನು ದೇಶದಿಂದ ಹೊರ ಹೋಗಲು ಆಗ್ರಹಿಸಿದ್ದು, ಉಳಿದ ಒಬ್ಬ ಪತ್ರಕರ್ತನ ವೀಸಾ ನವೀಕರಣವನ್ನು ನಿರಾಕರಿಸಿದೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಗಾರರಿಗೆ ಈ ತಿಂಗಳಾಂತ್ಯಕ್ಕೆ ದೇಶ ತೊರೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಏಷ್ಯಾದ ಎರಡು ದೊಡ್ಡ ಆರ್ಥಿಕ ಶಕ್ತ ರಾಷ್ಟ್ರಗಳ ಮಧ್ಯೆ ಮುನಿಸು ಜೋರಾಗಿದ್ದು, ಅದು ಮಾಧ್ಯಮದ ಮೇಲೂ ಪ್ರಭಾವ ಬೀರಿದೆ. ಹೀಗಾಗಿ ಚೀನಾದಲ್ಲಿನ ಕೊನೆಯ ಭಾರತೀಯ ಪತ್ರಕರ್ತನನ್ನು ದೇಶ ತೊರೆಯುವಂತೆ ಸೂಚಿಸಲಾಗಿದೆ. ಆದರೆ, ಭಾರತದಲ್ಲಿನ ಚೀನಾದ ವರದಿಗಾರರು ಯಾವುದೇ ನಿರ್ಬಂಧವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಾಲ್ಕು ಭಾರತೀಯ ವರದಿಗಾರರು ಇದ್ದರು. ಮಾರ್ಚ್​ನಲ್ಲಿ ಇಬ್ಬರು ಖಾಸಗಿ ಮಾಧ್ಯಮದ ವರದಿಗಾರರ ವೀಸಾ ನವೀಕರಣವನ್ನು ನಿರಾಕರಿಸಿದ್ದರಿಂದ ಅವರು ನಿರ್ಗಮಿಸಿದ್ದರು. ಅದಾದ ನಂತರ ಇನ್ನೊಬ್ಬ ಪತ್ರಕರ್ತ ಕೂಡ ಕಳೆದ ವಾರವಷ್ಟೇ ಡ್ರ್ಯಾಗನ್​ ರಾಷ್ಟ್ರದಿಂದ ವಾಪಸ್​ ಆಗಿದ್ದರು. ಹೀಗಾಗಿ ಉಳಿದ ಒಬ್ಬ ಪತ್ರಕರ್ತನ ಮೇಲೆ ಚೀನಾ ಅಧಿಕಾರಿಗಳು ದೇಶ ತೊರೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತತೆಗೆ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಚೀನಾ ವಿದೇಶಾಂಗ ಕಚೇರಿ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ಖ್ಯಾತೆ: ಕಳೆದ ತಿಂಗಳಷ್ಟೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಭಾರತದಲ್ಲಿ ಒಬ್ಬ ಚೀನೀ ಪತ್ರಕರ್ತ ಉಳಿದಿದ್ದಾರೆ. ಅವರು ಇನ್ನೂ ತಮ್ಮ ವೀಸಾ ನವೀಕರಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೂ ಮೊದಲು, ಚೀನಾದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಮತ್ತು ಸೆಂಟ್ರಲ್ ಟೆಲಿವಿಷನ್‌ನ ಇಬ್ಬರು ಪತ್ರಕರ್ತರು ಸಲ್ಲಿಸಿದ್ದ ವೀಸಾ ನವೀಕರಣ ಅರ್ಜಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.

ಭಾರತದ ಸ್ಪಷ್ಟನೆ: ಆದರೆ, ಚೀನಾದ ವರದಿಗಾರರು ಯಾವುದೇ ತೊಂದರೆಯಿಲ್ಲದೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಆದರೆ, ಚೀನಾದಲ್ಲಿರುವ ಭಾರತೀಯ ಪತ್ರಕರ್ತರಿಗೆ ಇದು ವ್ಯತಿರಿಕ್ತವಾಗಿದೆ. ಉಭಯ ದೇಶಗಳು ಈ ವಿಷಯದ ಬಗ್ಗೆ ಸಂಪರ್ಕದಲ್ಲಿವೆ ಎಂದು ಅದು ಹೇಳಿತ್ತು.

ಕೆಲವು ತಿಂಗಳ ಹಿಂದೆ ಭಾರತೀಯ ಪತ್ರಕರ್ತರು ವರದಿಗಾರಿಕೆಗೆ ಸಹಾಯ ಮಾಡಲು ಚೀನಾದ ಮೂವರು ಸಹಾಯಕರನ್ನು ನೇಮಿಸಿಕೊಳ್ಳುವುದರ ಬಗ್ಗೆ ಪ್ರಸ್ತಾಪಿಸಿತ್ತು. ಉಭಯ ರಾಷ್ಟ್ರಗಳ ಮಧ್ಯೆ ಪರಿಸ್ಥಿತಿಯ ಸೂಕ್ಷ್ಮತೆಯ ಕಾರಣದಿಂದಾಗಿ ಅದು ನೆರವೇರಿಲ್ಲ. ಚೀನಾದ ಅಧಿಕಾರಿಗಳು ಹೇರಿದ ನಿರ್ಬಂಧದಿಂದಾಗಿ ಮೂವರು ವ್ಯಕ್ತಿಗಳ ಆಯ್ಕೆ ಸಾಧ್ಯವಾಗಿಲ್ಲ. ಭಾರತವು ಇಂತಹ ನೇಮಕಾತಿ ಮೇಲೆ ಯಾವುದೇ ನಿಬಂಧನೆ ವಿಧಿಸಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ವಿವಾದ ತಾರಕಕ್ಕೆ: 2020 ರಲ್ಲಿ ಗಡಿಯಲ್ಲಿ ನಡೆದ ಹಲ್ಲೆಯ ಬಳಿಕ ಚೀನಾ ಮತ್ತು ಭಾರತದ ಮಧ್ಯೆ ನಿರಂತರ ಸಂಘರ್ಷ ಏರ್ಪಟ್ಟಿದೆ. ಅಂದಿನಿಂದ ಚೀನಾ ವಿವಾದವನ್ನು ಇನ್ನಷ್ಟು ಬೆಳೆಸುತ್ತಿದ್ದು, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಮೇಲೆಯೂ ಅದರ ಛಾಯೆ ಮೂಡುವಂತೆ ಮಾಡಿದೆ. ಗಡಿ ತಂಟೆ ನಿವಾರಣೆಯವರೆಗೂ ಚೀನಾದ ಜೊತೆ ಯಾವುದೇ ವ್ಯಾಪಾರ ವಹಿವಾಟು ಸಾಧ್ಯವಿಲ್ಲ ಎಂದು ಭಾರತ ಕೂಡ ಖಡಕ್​ ಆಗಿಯೇ ತಿರುಗೇಟು ನೀಡಿದೆ.

ಅಮೆರಿಕ, ಆಸ್ಟ್ರೇಲಿಯಾಗೂ ಬಿಸಿ: ಭಾರತ ಮಾತ್ರವಲ್ಲದೇ, ಅಮೆರಿಕ ಮತ್ತು ಚೀನಾ ಮಧ್ಯೆ ವರದಿಗಾರಿಕೆ ವಿಚಾರವಾಗಿ ತಿಕ್ಕಾಟ ನಡೆದಿದೆ. ಪತ್ರಕರ್ತರ ವೀಸಾ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ಹಲವು ವರ್ಷಗಳಿಂದ ಸಂಘರ್ಷ ನಡೆಸುತ್ತಿವೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಚೀನೀ ಮಾಧ್ಯಮಗಳನ್ನು "ವಿದೇಶಿ ಕಾರ್ಯಾಚರಣೆಗಳು" ಎಂದು ಆಪಾದಿಸಿದ ನಂತರ ಚೀನೀ ಪತ್ರಕರ್ತರ ಸಂಖ್ಯೆಯ ಮೇಲೆ ಮಿತಿ ಹೇರಲಾಗಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ ಪತ್ರಕರ್ತರ ಮೇಲೆ ಹಲವು ನಿರ್ಬಂಧಗಳನ್ನ ವಿಧಿಸಿದೆ.

2020 ರಲ್ಲಿ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದರಿಂದ ಚೀನಾದಲ್ಲಿನ ಇಬ್ಬರು ಆಸ್ಟ್ರೇಲಿಯಾದ ಪತ್ರಕರ್ತರು ದೇಶವನ್ನು ತೊರೆಯಲು ಮುಂದಾಗಿದ್ದರು. ಪತ್ರಕರ್ತರನ್ನು ಹೊರಹೋಗದಂತೆ ಆರಂಭದಲ್ಲಿ ನಿಷೇಧಿಸಲಾಗಿತ್ತು. ಆಸ್ಟ್ರೇಲಿಯಾದ ರಾಜತಾಂತ್ರಿಕರು ಮಾತುಕತೆಯ ಮೂಲಕ ಬಗೆಹರಿಸಲಾಗಿತ್ತು.

ಇದನ್ನೂ ಓದಿ: G20 Meeting: ಪ್ರಜಾಪ್ರಭುತ್ವದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಿಜಿಟಲೀಕರಣ: ಪ್ರಧಾನಿ ಮೋದಿ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.