ETV Bharat / international

ಸಾರ್ವಭೌಮತ್ವದ ಪ್ರಶ್ನೆ ಎತ್ತಿದ ಚೀನಾ: ಉಗ್ರ ಜವಾಹಿರಿ ಹತ್ಯೆಗೆ ಪರೋಕ್ಷ ವಿರೋಧ

ಅಮೆರಿಕವು ಡ್ರೋನ್ ದಾಳಿ ನಡೆಸಿ ಉಗ್ರರ ನಾಯಕ ಅಲ್ ಜವಾಹಿರಿಯನ್ನು ಹತ್ಯೆ ಮಾಡಿದ್ದಕ್ಕೆ ಚೀನಾ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದೆ. ಚೀನಾ ಈಗ ಅಫ್ಘಾನಿಸ್ತಾನದ ಸಾರ್ವಭೌಮತ್ವದ ಪ್ರಶ್ನೆ ಎತ್ತಿದೆ.

ಸಾರ್ವಭೌಮತ್ವದ ಪ್ರಶ್ನೆ ಎತ್ತಿದ ಚೀನಾ: ಉಗ್ರ ಜವಾಹಿರಿ ಹತ್ಯೆಗೆ ಪರೋಕ್ಷ ವಿರೋಧ
China raised the question of sovereignty: Indirect opposition to the killing of extremist Zawahiri
author img

By

Published : Aug 2, 2022, 3:57 PM IST

ಬೀಜಿಂಗ್: ಅಮೆರಿಕವು ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸಿ ಅಲ್ ಕೈದಾ ಮುಖ್ಯಸ್ಥ ಉಗ್ರ ಅಲ್ ಜವಾಹಿರಿಯನ್ನು ಹತ್ಯೆ ಮಾಡಿದ ಕ್ರಮಕ್ಕೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಅತ್ಯಂತ ರಕ್ಷಣಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಎಲ್ಲ ರೀತಿಯ ಭಯೋತ್ಪಾದನಾ ಕೃತ್ಯಗಳಿಗೆ ತನ್ನ ವಿರೋಧವಿದೆ. ಆದರೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ದ್ವಿಮುಖ ನೀತಿ ಅನುಸರಿಸುವುದಕ್ಕೆ ಮತ್ತು ಇನ್ನೊಂದು ರಾಷ್ಟ್ರದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡುವುದಕ್ಕೆ ತನ್ನ ಸಮರ್ಥನೆ ಇಲ್ಲ ಎಂದು ಚೀನಾ ಹೇಳಿದೆ.

ಕಾಬೂಲ್‌ನಲ್ಲಿ ಸಿಐಎ ಡ್ರೋನ್ ದಾಳಿಯಲ್ಲಿ ಅಲ್-ಜವಾಹಿರಿ ಸಾವಿನ ಬಗ್ಗೆ ಚೀನಾದ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ, "ನಾವು ಸಂಬಂಧಿತ ವರದಿಗಳನ್ನು ನೋಡಿದ್ದೇವೆ" ಎಂದು ಸಹಾಯಕ ವಿದೇಶಾಂಗ ಸಚಿವ ಹುವಾ ಚುನ್‌ಯಿಂಗ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

"ಚೀನಾ ಯಾವಾಗಲೂ ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಂತಿದೆ. ನಾವು ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಆದರೆ, ಭಯೋತ್ಪಾದನೆ ನಿಗ್ರಹದಲ್ಲಿ ಎರಡು ರೀತಿಯ ಮಾನದಂಡಗಳು ಇರಬಾರದು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂಬುದು ನಮ್ಮ ನಿಲುವು. ಇತರ ದೇಶಗಳ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸಬಾರದು." ಎಂದರು ಹುವಾ ಚುನ್‌ಯಿಂಗ್.

ಅಲ್-ಜವಾಹಿರಿ ಹತ್ಯೆಯಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಘೋಷಿಸಿದರು. ಅಲ್ ಜವಾಹಿರಿ ಕಾಬೂಲ್‌ನ ಮನೆಯೊಂದರಲ್ಲಿ ತನ್ನ ಕುಟುಂಬದೊಂದಿಗೆ ಆಶ್ರಯ ಪಡೆದಿದ್ದ. ಸಿಐಎ ನಡೆಸಿದ ಡ್ರೋನ್ ದಾಳಿಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಬೈಡೆನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.