ETV Bharat / international

ನೋಡಿ: ಚೀನಾದಲ್ಲಿ ಕೋವಿಡ್‌ ಕಟ್ಟುನಿಟ್ಟಿನ ಪರೀಕ್ಷೆ, ಭಯಾನಕ ದೃಶ್ಯಗಳು! - Horrible scenes of the Corona Test

ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರವು ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ದೌರ್ಜನ್ಯ ಮತ್ತು ಅಧಿಕಾರ ದುರುಪಯೋಗದಂತಹ ಕೃತ್ಯಗಳನ್ನು ಎಸಗುತ್ತಿದೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

CHINA HARSH COVID RULES CHINA COVID RESTRICTIONS 2022
ಚೀನಾದ ಕೊರೊನಾ ಟೆಸ್ಟ್ ನ ಹಾರಿಬಲ್ ದೃಶ್ಯಗಳು ಸಖತ್ ವೈರಲ್
author img

By

Published : May 6, 2022, 8:57 AM IST

ಬೀಜಿಂಗ್‌: ವಿಶ್ವಾದ್ಯಂತ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೆ ಕೊರೊನಾ ಹುಟ್ಟೂರು ಚೀನಾದಲ್ಲಿ ಮಾತ್ರ ಸೋಂಕು ಮತ್ತೆ ಜಾಸ್ತಿಯಾಗುತ್ತಿದೆ. ಹೀಗಾಗಿ, ರಾಜಧಾನಿ ಬೀಜಿಂಗ್, ವಾಣಿಜ್ಯ ನಗರಿ ಶಾಂಘೈ ಸೇರಿದಂತೆ ಕೆಲವು ನಗರಗಳಲ್ಲಿ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಸರ್ಕಾರ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವೆಂದು ಘೋಷಿಸಿದೆ. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರಿಗೂ ತಪಾಸಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಗರಿಕರ ಮೇಲೆ ದೌರ್ಜನ್ಯ ಮತ್ತು ಅಧಿಕಾರದ ದುರುಪಯೋಗ ನಡೆಯುತ್ತಿದೆ ಎಂಬ ಅಸಮಾಧಾನ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಕೆಳಗಿನ ದೃಶ್ಯಗಳು..

ಸಾಂಕ್ರಾಮಿಕ ರೋಗ ನಿರ್ಮೂಲನೆಯ ಹೆಸರಿನಲ್ಲಿ ಚೀನಾ ಮಾನವೀಯ ಮೌಲ್ಯಗಳನ್ನೇ ಗಾಳಿಗೆ ತೂರುತ್ತಿದೆ ಎಂದು ಇತ್ತೀಚಿನ ವರದಿಗಳು ಬಹಿರಂಗಪಡಿಸಿವೆ. ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುವವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಮಾನವೀಯ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ, ಜನರು ಮನೆ ಮತ್ತು ವಸತಿ ನಿಲಯಗಳಿಂದ ಹೊರಬರುವುದನ್ನು ತಡೆಯಲು ಕಬ್ಬಿಣದ ರಾಡ್​ಗಳನ್ನು ಹಾಕಿ ಗೇಟ್‌ ಬಂದ್​ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ.

ಇದೆಲ್ಲದರ ಜೊತೆಗೆ, ಸಾವಿರಾರು ಜನರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕ್ರಮದಿಂದ ಅನೇಕ ಆರೋಗ್ಯ ಸಮಸ್ಯೆಗಳಿರುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ದೌರ್ಜನ್ಯ ಎಸಗುತ್ತಿದೆ ಎಂದು ಚೀನಾ ಆಡಳಿತದ ತೀವ್ರ ಟೀಕೆ ವ್ಯಕ್ತವಾಗಿದೆ.

ಕ್ರೂರವಾಗಿವೆ ಕೋವಿಡ್ ಪರೀಕ್ಷೆಗಳು: ಚೀನಾದ ಜನರು ಈಗ ಕೊರೊನಾ ವೈರಸ್‌ಗಿಂತ ಲಾಕ್‌ಡೌನ್‌ಗೆ ಹೆಚ್ಚು ಹೆದರುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಶಾಂಘೈನಂತಹ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವುದು ಇದಕ್ಕೊಂದು ಉದಾಹರಣೆ. ಕೋವಿಡ್ ಮಾದರಿ ನೀಡಲು ನಿರಾಕರಿಸಿದ ಯುವತಿಯನ್ನು ಬಲವಂತವಾಗಿ ನೆಲದ ಮೇಲೆ ಮಲಗಿಸಿ ಮಾದರಿ ಸಂಗ್ರಹಿಸಿರುವ ಈ ವಿಡಿಯೋ ಆರೋಗ್ಯ ಸಿಬ್ಬಂದಿಯ ಕ್ರೌರ್ಯಕ್ಕೆ ಕನ್ನಡಿ ಹಿಡಿದಂತಿದೆ.

ಮತ್ತೊಂದು ವಿಡಿಯೋದಲ್ಲಿ, ವಯಸ್ಸಾದ ಮಹಿಳೆಯೊಬ್ಬರು ಕೋವಿಡ್ ಪರೀಕ್ಷೆಯನ್ನು ನಿರಾಕರಿಸಿದ್ದಾರೆ. ಆಗ ಆಕೆಯ ಕಾಲುಗಳನ್ನು ಬಿಗಿಯಾಗಿ ಹಿಡಿದು ಮಾದರಿ ಸಂಗ್ರಹಿಸಲಾಗುತ್ತದೆ. ಏಳು ಮಂದಿ ಭದ್ರತಾ ಸಿಬ್ಬಂದಿ ವಯೋವೃದ್ಧರೊಬ್ಬರ ಕಾಲು ಮತ್ತು ತೋಳುಗಳನ್ನು ಹಿಡಿದು ಮಾದರಿಯನ್ನು ಸಂಗ್ರಹಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಶಾಂಘೈ ಸೇರಿದಂತೆ ಚೀನಾದ ಹಲವು ನಗರಗಳಲ್ಲಿ ಇಂತಹ ದೌರ್ಜನ್ಯ ನಡೆಯುತ್ತಿದೆ.

ಕೊರೊನಾ ವೈರಸ್ ನಿಯಂತ್ರಣದ ಹೆಸರಿನಲ್ಲಿ ಮಾನವೀಯತೆ ಮರೆಯುತ್ತಿರುವ ಚೀನಾದ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಇದೀಗ ಚೀನೀಯರೇ ಕಿಡಿಕಾರಿದ್ದಾರೆ. ಸರ್ಕಾರದ ನಿಯಮ​ಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಪಾಲಿಸದವರ ಮೇಲೆ ಡ್ರ್ಯಾಗನ್‌ ಸರ್ಕಾರ ಬಲವಂತದ ಪ್ರಯೋಗ ಮಾಡುತ್ತದೆ ಎಂಬುದಕ್ಕಿದು ನಿದರ್ಶನ.

ಇದನ್ನೂ ಓದಿ: ಕೋವಿಡ್​ ಹಾವಳಿ ಮುಗಿದ ಬಳಿಕ ಸಿಎಎ ಅನುಷ್ಠಾನ ಖಚಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.