ETV Bharat / international

ದವಡೆ, ಗಲ್ಲವಿಲ್ಲದ ಈತನಿಗೆ ಸುಂದರ ಹೆಂಡತಿ.. ಈತನ ಕತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​.. - ಗಲ್ಲ ದವಡೆಯಿಲ್ಲದ ಜೋಸೆಫ್​ ವಿಲಿಯಮ್ಸನ್​

ವಾನಿಯಾ ನನ್ನ ಈ ಸ್ಥಿತಿ ಗೊತ್ತಿದ್ದರೂ ಮದುವೆಯಾಗಿದ್ದಾಳೆ. ಕೆಲವರು ನನ್ನನ್ನು ಸ್ವೀಕರಿಸುವುದಿಲ್ಲ. ಆದರೆ, ನಾನು ಹೃದಯ, ಭಾವನೆಗಳು ಮತ್ತು ಮೆದುಳನ್ನು ಹೊಂದಿರುವ ವ್ಯಕ್ತಿಯಾಗಿದ್ದೇನೆ. ಬೇರೆಯವರಂತೆ ನನ್ನನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಜೋಸೆಫ್​ರ ಮಾತಾಗಿದೆ..

chicago-man-born-without
ದವಡೆ, ಗಲ್ಲವಿಲ್ಲದ ಈತನಿಗೆ ಸುಂದರ ಹೆಂಡತಿ
author img

By

Published : May 24, 2022, 6:06 PM IST

ವಿಧಿಲಿಖಿತ ಮತ್ತು ಆತ್ಮಸ್ಥೈರ್ಯ ಒಗ್ಗೂಡಿದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಅಮೆರಿಕಾದ ಚಿಕಾಗೋ ವ್ಯಕ್ತಿಯೇ ಮಾದರಿ. ಓಟೋಫೇಶಿಯಲ್ ಸಿಂಡ್ರೋಮ್​ಗೆ ತುತ್ತಾದ ದವಡೆಗಳಿಲ್ಲದೇ ಜನಿಸಿದ ಜೋಸೆಫ್ ವಿಲಿಯಮ್ಸ್ ಎಂಬಾತ ನೋಡಲು ಕುರೂಪಿಯಂತೆ ಕಂಡರೂ ಸುಂದರವಾದ ಹೆಂಡತಿಯನ್ನು ಪಡೆದುಕೊಂಡಿದ್ದಾರೆ. ಇವರ ಜೀವನದ ಕತೆ ಈಗ ವೈರಲ್​ ಆಗಿದೆ.

ಜೋಸೆಫ್​ ವಿಲಿಯಮ್ಸನ್​ಗೆ ಅಪರೂಪದ ಕಾಯಿಲೆಯಾದ ಓಟೋಫೇಶಿಯಲ್ ಸಿಂಡ್ರೋಮ್​ ದಾಳಿಯಿಂದಾಗಿ ದವಡೆಗಳಿಲ್ಲದೇ ಜನಿಸಿದ್ದ. ಇದರಿಂದ ಈತ ಮಾತನಾಡಲು, ತಿನ್ನಲು, ಉಸಿರಾಡಲೂ ಕಷ್ಟವಾಗಿತ್ತು. ಚಿಕಿತ್ಸೆಯ ಬಳಿಕ ಈತ ನಳಿಕೆಯ ಸಹಾಯದಿಂದ ಉಸಿರಾಟ, ಊಟ ಸೇವಿಸುತ್ತಿದ್ದಾನೆ.

ಅಪರೂಪದ ಜನ್ಮಜಾತನಾದ ಜೋಸೆಫ್​ಗೆ ಈಗ 41 ವರ್ಷ. ಒಂಟಿಯಾಗಿ ಇಡೀ ಜೀವನ ಕಳೆಯಬೇಕಿದ್ದ ಈತನಿಗೆ ವಿಧಿಲಿಖಿತ ಬೇರೆಯದೇ ಹಾದಿ ತೋರಿಸಿದೆ. ನೋಡಲು ಕುರೂಪಿಯಂತೆ ಕಾಣುವ ಈತನನ್ನು ಸುಂದರವಾದ ಯುವತಿಯೊಬ್ಬಳು ವಿವಾಹವಾಗಿದ್ದಾರೆ.

ದವಡೆ, ಗಲ್ಲವಿಲ್ಲದ ಈತನಿಗೆ ಸುಂದರ ಹೆಂಡತಿ
ದವಡೆ, ಗಲ್ಲವಿಲ್ಲದ ಈತನಿಗೆ ಸುಂದರ ಹೆಂಡತಿ

ಸುಂದರಿ ವಾನಿಯಾ ಕೈಹಿಡಿದ ಜೋಸೆಫ್ ​: 2020ರಲ್ಲಿ ವಾನಿಯಾ ಎಂಬಾಕೆಯನ್ನು ವಿವಾಹವಾದ ಈತ ಒಂದು ವರ್ಷ ಡೇಟಿಂಗ್​ ಮಾಡಿದ್ದನಂತೆ. ಡೇಟಿಂಗ್ ನನಗೆ ಕಷ್ಟಕರವಾಗಿತ್ತು. ಏಕೆಂದರೆ, ನಾನು ಅಸಹಜ ವ್ಯಕ್ತಿಯಾಗಿದ್ದು, ನಿಷ್ಪ್ರಯೋಜಕನೆಂದು ಭಾವಿಸಿದ್ದೆ. ಬಳಿಕ ನನ್ನ ಹೆಂಡತಿಯಾಗಿ ವಾನಿಯಾ ಒಪ್ಪಿದ ಬಳಿಕ ನನ್ನಲ್ಲಿ ನಂಬಿಕೆ, ಆತ್ಮವಿಶ್ವಾಸ ಮೂಡಿತು ಎಂದು ಹೇಳಿಕೊಂಡಿದ್ದಾನೆ.

ಅವರು 2019ರಲ್ಲಿ ವಾನಿಯಾ ಅವರನ್ನು ಭೇಟಿಯಾದೆ. ನಾವು ಮೊದಲು ಸ್ನೇಹಿತರಾಗಿದ್ದೆವು. ಆದರೆ, ನಾವು ಅಂತಿಮವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿ, ಪ್ರೀತಿಸುತ್ತಿದ್ದೆವು. ಬಳಿಕ ನಾವು 2020ರಲ್ಲಿ ಮದುವೆಯಾದೆವು. ನಾನು ಮದುವೆಯಾಗುತ್ತೇನೆ ಎಂದು ಜನರೂ ನಿರೀಕ್ಷಿಸಿರಲಿಲ್ಲ. ನಿಜ ಹೇಳಬೇಕೆಂದರೆ ನನಗೂ ಕೂಡ ಈ ಬಗ್ಗೆ ನಂಬಿಕೆ ಇರಲಿಲ್ಲ.

ವಾನಿಯಾ ನನ್ನ ಈ ಸ್ಥಿತಿ ಗೊತ್ತಿದ್ದರೂ ಮದುವೆಯಾಗಿದ್ದಾಳೆ. ಕೆಲವರು ನನ್ನನ್ನು ಸ್ವೀಕರಿಸುವುದಿಲ್ಲ. ಆದರೆ, ನಾನು ಹೃದಯ, ಭಾವನೆಗಳು ಮತ್ತು ಮೆದುಳನ್ನು ಹೊಂದಿರುವ ವ್ಯಕ್ತಿಯಾಗಿದ್ದೇನೆ. ಬೇರೆಯವರಂತೆ ನನ್ನನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಜೋಸೆಫ್​ರ ಮಾತಾಗಿದೆ.

ದವಡೆ, ಗಲ್ಲ, ಹಲ್ಲು, ನಾಲಿಗೆ ಹೊಂದಿಲ್ಲದ ಅಪರೂಪದ ಕಾಯಿಲೆಗೆ ಗುರಿಯಾದ ಜೋಸೆಫ್​, ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾನೆ. ಆಹಾರಕ್ಕಾಗಿ ಫೀಡಿಂಗ್ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ. ಇವರ ಜೀವನದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಓದಿ: ಕುತುಬ್​ ಮಿನಾರ್​ ಸಂಕೀರ್ಣದಲ್ಲಿ ದೇವಾಲಯ ಕೆಡವಿ ಮಸೀದಿ ಕಟ್ಟಲಾಗಿಲ್ಲ: ಪುರಾತತ್ವ ಇಲಾಖೆ, ತೀರ್ಪು ಕಾಯ್ದಿರಿಸಿದ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.