ETV Bharat / international

ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆಯೇ ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಕೆನಡಾ - India

Canada Withdraws Diplomats From India: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಡುವ ಲಕ್ಷಣಗಳು ಹೆಚ್ಚಿವೆ. ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿರುವುದನ್ನು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಖಚಿತಪಡಿಸಿದ್ದಾರೆ. ಹೌದು, ಭಾರತದಿಂದ ಕೆನಡಾವು 41 ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಳ್ಳಲು ತೀರ್ಮಾನ ಮಾಡಿದೆ.

Canada Withdraws Diplomats From India
ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆಯೇ ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಕೆನಡಾ
author img

By PTI

Published : Oct 20, 2023, 9:06 AM IST

ಒಟ್ಟಾವಾ (ಕೆನಡಾ): ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ಮತ್ತಷ್ಟು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಮತ್ತೊಂದು ನಿರ್ಧಾರ ಕೈಗೊಂಡಿದೆ. ''ಭಾರತದಿಂದ ಕೆನಡಾ ತನ್ನ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ. ಕೆನಡಾದ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬದ 42 ಸದಸ್ಯರನ್ನು ಭಾರತದಿಂದ ಹೊರಹಾಕಲಾಗಿದೆ'' ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಗುರುವಾರ ತಿಳಿಸಿದ್ದಾರೆ.

"ಅಕ್ಟೋಬರ್ 20 ರೊಳಗೆ ದೆಹಲಿಯಲ್ಲಿರುವ 21 ಕೆನಡಾದ ರಾಜತಾಂತ್ರಿಕರು ಮತ್ತು ಅವರ ಅವಲಂಬಿತರನ್ನು ಹೊರತುಪಡಿಸಿ ಎಲ್ಲರಿಗೂ ರಾಜತಾಂತ್ರಿಕ ವಿನಾಯಿತಿಯನ್ನು ಅನಿಯಂತ್ರಿತವಾಗಿ ತೆಗೆದುಹಾಕುವ ಯೋಜನೆಯನ್ನು ಭಾರತವು ಔಪಚಾರಿಕವಾಗಿ ತಿಳಿಸಿದೆ ಎಂದು ನಾನು ದೃಢೀಕರಿಸುತ್ತೇನೆ" ಎಂದು ಅವರು ಹೇಳಿದರು. ಇದರರ್ಥ 41 ಕೆನಡಾದ ರಾಜತಾಂತ್ರಿಕರು ಮತ್ತು ಅವರ 42 ಅವಲಂಬಿತರು ವಿನಾಯಿತಿಯ ಅಪಾಯದಲ್ಲಿದ್ದರು. ಇದು ಅವರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ. ಕೆನಡಾದ ರಾಜತಾಂತ್ರಿಕರ ನಿರ್ಗಮನವನ್ನು ದೃಢೀಕರಿಸಿ ಜೋಲಿ ಅವರು ಈ ಮಾತನ್ನು ಹೇಳಿದ್ದಾರೆ.

ಭಾರತವು ಕೆನಡಾಕ್ಕೆ ವೀಸಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ, ಉಭಯ ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದ ಬಿಗಡಾಯಿಸಿದೆ. ಈ ನಡುವೆಯೇ ಭಾರತದಲ್ಲಿ ಕೆನಡಾದ ರಾಜತಾಂತ್ರಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಕೆನಡಾದ ವಿದೇಶಾಂಗ ಸಚಿವರು ಕರೆ ಕೊಟ್ಟಿದ್ದಾರೆ. ''ಅವರು ಭಾರತದಿಂದ ಸುರಕ್ಷಿತವಾಗಿ ನಿರ್ಗಮಿಸಲು ನಾವು ಅನುಕೂಲ ಮಾಡಿದ್ದೇವೆ. ಇದರರ್ಥ ನಮ್ಮ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಈಗ ರಾಜತಾಂತ್ರಿಕ ವಿನಾಯಿತಿಯನ್ನು ತ್ಯಜಿಸಿದ್ದಾರೆ'' ಎಂದು ವಿವರಿಸಿದ್ದಾರೆ.

ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ-ಮೆಲಾನಿ ಜೋಲಿ ಆರೋಪ: ''ರಾಜತಾಂತ್ರಿಕರನ್ನು ಸುರಕ್ಷಿತವಾಗಿರಿಸಿಕೊಳ್ಳಿ, ಅವರು ಎಲ್ಲಿಂದ ಬಂದರೂ ಕೂಡ ಹಾಗೂ ಎಲ್ಲಿಗೆ ಕಳುಹಿಸಿದರೂ ಪರವಾಗಿಲ್ಲ. ಅವರು ಇರುವ ದೇಶದಿಂದ ಪ್ರತೀಕಾರ ಅಥವಾ ಬಂಧನದ ಭಯವಿಲ್ಲದೆ ರಾಜತಾಂತ್ರಿಕರು ತಮ್ಮ ಕೆಲಸವನ್ನು ಮಾಡಲು ವಿನಾಯಿತಿ ನೀಡಬೇಕಾಗುತ್ತದೆ. ಇದು ರಾಜತಾಂತ್ರಿಕತೆಯ ಮೂಲ ತತ್ವವಾಗಿದೆ. ಮತ್ತು ಇದು ದ್ವಿಮುಖ ಸಂಪರ್ಕ ಮಾರ್ಗವಾಗಿದೆ. ಪ್ರತಿಯೊಂದು ದೇಶವೂ ನಿಯಮಗಳನ್ನು ಅನುಸರಿಸಿದಾಗ ಮಾತ್ರ ಅವರು ಕೆಲಸ ಮಾಡಲು ಸಾಧ್ಯವಾಗುತ್ತದೆ. ರಾಜತಾಂತ್ರಿಕ ಸವಲತ್ತುಗಳು ಮತ್ತು ವಿನಾಯಿತಿಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಇದು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗೆ ಬೆದರಿಕೆ ಹಾಕುವುದು ಅನುಚಿತ ಮತ್ತು ಒತ್ತಡವಾಗಿದೆ'' ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್, ಉಕ್ರೇನ್‌ಗೆ ನೀಡಿರುವ ಬೆಂಬಲವು ಅಮೆರಿಕ ಭದ್ರತೆಗೆ ಪ್ರಮುಖವಾಗಿದೆ: ಜೋ ಬೈಡನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.