ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಅನುಭವವನ್ನು ಗಮನದಲ್ಲಿಟ್ಟುಕೊಂಡು ತೈವಾನ್ ಅನ್ನು ಯಶಸ್ವಿಯಾಗಿ ಆಕ್ರಮಿಸುವ ಚೀನಾದ ಸಾಮರ್ಥ್ಯದ ಬಗ್ಗೆ ಅದಕ್ಕೆ(ಚೀನಾ) ಅನುಮಾನಗಳಿವೆ ಎಂದು ಯುಎಸ್ ಕೇಂದ್ರೀಯ ಗುಪ್ತಚರ ಸಂಸ್ಥೆಯ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಹೇಳಿದ್ದಾರೆ. ಆದಾಗ್ಯೂ ದ್ವೀಪಕ್ಕೆ ಬೆದರಿಕೆ ಹಾಕುವುದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ ಎಂದು ಅವರು ಹೇಳಿದರು.
ಭಾನುವಾರ ಟೆಲಿವಿಷನ್ ಸಂದರ್ಶನವೊಂದರಲ್ಲಿ ಮಾತನಾಡಿದ ವಿಲಿಯಂ ಬರ್ನ್ಸ್ ತೈವಾನ್ ಅನ್ನು ವಶಪಡಿಸಿಕೊಳ್ಳುವ ಸಂಭವನೀಯ ಮಿಲಿಟರಿ ಸಾಮರ್ಥ್ಯದ ಬಗ್ಗೆ ಚೀನಾ ಅನಿಶ್ಚಿತವಾಗಿದೆ ಎಂದು ತೋರುತ್ತಿದೆ. ಆದಾಗ್ಯೂ, ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಅವರು ದ್ವೀಪವನ್ನು ಆಕ್ರಮಿಸಲು "2027 ರ ವೇಳೆಗೆ ಸಿದ್ಧರಾಗಿ" ದೇಶದ ಮಿಲಿಟರಿಗೆ ಸೂಚನೆ ನೀಡಿದ್ದಾರೆ ಎಂದು ಬರ್ನ್ಸ್ ಹೇಳಿದರು.
ಸಿಐಎ ಮುಖ್ಯಸ್ಥರು ಹೇಳಿದ್ದೇನು?: ಅಧ್ಯಕ್ಷ ಕ್ಸಿ ಅವರು 2027ರ ವೇಳೆಗೆ ತೈವಾನ್ ಅನ್ನು ಆಕ್ರಮಿಸಲು ಚೀನೀ ಮಿಲಿಟರಿ ನಾಯಕರಿಗೆ ಸಿದ್ಧರಾಗಿರಲು ಸೂಚಿಸಿದ್ದಾರೆ. ಆದರೆ ಅವರು 2027 ರಲ್ಲಿ ಅಥವಾ ಯಾವುದೇ ವರ್ಷದಲ್ಲಿ ಆಕ್ರಮಣ ಮಾಡಲು ನಿರ್ಧರಿಸಿದ್ದಾರೆ ಎಂದು ಅರ್ಥವಲ್ಲ. ನಮ್ಮ ತೀರ್ಪು ಕನಿಷ್ಠ ಪಕ್ಷ ಅಧ್ಯಕ್ಷ ಕ್ಸಿ ಮತ್ತು ಅವರ ಮಿಲಿಟರಿ ನಾಯಕತ್ವವು ಆ ಆಕ್ರಮಣವನ್ನು ಸಾಧಿಸಬಹುದೇ ಎಂಬ ಬಗ್ಗೆ ಅನುಮಾನಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಉಕ್ರೇನ್ ಆಕ್ರಮಣದ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹಿನ್ನಡೆಗಳು ಅನುಮಾನಗಳನ್ನು ಬಲಪಡಿಸಿದೆ ಎಂದು ಬರ್ನ್ಸ್ ಹೇಳಿದ್ದಾರೆ. ಆದಾಗ್ಯೂ ತೈವಾನ್ ನಿಯಂತ್ರಿಸಲು ಕ್ಸಿ ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.
-
CIA Director William Burns says the U.S. is “confident” that China is "considering the provision of lethal equipment" to aid Russia's invasion of Ukraine. Burns told @margbrennan that the U.S. is hoping to "deter" Beijing from making a "very risky and unwise bet.” pic.twitter.com/9iD5XLGAy0
— Face The Nation (@FaceTheNation) February 25, 2023 " class="align-text-top noRightClick twitterSection" data="
">CIA Director William Burns says the U.S. is “confident” that China is "considering the provision of lethal equipment" to aid Russia's invasion of Ukraine. Burns told @margbrennan that the U.S. is hoping to "deter" Beijing from making a "very risky and unwise bet.” pic.twitter.com/9iD5XLGAy0
— Face The Nation (@FaceTheNation) February 25, 2023CIA Director William Burns says the U.S. is “confident” that China is "considering the provision of lethal equipment" to aid Russia's invasion of Ukraine. Burns told @margbrennan that the U.S. is hoping to "deter" Beijing from making a "very risky and unwise bet.” pic.twitter.com/9iD5XLGAy0
— Face The Nation (@FaceTheNation) February 25, 2023
ಅವರು ಉಕ್ರೇನ್‌ನಲ್ಲಿ ಪುಟಿನ್ ಅವರ ಅನುಭವವನ್ನು ನೋಡಿದ್ದಾರೆ, ಅದು ಬಹುಶಃ ಆ ಕೆಲವು ಅನುಮಾನಗಳನ್ನು ಬಲಪಡಿಸಿದೆ ಎಂದು ನಾನು ಭಾವಿಸುತ್ತೇನೆ. ತೈವಾನ್‌ನ ಮೇಲೆ ಚೀನಿ ಆಕ್ರಮಣದ ಬೆದರಿಕೆಯನ್ನು ಯುಎಸ್ ಗಂಭೀರವಾಗಿ ಪರಿಗಣಿಸುವುದನ್ನು ಮುಂದುವರೆಸಿದೆ. ಸಂಘರ್ಷದ ಅಪಾಯಗಳು ದಶಕ ಮತ್ತು ಅದಕ್ಕೂ ಮೀರಿ ಬೆಳೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಇನ್ನು, ರಷ್ಯಾಕ್ಕೆ ನೆರವು ನೀಡಲು ಚೀನಾ ಹವಣಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಇತ್ತ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ನಡುವೆ ದ್ವೀಪದ ಮಿಲಿಟರಿಗೆ ತರಬೇತಿ ಕಾರ್ಯ ಹೆಚ್ಚಿಸಲು ತೈವಾನ್‌ಗೆ ನಿಯೋಜಿಸಲಾದ ಸೈನಿಕರ ಸಂಖ್ಯೆಯನ್ನು ಯುಎಸ್ ಗಮನಾರ್ಹವಾಗಿ ಹೆಚ್ಚಿಸುತ್ತಿದೆ ಎಂದು ವರದಿಯಾಗಿದೆ. ಯುಎಸ್ ಅಧಿಕಾರಿಗಳ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ದ್ವೀಪಕ್ಕೆ 100 ರಿಂದ 200 ಪಡೆಗಳನ್ನು ನಿಯೋಜಿಸಲು ಯುಎಸ್ ಯೋಜಿಸಿದೆ.
ತೈವಾನ್ ಅನ್ನು ಚೀನಾದ ಭಾಗವೆಂದು ಪರಿಗಣಿಸುತ್ತದೆ ಮತ್ತು ಅಗತ್ಯವಿದ್ದರೆ ಬಲವಂತವಾಗಿ ದ್ವೀಪದ ಮೇಲೆ ಹಿಡಿತ ಸಾಧಿಸಲು ಪ್ರತಿಜ್ಞೆ ಮಾಡಿದೆ. ಆದರೆ ಅಮೆರಿಕ ತನ್ನ ರಕ್ಷಣೆಯನ್ನು ಕಾಪಾಡಿಕೊಳ್ಳಲು ತೈವಾನ್‌ಗೆ ಸಹಾಯ ಮಾಡಲು ಬದ್ಧವಾಗಿದೆ. ಚೀನಾದಿಂದ ಬೇರ್ಪಟ್ಟ ತೈವಾನ್- 1949ರಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖ್ಯ ಭೂಭಾಗದ ನಿಯಂತ್ರಣದೊಂದಿಗೆ ಕೊನೆಗೊಂಡ ಅಂತರ್ಯುದ್ಧದ ನಂತರ ತೈವಾನ್ ಮತ್ತು ಚೀನಾ ವಿಭಜನೆಯಾಯಿತು. ಸ್ವ-ಆಡಳಿತ ದ್ವೀಪವು ಸಾರ್ವಭೌಮ ರಾಷ್ಟ್ರದಂತೆ ಕಾರ್ಯನಿರ್ವಹಿಸುತ್ತದೆ. ಆದರೆ ವಿಶ್ವಸಂಸ್ಥೆ ಅಥವಾ ಯಾವುದೇ ಪ್ರಮುಖ ದೇಶದಿಂದ ಗುರುತಿಸಲ್ಪಟ್ಟಿಲ್ಲ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕತೆಯ ಮೂಲಕ ಪರಿಹಾರ: ಭಾರತದ ನಿಲುವಿನ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ