ಕಾಂಬೋಡಿಯಾ: ಕಾಂಬೋಡಿಯಾ - ಥಾಯ್ಲೆಂಡ್ ಗಡಿಯಲ್ಲಿರುವ ಕ್ಯಾಸಿನೊದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ 700ಕ್ಕೂ ಹೆಚ್ಚು ಜರನ್ನು ಸುರಕ್ಷಿಸಿ ಥಾಯ್ಲೆಂಡ್‌ನ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಥಾಯ್ಲೆಂಡ್‌ನ ಗಡಿಯಲ್ಲಿರುವ ಪೊಯಿಪೆಟ್ ಪ್ರದೇಶದ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ದೆಹಲಿ ಆಸ್ಪತ್ರೆಗೆ ಕ್ರಿಕೆಟಿಗ ಶಿಫ್ಟ್