ETV Bharat / international

77th Independence Day: ತ್ರಿವರ್ಣ ಧ್ವಜದ ಬೆಳಕಿನಲ್ಲಿ ಬೆಳಗಿದ ಬುರ್ಜ್ ಖಲೀಫಾ - ತ್ರಿವರ್ಣ ಧ್ವಜದ ಬಣ್ಣ

77th Independence Day: ದುಬೈನ ಪ್ರಸಿದ್ಧ ಆಕರ್ಷಣೀಯ ಸ್ಥಳ ಬುರ್ಜ್​ ಖಲೀಫಾ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿದೆ.

Burj Khalifa lights up in Indian tricolour
ತ್ರಿವರ್ಣ ಧ್ವಜದ ಬೆಳಕಿನಲ್ಲಿ ಬೆಳಗಿದ ಬುರ್ಜ್ ಖಲೀಫಾ
author img

By

Published : Aug 16, 2023, 7:26 AM IST

ದುಬೈ(ಯುಎಇ): ದೇಶಾದ್ಯಂತ ಸಡಗರ - ಸಂಭ್ರಮದಿಂದ ನಿನ್ನೆ(ಮಂಗಳವಾರ) 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಗುರುತಿಸಿಕೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ(ಯುಎಇ) ಬುರ್ಜ್ ಖಲೀಫಾ ತ್ರಿವರ್ಣದ ಬಣ್ಣಗಳಿಂದ ಕಂಗೊಳಿಸಿತು.

  • As India celebrates its 77th Independence Day, I extend my congratulations to the leadership and the people of this great nation. On this joyous occasion, the UAE reaffirms its commitment to building a future of shared prosperity and growth, elevating our partnership to new…

    — HH Sheikh Mohammed (@HHShkMohd) August 15, 2023 " class="align-text-top noRightClick twitterSection" data=" ">

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಂಗಳವಾರ ಐಕಾನಿಕ್ ಬುರ್ಜ್ ಖಲೀಫಾವನ್ನು ತ್ರಿವರ್ಣದ ಬಣ್ಣಗಳಲ್ಲಿ ಬೆಳಗಿಸಲಾಯಿತು. ತ್ರಿವರ್ಣ ಧ್ವಜ ಮಾತ್ರವಲ್ಲದೇ ವಿಶ್ವದ ಅತಿ ಎತ್ತರದ ಕಟ್ಟಡ "ಭಾರತ ಮಾತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಮತ್ತು "ಭಾರತ ಯುಎಇ ಸ್ನೇಹ ದೀರ್ಘಕಾಲ ಉಳಿಯಲಿ" ಎಂಬ ಉಲ್ಲೇಖಗಳನ್ನು ಸಹ ಪ್ರದರ್ಶಿಸಿದೆ. ಅಲ್ಲದೇ 'ಹರ್ ಘರ್ ತಿರಂಗಾ' ಮತ್ತು 'ಜೈ ಹಿಂದ್' ಉಲ್ಲೇಖಗಳೊಂದಿಗೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಸಹ ಪ್ರದರ್ಶಿಸಿದೆ. ಜುಲೈನಲ್ಲಿ, ಯುಎಇಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತದ ಸಂಕೇತವಾಗಿ ಬುರ್ಜ್ ಖಲೀಫಾವನ್ನು ತ್ರಿವರ್ಣಗಳಲ್ಲಿ ಬೆಳಗಲಾಗಿತ್ತು.

ಇದನ್ನೂ ಓದಿ: Independence Day 2023: ತ್ರಿವರ್ಣ ರಂಗಿನಿಂದ ರಾರಾಜಿಸುತ್ತಿದೆ ಭಾರತ... ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್​

ಈ ಮಧ್ಯೆ, ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಎಕ್ಸ್​ (ಟ್ವಿಟರ್‌)ನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. "ಭಾರತ ತನ್ನ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವಾಗ, ನಾನು ಈ ಮಹಾನ್ ರಾಷ್ಟ್ರದ ನಾಯಕತ್ವ ಮತ್ತು ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂತೋಷದಾಯಕ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತದೊಂದಿಗೆ ಹಂಚಿಕೆಯ ಸಮೃದ್ಧಿ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮುಂದುವರೆಸುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ: ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿದ ಬುರ್ಜ್​ ಖಲೀಫಾ!

ಭಾರತದಾದ್ಯಂತ ಸ್ವಾತಂತ್ರ್ಯ ಸಂಭ್ರಮ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸತತ 10ನೇ ಬಾರಿಗೆ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಭಿವೃದ್ಧಿಗೆ ಸರ್ಕಾರದ ನೀತಿಗಳ ಬಗ್ಗೆ ಮಾತನಾಡಿದರು. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನಸಂಖ್ಯೆಯಲ್ಲಿ ದೇಶ ಮುಂಚೂಣಿಯಲ್ಲಿದೆ. 140 ಕೋಟಿ ಜನರು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಎಲ್ಲ ವೀರರಿಗೆ ನಮನ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಬುರ್ಜ್‌ ಖಲೀಫಾ ಬಗ್ಗೆ ಒಂದಿಷ್ಟು..: ಬುರ್ಜ್ ಖಲೀಫಾ 2,717 ಅಡಿ ಎತ್ತರವಿದೆ. ಇದರಲ್ಲಿ 163 ಮಹಡಿಗಳಿವೆ. ಸ್ಟೀಲ್ ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದೆ. ಇದರ ಮಾಲೀಕ ಎಮಾರ್‌ ಪ್ರಾಪರ್ಟೀಸ್‌. ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 1.5 ಬಿಲಿಯನ್‌ ಯುಎಸ್‌ ಡಾಲರ್‌. 2010ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಇದನ್ನು ಮೀರಿಸುವ ಕಟ್ಟಡ ಜಗತ್ತಿನಲ್ಲಿ ಮತ್ತೊಂದಿಲ್ಲ.

ಇದನ್ನೂ ಓದಿ: ಯುಎಇಯಲ್ಲಿ ಮೋದಿಗೆ ಆತ್ಮೀಯ ಸ್ವಾಗತ.. ಬುರ್ಜ್ ಖಲೀಫಾದಲ್ಲಿ ಕಂಗೊಳಿಸಿದ ತ್ರಿವರ್ಣ ಧ್ವಜ, ಮೋದಿ ಭಾವಚಿತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.