ETV Bharat / international

ಸೀಟ್ ಬೆಲ್ಟ್​ ತೆಗೆದಿದ್ದಕ್ಕೆ ಕ್ಷಮೆ ಯಾಚಿಸಿದ ಬ್ರಿಟಿಷ್ ಪಿಎಂ ಸುನಕ್! - ಬ್ರಿಟನ್ ಪ್ರಧಾನಿ ರಿಷಿ ಸುನಕ್

ಕಾರಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಸಮಯ ಸೀಟ್ ಬೆಲ್ಟ್ ತೆಗೆದಿದ್ದಕ್ಕಾಗಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ದೇಶವಾಸಿಗಳ ಕ್ಷಮೆ ಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಸಣ್ಣ ವೀಡಿಯೊ ಕ್ಲಿಪ್ ಚಿತ್ರೀಕರಿಸುವ ಭರದಲ್ಲಿ ಅವರು ಸೀಟ್

UK PM Rishi Sunak apologises for removing car seat belt

author img

By

Published : Jan 20, 2023, 1:04 PM IST

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ವಾಯುವ್ಯ ಇಂಗ್ಲೆಂಡ್‌ನ ಪ್ರದೇಶವೊಂದಕ್ಕೆ ತೆರಳಲು ಕಾರು ಚಾಲನೆ ಮಾಡುವಾಗ ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವೀಡಿಯೊ ಚಿತ್ರೀಕರಿಸಲು ಕೆಲವೇ ಕ್ಷಣ ತಮ್ಮ ಸೀಟ್ ಬೆಲ್ಟ್ ತೆಗೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಸುನಕ್ ಅವರು ಸ್ವಲ್ಪವೇ ಸಮಯ ಸೀಟ್​ ಬೆಲ್ಟ್​ ತೆಗೆದಿದ್ದರು ಮತ್ತು ತಾವು ತಪ್ಪು ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಅವರ ಡೌನಿಂಗ್ ಸ್ಟ್ರೀಟ್ ವಕ್ತಾರರು ಗುರುವಾರ ಹೇಳಿದ್ದಾರೆ. ಅದೊಂದು ತಪ್ಪು ಕಲ್ಪನೆಯಿಂದ ಉಂಟಾದ ದೋಷವಾಗಿದೆ. ಸಣ್ಣ ವೀಡಿಯೊ ಕ್ಲಿಪ್ ಚಿತ್ರೀಕರಿಸಲು ಪ್ರಧಾನಿ ತಮ್ಮ ಸೀಟ್ ಬೆಲ್ಟ್ ಅನ್ನು ತೆಗೆದುಹಾಕಿದ್ದಾರೆ. ಇದು ತಪ್ಪಾಗಿದೆ ಎಂದು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು ಎಂಬುದು ಪ್ರಧಾನಿಯ ಅಭಿಪ್ರಾಯವಾಗಿದೆ ಎಂದು ಸುನಕ್ ವಕ್ತಾರರು ತಿಳಿಸಿದ್ದಾರೆ.

ಸೀಟ್​ ಬೆಲ್ಟ್​ ಧರಿಸದಿರುವುದಕ್ಕೆ ವಿನಾಯಿತಿ ನೀಡುವ ವೈದ್ಯಕೀಯ ಶಿಫಾರಸು ಇಲ್ಲದ ವ್ಯಕ್ತಿಯು ಸೀಟ್​ ಬೆಲ್ಟ್​ ಇಲ್ಲದೆ ಪ್ರಯಾಣಿಸಿದಲ್ಲಿ ಅಂಥವರಿಗೆ ಸ್ಥಳದಲ್ಲಿಯೇ 100 ಪೌಂಡ್ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ದಂಡದ ಮೊತ್ತ 500 ಪೌಂಡ್​ವರೆಗೆ ಹೆಚ್ಚಾಗಬಹುದು.

ದೇಶದಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಧನಸಹಾಯ ಮಾಡಲು ತಮ್ಮ ಸರ್ಕಾರದ ಹೊಸ ಲೆವೆಲಿಂಗ್ ಅಪ್ ಫಂಡ್ ಪ್ರಕಟಣೆಗಳನ್ನು ಪ್ರಚಾರ ಮಾಡಲು ಸುನಕ್ ವೀಡಿಯೊ ಒಂದನ್ನು ಚಿತ್ರೀಕರಿಸಿದ್ದರು. ಅವರು ಕ್ಯಾಮೆರಾವನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆ ಪೋಲೀಸ್ ಮೋಟರ್‌ಬೈಕ್‌ಗಳು ಅವರ ಕಾರಿಗೆ ಬೆಂಗಾವಲು ಮಾಡುವುದನ್ನು ಕಾಣಬಹುದು. ಸುನಕ್ ತನ್ನ ಕಾಂಟ್ಯಾಕ್ಟ್​ಲೆಸ್​ ಕಾರ್ಡ್​ನಿಂದ ಪೇಮೆಂಟ್​ ಮಾಡುವಾಗ ಹೆಣಗಾಡುತ್ತಿರುವ ವೀಡಿಯೊವೊಂದು ಬೆಳಕಿಗೆ ಬಂದಿತ್ತು. ಅದರ ನಂತರ ಇತ್ತೀಚಿನ ಘಟನೆಯ ನಂತರ ಸುನಕ್ ಅವರನ್ನು ಪ್ರತಿಪಕ್ಷ ಲೇಬರ್ ಪಾರ್ಟಿ ಟೀಕಿಸಿದೆ.

ರಿಷಿ ಸುನಕ್ ಅವರಿಗೆ ಸೀಟ್ ಬೆಲ್ಟ್, ಅವರ ಡೆಬಿಟ್ ಕಾರ್ಡ್, ರೈಲು ಸೇವೆ, ಆರ್ಥಿಕತೆ, ಈ ದೇಶವನ್ನು ಹೇಗೆ ನಿರ್ವಹಿಸುವುದು ಎಂದು ತಿಳಿದಿಲ್ಲ. ಈ ಪಟ್ಟಿ ಪ್ರತಿದಿನ ಬೆಳೆಯುತ್ತಿದೆ ಮತ್ತು ಇದು ಅಂತ್ಯವಿಲ್ಲದ ನೋವಿನ ವೀಕ್ಷಣೆಗೆ ಕಾರಣವಾಗುತ್ತಿದೆ ಎಂದು ಲೇಬರ್ ವಕ್ತಾರರು ಹೇಳಿದ್ದಾರೆ. ದೇಶದ ಉತ್ತರ ಭಾಗಕ್ಕೆ ಪ್ರಯಾಣಿಸಲು ಹಾರಲು ರಾಯಲ್ ಏರ್ ಫೋರ್ಸ್ (RAF) ಜೆಟ್ ಅನ್ನು ಬಳಸಿದ್ದಕ್ಕಾಗಿ ಸುನಕ್ ಪ್ರತಿಪಕ್ಷಗಳ ಟೀಕೆಗೆ ಒಳಗಾದ ದಿನವೇ ಸೀಟ್ ಬೆಲ್ಟ್​ ಪ್ರಕರಣ ನಡೆದಿದೆ. ಪ್ರಧಾನ ಮಂತ್ರಿಯವರ ಸಮಯವನ್ನು ಉಳಿಸಲು ವಿಮಾನ ಬಳಸಲಾಗಿತ್ತು ಎಂದು ಡೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.

ಪ್ರಧಾನಿ ಮೋದಿ ಸಮರ್ಥನೆಗೆ ನಿಂತ ಸುನಕ್: ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡ ಯುಕೆ ಪ್ರಧಾನಿ ರಿಷಿ ಸುನಕ್, ಬಿಬಿಸಿ ಸಾಕ್ಷ್ಯಚಿತ್ರ ಸರಣಿಯನ್ನು ಅವರು ಖಂಡಿಸಿದ್ದಾರೆ. ಸರಣಿಯಲ್ಲಿ ಭಾರತದ ಪ್ರಧಾನಿಯ ಪಾತ್ರವನ್ನು ಚಿತ್ರಿಸಲಾದ ರೀತಿಯನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ ಮೂಲದ ಸಂಸದ ಇಮ್ರಾನ್ ಹುಸೇನ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಎತ್ತಿದ ವಿವಾದಾತ್ಮಕ ಸಾಕ್ಷ್ಯಚಿತ್ರದ ಕುರಿತು ಸುನಕ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಆರ್ಥಿಕ ಸಶಕ್ತ ದೇಶ ಕಟ್ಟುವೆ, ಮಾತಲ್ಲಿ ಅಲ್ಲ ಮಾಡಿ ತೋರಿಸುವೆ: ರಿಷಿ ಸುನಕ್​ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.