ಕಾಂಗೋ: ಅಧಿಕಾರಿಗಳೆಲ್ಲಾ ಸೇರಿ ಉದ್ಘಾಟಿಸುವ ಸಂದರ್ಭದಲ್ಲೇ ಪುಟ್ಟ ಸೇತುವೆಯೊಂದು ದಿಢೀರ್ ಕುಸಿದು ಬಿದ್ದಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ಸೇತುವೆ ನಿರ್ಮಾಣದ ಕಾಮಗಾರಿಯ ಗುಣಮಟ್ಟವನ್ನು ಅಲ್ಲಿನ ಜನರಷ್ಟೇ ಅಲ್ಲ, ವಿಡಿಯೋ ನೋಡಿದ ಪ್ರತಿಯೊಬ್ಬರೂ ವ್ಯಂಗ್ಯವಾಡುತ್ತಿದ್ದಾರೆ.
-
Bridge collapses while being commissioned in DR Congo. pic.twitter.com/hIzwKWBx9g
— Africa Facts Zone (@AfricaFactsZone) September 5, 2022 " class="align-text-top noRightClick twitterSection" data="
">Bridge collapses while being commissioned in DR Congo. pic.twitter.com/hIzwKWBx9g
— Africa Facts Zone (@AfricaFactsZone) September 5, 2022Bridge collapses while being commissioned in DR Congo. pic.twitter.com/hIzwKWBx9g
— Africa Facts Zone (@AfricaFactsZone) September 5, 2022
ಮಳೆಗಾಲದಲ್ಲಿ ಊರಿನ ಜನರ ಓಡಾಟಕ್ಕೆ ಈ ಸಣ್ಣ ಸೇತುವೆಯನ್ನು ನಿರ್ಮಿಸಲಾಗಿತ್ತು. ಅಧಿಕಾರಿಗಳು ಸೇರಿ ಸೇತುವೆಯ ಮೇಲೆ ನಿಂತು ಕೆಂಪು ರಿಬ್ಬನ್ ತುಂಡರಿಸಲು ಅಣಿಯಾಗುತ್ತಿದ್ದರು. ಅಷ್ಟರಲ್ಲೇ ಸೇತುವೆ ಕುಸಿದು ಬಿತ್ತು. ಸೇತುವೆಯಲ್ಲಿ ಮಹಿಳಾಧಿಕಾರಿಯೂ ಇದ್ದು ಸಮತೋಲನ ಕಳೆದುಕೊಂಡು ಕೆಳಗೆ ಬೀಳುತ್ತಿದ್ದರು. ಅಷ್ಟರಲ್ಲೇ ಅವರನ್ನು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಿಡಿದುಕೊಂಡರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಾಂಗೋದ ಮಧ್ಯಮಗಳ ಪ್ರಕಾರ, ಈ ಘಟನೆ ಕಳೆದ ವಾರ ನಡೆದಿದೆ. ಸೇತುವೆ ಎರಡು ಹೋಳಾಗಿ ಬಿದ್ದಿದೆ.
ಈ ದೃಶ್ಯ ನೋಡಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ ಜನರು, ಈ ಸೇತುವೆಗೂ ಕೂಡಾ ಮಿಲಿಯನ್ ಡಾಲರ್ ಹಣ ವ್ಯಯಿಸಿರಬಹುದು ಎನ್ನುತ್ತಾ ಭ್ರಷ್ಟಾಚಾರವನ್ನು ಟೀಕಿಸಿದ್ದಾರೆ.
ಮತ್ತೊಬ್ಬರು ಟ್ವೀಟಿಸಿ, ರಿಬ್ಬನ್ ಮಾತ್ರವೇ ಈ ಸೇತುವೆಯನ್ನು ಒಂದು ತುದಿಯಿಂದ ಮತ್ತೊಂದು ತುದಿಯನ್ನು ಹಿಡಿದುಕೊಂಡಂತಿದೆ ಎಂದು ವ್ಯಂಗ್ಯವಾಡಿದ್ದಾರೆ.