ವಾಷಿಂಗ್ಟನ್: ಅಮೆರಿಕ ಪ್ರತಿಸ್ಪರ್ಧಿ ಚೀನಾ ಮತ್ತು ರಷ್ಯಾ ಜಾಗತಿಕ ಪ್ರಭಾವಕ್ಕಾಗಿ ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿರುವಾಗ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಏಷ್ಯಾ ಮತ್ತು ಆಫ್ರಿಕಾ ಖಂಡಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಬ್ಲಿಂಕೆನ್ ಮುಂದಿನ ವಾರ ಎರಡು ಖಂಡಗಳ ಐದು ರಾಷ್ಟ್ರಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಕಾಂಬೋಡಿಯಾದಲ್ಲಿ ನಡೆಯಲಿರುವ ಆಗ್ನೇಯ ಏಷ್ಯಾದ ಪ್ರಾದೇಶಿಕ ಭದ್ರತಾ ವೇದಿಕೆಯಲ್ಲಿ ಬ್ಲಿಂಕೆನ್ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಚೀನಾ ಮತ್ತು ರಷ್ಯಾದ ವಿದೇಶಾಂಗ ಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ. ನಂತರ ಬ್ಲಿಂಕನ್ ಫಿಲಿಪೈನ್ಸ್, ದಕ್ಷಿಣ ಆಫ್ರಿಕಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾಗೆ ಭೇಟಿ ನೀಡಲಿದ್ದಾರೆ.
ಬ್ಲಿಂಕೆನ್ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅಥವಾ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ನೋಮ್ ಪೆನ್‌ನಲ್ಲಿ ಪ್ರತ್ಯೇಕವಾಗಿ ಭೇಟಿಯಾಗುವ ನೀರಿಕ್ಷೆಯಿದೆ. ಬ್ಲಿಂಕೆನ್ ಫೋನ್ ಮೂಲಕ ಲಾವ್ರೊವ್ ಅವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ, WNBA ಸ್ಟಾರ್ ಬ್ರಿಟ್ನಿ ಗ್ರೈನರ್ ಮತ್ತು ಇನ್ನೊಬ್ಬ ಅಮೆರಿಕನ್ ಬಂಧಿತ ಪಾಲ್ ವೇಲನ್ ಬಿಡುಗಡೆ ಮಾಡುವ US ಪ್ರಸ್ತಾಪವನ್ನು ಸ್ವೀಕರಿಸಲು ಮಾಸ್ಕೋವನ್ನು ಒತ್ತಾಯಿಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ G-20 ಗುಂಪಿನ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ವಾಂಗ್ರನ್ನು ಬ್ಲಿಂಕನ್ ಕೊನೆಯ ಬಾರಿ ಭೇಟಿಯಾಗಿದ್ದರು. ಆದರೆ, ಕಾಂಬೋಡಿಯಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಪರಸ್ಪರವಾಗಿ ಭೇಟಿಯಾಗುವ ನಿರೀಕ್ಷೆಯಿದೆ.
ನವೆಂಬರ್ ಆರಂಭದಲ್ಲಿ ಏಷ್ಯಾದಲ್ಲಿ ಮೂರು ಶೃಂಗಸಭೆಗಳು ನಡೆಯಲಿವೆ. ಇಂಡೋನೇಷ್ಯಾದಲ್ಲಿ ಜಿ- 20, ಕಾಂಬೋಡಿಯಾದಲ್ಲಿ ಪೂರ್ವ ಏಷ್ಯಾ ಶೃಂಗಸಭೆ ಮತ್ತು ಥೈಲ್ಯಾಂಡ್‌ನಲ್ಲಿ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಸಭೆ ನಡೆಯಲಿವೆ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ, ಜೊತೆಗೆ ಚೀನಾದೊಂದಿಗೆ ಹೆಚ್ಚುತ್ತಿರುವ ಪಾಶ್ಚಿಮಾತ್ಯ ಉದ್ವಿಗ್ನತೆಗಳು, ವಿಶೇಷವಾಗಿ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಸಂಬಂಧ ಸಭೆಗಳಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ. ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿರುವುದು ಚೀನಾವನ್ನು ಕೆರಳಿಸಿದೆ.
ಓದಿ: 'ಬೆಂಕಿಯೊಂದಿಗೆ ಆಡುವವರು ಸುಟ್ಟು ಹೋಗ್ತಾರೆ': ತೈವಾನ್ ವಿಚಾರವಾಗಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ