ETV Bharat / international

ಅಮೆರಿಕ ಅಧ್ಯಕ್ಷ ಬೈಡನ್​ಗೆ ಮತ್ತೆ ವಕ್ಕರಿಸಿದ ಕೊರೊನಾ: ಇದು ವಿಶಿಷ್ಟ ಎಂದ ವೈದ್ಯರು!

ಶ್ವೇತಭವನದ ವೈದ್ಯ ಡಾ. ಕೆವಿನ್ ಒ'ಕಾನ್ನರ್ ಮಾಹಿತಿ ನೀಡಿ, ಬೈಡನ್ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಬಿಡೆನ್​ಗೆ ಮತ್ತೇ ವಕ್ಕರಿಸಿದ ಕೊರೊನಾ: ಇದು ವಿಶಿಷ್ಟ ಎಂದ ವೈದ್ಯರು!

author img

By

Published : Jul 31, 2022, 3:17 PM IST

ವಾಷಿಂಗ್ಟನ್(ಅಮೆರಿಕ) : ಅಧ್ಯಕ್ಷ ಜೋ ಬೈಡನ್ ಅವರಿಗೆ ಮತ್ತೆ ಕೊರೊನಾ ವಕ್ಕರಿಸಿದೆ. ಮೂರು ದಿಗಗಳ ಕಾಲ ಪ್ರತ್ಯೇಕವಾಗಿ ಇದ್ದು ಅಲ್ಲಿಂದ ಹೊರಬಂದಿದ್ದರು. ಶನಿವಾರ ಮತ್ತೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ ಎಂದು ಶ್ವೇತಭವನ ತಿಳಿಸಿದೆ.

ಶ್ವೇತಭವನದ ವೈದ್ಯ ಡಾ. ಕೆವಿನ್ ಒ'ಕಾನ್ನರ್ ಮಾಹಿತಿ ನೀಡಿ, ಬೈಡನ್ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ. ಈ ಸಮಯದಲ್ಲಿ ಚಿಕಿತ್ಸೆಯನ್ನು ಪುನಾರಂಭಿಸಲು ನಿಖರವಾದ ಯಾವುದೇ ಕಾರಣವೂ ಇಲ್ಲ ಎಂದು ಹೇಳಿದರು.

ವೈದ್ಯರ ಪ್ರಕಾರ, ಇದು ಮರುಕಳಿಸುವಿಕೆಯ ಪ್ರಕರಣವಾಗಿದೆ. ಇದು ವಿರಳವಾಗಿ ಕಂಡುಬರುತ್ತದೆ. ಈಗ ಬೈಡನ್ ಕನಿಷ್ಠ 5 ದಿನಗಳ ಕಾಲ ಪ್ರತ್ಯೇಕವಾಗಿರುತ್ತಾರೆ.

79 ವರ್ಷದ ಬೈಡ​ನ್​ಗೆ ಕಳೆದ ವಾರ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿತ್ತು. ಆ ಸಮಯದಲ್ಲಿ ಅವರು ವೈರಸ್‌ನ ಸಣ್ಣ ರೋಗಲಕ್ಷಣಗಳನ್ನು ಹೊಂದಿದ್ದರು. ನಂತರ ಪ್ರತ್ಯೇಕವಾಗಿ ಇದ್ದರು. ಇದಾದ ನಂತರ ಅವರು ಶ್ವೇತಭವನದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ವರದಿ ನೆಗೆಟಿವ್ ಬಂದ ನಂತರ ಜ್ವರವೂ ನಿಂತಿತ್ತು. ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ ಮತ್ತು ಅವರು ಕಚೇರಿಗೆ ಮರಳಿದ್ದರು.

ಅಧ್ಯಕ್ಷರು ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ನಾನು ಚೆನ್ನಾಗಿದ್ದೇನೆ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಷಿ ಸುನಕ್‌ಗೆ ಯುಕೆ ಪ್ರಧಾನಿ ಪಟ್ಟ ಡೌಟು! ಹೊಸ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.