ETV Bharat / international

ಇಸ್ರೇಲ್-ಹಮಾಸ್ ಯುದ್ಧ: ಮಾನವೀಯ ವಿರಾಮಕ್ಕೆ ಕರೆ ನೀಡಿದ ಜೋ ಬೈಡನ್

author img

By PTI

Published : Nov 2, 2023, 11:36 AM IST

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಮಿನ್ನಿಯಾಪೋಲಿಸ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಪ್ಯಾಲೆಸ್ಟೈನ್ ಪರ ಮಹಿಳೆಯೊಬ್ಬರು ಕದನ ವಿರಾಮದ ಬಗ್ಗೆ ಚರ್ಚಿಸುವಂತೆ ಮನವಿ ಮಾಡಿದರು.

biden
ಜೋ ಬೈಡನ್

ಮಿನ್ನಿಯಾಪೋಲಿಸ್ (ಅಮೆರಿಕ) : ಇಸ್ರೇಲ್-ಹಮಾಸ್ ಯುದ್ಧದಲ್ಲಿ ಮಾನವೀಯ ವಿರಾಮ ಇರಬೇಕು ಎಂದು ನಾನು ಭಾವಿಸುತ್ತೇನೆ ಅಂತಾ ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಆದಾಗ್ಯೂ, ಯುಎಸ್​ ಅಧ್ಯಕ್ಷರು ಮಾನವ ಹಕ್ಕುಗಳ ಗುಂಪುಗಳು, ಸಹವರ್ತಿ ವಿಶ್ವ ನಾಯಕರು ಮತ್ತು ಡೆಮಾಕ್ರಟಿಕ್ ಪಕ್ಷದ ಉದಾರವಾದಿ ಸದಸ್ಯರಿಂದ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಗಾಜಾದ ಮೇಲೆ ಇಸ್ರೇಲ್​ ಬಾಂಬ್ ದಾಳಿಯನ್ನು ಸಾಮೂಹಿಕ ಶಿಕ್ಷೆ ಎಂದು ಈ ಪಕ್ಷಗಳು ನಂಬಿದ್ದು, ಅಮೆರಿಕ ಕದನ ವಿರಾಮಕ್ಕೆ ಒತ್ತಾಯಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಇದನ್ನೂ ಓದಿ : ಒತ್ತೆಯಾಳಾಗಿದ್ದ ಯೋಧೆಯನ್ನು ರಕ್ಷಿಸಿದ ಇಸ್ರೇಲ್​ ಸೇನೆ: ಕದನ ವಿರಾಮ ತಿರಸ್ಕರಿಸಿದ ಪ್ರಧಾನಿ ನೆತನ್ಯಾಹು

ಇತ್ತೀಚಿನ ಹೇಳಿಕೆ ಪ್ರಕಾರ, ಬೈಡನ್ ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ಯಾಲೆಸ್ಟೀನಿಯರ ವಿರುದ್ಧ ಪಟ್ಟುಬಿಡದ ಮಿಲಿಟರಿ ಕಾರ್ಯಾಚರಣೆಗೆ ವಿರಾಮ ನೀಡುವಂತೆ ಒತ್ತಡ ಹೇರಿದ್ದಾರೆ. ಇಸ್ರೇಲ್ ದಾಳಿಯಲ್ಲಿ 141 ಚದರ ಮೈಲಿ ಗಾಜಾ ಪಟ್ಟಿಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇಸ್ರೇಲಿ ವಾಯು ಪಡೆಗಳ ದಾಳಿಯಿಂದಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ : ' ನಮ್ಮನ್ನಿಲ್ಲಿ ಚೆನ್ನಾಗಿ ನೋಡಿಕೊಳ್ತಿದಾರೆ ' : ಹಮಾಸ್​ ಉಗ್ರರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಒತ್ತೆಯಾಳು ಯುವತಿ ಹೇಳಿಕೆ

ಬುಧವಾರ ಸಂಜೆ ಜೋ ಬೈಡನ್ ಅವರು ಮಿನ್ನಿಯಾಪೋಲಿಸ್‌ನಲ್ಲಿ ಚುನಾವಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮಹಿಳೆಯೊಬ್ಬರು ಎದ್ದು ನಿಂತು ಏರು ಧ್ವನಿಯಲ್ಲಿ ಕಿರುಚಿದರು. "ಅಧ್ಯಕ್ಷರೇ, ನಿಮಗೆ ಯಹೂದಿ ಜನರ ಬಗ್ಗೆ ಕಾಳಜಿ ಇದ್ದರೆ, ಕೂಡಲೇ ಕದನ ವಿರಾಮಕ್ಕೆ ಕರೆ ನೀಡಬೇಕಾಗಿದೆ" ಎಂದು ಹೇಳಿದರು. ಬೈಡನ್ ಆಗಮನವನ್ನು ಗಮನದಲ್ಲಿಟ್ಟುಕೊಂಡು 1,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರು ಮಿನ್ನಿಯಾಪೋಲಿಸ್‌ನಲ್ಲಿ ಜಮಾಯಿಸಿದ್ದರು. ಮಕ್ಕಳ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸಿ, ಪ್ಯಾಲೆಸ್ತೀನ್ ಅನ್ನು ಮುಕ್ತಗೊಳಿಸಿ ಮತ್ತು ಈಗಲೇ ಕದನ ವಿರಾಮ ಮಾಡಿ ಎಂಬ ಘೋಷಣೆಗಳೊಂದಿಗೆ ಪ್ಯಾಲೆಸ್ತೀನ್ ಧ್ವಜಗಳು ಮತ್ತು ಫಲಕಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ : Israel - Palestine war : ಇದುವರೆಗೆ 8,525 ಪ್ಯಾಲೇಸ್ಟೈನಿಯನ್​ಗಳ ಸಾವು... ಗಾಜಾದಿಂದ ಈಜಿಪ್ಟ್‌ಗೆ ಬಂದ ವಿದೇಶಿಗರು

ಇನ್ನು ಉಗ್ರಗಾಮಿಗಳೊಂದಿಗಿನ ಭಾರಿ ಕಾಳಗದಲ್ಲಿ ಇಸ್ರೇಲಿ ಪಡೆಗಳು ಗಾಜಾ ನಗರದಲ್ಲಿ ದಾಳಿ ಮುಂದುವರೆಸಿವೆ ಎಂದು ಇಸ್ರೇಲ್​ ಮಿಲಿಟರಿ ಬುಧವಾರ ತಿಳಿಸಿದೆ. ಈ ಮಧ್ಯೆ, ಇಸ್ರೇಲ್​ ರಾಯಭಾರಿ ಮೈಕೆಲ್ ಹೆರ್ಜಾಗ್ ಅವರು ಗಾಜಾದ ದಕ್ಷಿಣ ಭಾಗದಲ್ಲಿರುವ ಹಮಾಸ್‌ನಿಂದ ದೂರವಿರುವ ಪ್ರದೇಶಗಳಿಗೆ ನಾವು ಮಾನವೀಯ ಸರಬರಾಜುಗಳನ್ನು ಸ್ಥಳಾಂತರಿಸುತ್ತಿದ್ದೇವೆ. ಟ್ರಕ್‌ಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಮತ್ತಷ್ಟು ಹೆಚ್ಚಾಗಲಿದೆ. ನೀರು ಸಹ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹಮಾಸ್​ ರಕ್ತಚರಿತ್ರೆಗೆ ಅಂತ್ಯ ಹಾಡಲು ಇಸ್ರೇಲ್‌ ಪ್ರತಿಜ್ಞೆ ; ಗಾಜಾ ತೊರೆದ 8 ಲಕ್ಷಕ್ಕೂ ಹೆಚ್ಚು ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.