ಸಿಡ್ನಿ(ಆಸ್ಟ್ರೇಲಿಯಾ): ಎಷ್ಟೇ ಫಿಟ್ ಇದ್ದರೂ ಅಬ್ಬಬ್ಬಾ ಅಂದ್ರೂ ಒಂದು ನೂರು ಪುಲ್ ಅಪ್ ಮಾಡಬಹುದು. ಆದರೆ ಇಲ್ಲೊಬ್ಬ ಪರೋಪಕಾರಿ ತನ್ನ ಕನಸನ್ನು ನನಸಾಗಿಸಲು 24 ಗಂಟೆ ಅವಧಿಯಲ್ಲಿ 8,008 ಬಾರಿ ಪುಲ್ ಅಪ್ ಮಾಡಿ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾನೆ. ವಿಷಯ ಇಷ್ಟೇ ಅಲ್ಲ. ಈತ ಇಷ್ಟೆಲ್ಲಾ ಮಾಡಿದ್ದು ಬುದ್ಧಿಮಾಂದ್ಯ ಚಾರಿಟಿಗೆ ಹಣ ಸಂಗ್ರಹಿಸಲು ಎಂಬುದು ಇಲ್ಲಿ ವಿಶೇಷ.
ಆಸ್ಟ್ರೇಲಿಯಾದ ಫಿಟ್‌ನೆಸ್ ಉತ್ಸಾಹಿ ಜಾಕ್ಸನ್ ಇಟಾಲಿಯನ್ ಈ ಸಾಧನೆ ಮಾಡಿದವರು. ಸಿಡ್ನಿ ನಿವಾಸಿಯಾದ ಈತ ಹರೆಯದರಲ್ಲೇ ಶಿಖರಪ್ರಾಯ ಸಾಧನೆ ಮಾಡಿದ್ದಾನೆ. ಇನ್ನೊಂದು ಜೀವಕ್ಕಾಗಿ ಮಿಡಿಯುವ ಈತನ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
- " class="align-text-top noRightClick twitterSection" data="
">
ನ್ಯೂಸೌತ್ ವೇಲ್ಸ್ನಲ್ಲಿರುವ ಲಾಭರಹಿತ ಬುದ್ಧಿಮಾಂದ್ಯ ಸಂಸ್ಥೆಯಲ್ಲಿ 4 ಲಕ್ಷ ಜನರಿದ್ದು, ಅವರಿಗೆ ಅಗತ್ಯವಿರುವ ಚಿಕಿತ್ಸೆಗಾಗಿ ಜಾಕ್ಸನ್ ಇಟಾಲಿಯನ್ ಹಣ ಸಂಗ್ರಹಿಸಲು ಇಚ್ಚಿಸಿದ್ದ. ತನ್ನ ಶಕ್ತಿಯಾದ ಫಿಟ್‌ನೆಸ್ ಅನ್ನೇ ಬಳಸಿಕೊಂಡ ಜಾಕ್ಸನ್ ಪುಲ್ ಅಪ್ ಚಾಲೆಂಜ್ ಆಯ್ದುಕೊಂಡಿದ್ದಾನೆ. ಒಂದು ಪುಲ್ ಅಪ್‌ಗೆ 1 ಡಾಲರ್ ನೀಡಲು ದಾನಿಗಳಲ್ಲಿ ಕೋರಿದ್ದ.
ಅದರಂತೆ ಜಾಕ್ಸನ್, 24 ಗಂಟೆ ಅವಧಿಯಲ್ಲಿ ಮೂರೂವರೆ ಗಂಟೆಗಳ ವಿಶ್ರಾಂತಿಯನ್ನು ಪಡೆದುಕೊಂಡು, ಇಪ್ಪತ್ತೂವರೆ ಗಂಟೆಗಳಲ್ಲಿ 8008 ಬಾರಿ ಪುಲ್ ಅಪ್ ಮಾಡಿದ್ದಾನೆ. ಇಂತಹ ಸಾಹಸಕ್ಕೆ ಕೈ ಹಾಕಿದ ಯುವಕ ದೇಣಿಗೆಯಾಗಿ 5,914.72 ಸಂಗ್ರಹಿಸಿದ್ದಾನೆ. ಇಷ್ಟಲ್ಲದೇ ಸತತ 24 ಗಂಟೆ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ಯಾರೂ ಮಾಡದ ಸಾಧನೆ ತೋರಿ ಗಿನ್ನೆಸ್ ವಿಶ್ವದಾಖಲೆಯ ಪುಟವನ್ನೂ ಸೇರಿದ್ದಾನೆ.
ಪ್ರತಿ ಪುಲ್ ಅಪ್‌ಗೆ 1 ಡಾಲರ್ ಗುರಿ ಹೊಂದಿದ್ದ ಜಾಕ್ಸನ್ 3 ಗಂಟೆ ವಿಶ್ರಾಂತಿ ಪಡೆದ ಕಾರಣ ಅದು 0.66 ಡಾಲರ್ ಬೆಲೆ ಸಿಕ್ಕಿದೆ. ತಾವು ಸಂಗ್ರಹಿಸಿದ ಅಷ್ಟೂ ಮೊತ್ತವನ್ನು ಬುದ್ಧಿಮಾಂದ್ಯ ಚಾರಿಟಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜಾಕ್ಸನ್ ಇಟಾಲಿಯನ್ರ ಸಾಧನೆ ಮತ್ತು ಔದಾರ್ಯ ಕಂಡು ಜನರೇ ಬೆರಗಾಗಿದ್ದಾರೆ.
ಇದಕ್ಕೂ ಮೊದಲು ಜಾಕ್ಸನ್ ನಿಧಿ ಸಂಗ್ರಹಣೆಗಾಗಿ ಪೇಜ್ ತೆರೆದು, ಅದರಲ್ಲಿ ತನ್ನ ಪ್ರತಿ ಪುಲ್ ಅಪ್‌ಗೆ 1 ಡಾಲರ್ ನೀಡಲು ಕೋರಿದ್ದರು. ನಾನು ಮಾಡುವ ಪ್ರತಿಯೊಂದು ಪುಲ್ ಅಪ್‌ಗೆ 1 ಡಾಲರ್ ಸಂಗ್ರಹಿಸಲು ಗುರಿ ಹೊಂದಿದ್ದೇನೆ. ಇದಕ್ಕಾಗಿ ನನಗೆ ನಿಮ್ಮ ಸಹಾಯ ಬೇಕು. ದಯವಿಟ್ಟು ನನ್ನ ಪ್ರಯತ್ನವನ್ನು ಬೆಂಬಲಿಸಿ. ಬುದ್ಧಿಮಾಂದ್ಯತೆಯನ್ನು ಮೀರುವ ನನ್ನ ಗುರಿಯನ್ನು ತಲುಪಲು ಸಹಾಯ ಮಾಡಲು ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು.
"ಸಂಗ್ರಹಿಸಿದ ಎಲ್ಲಾ ನಿಧಿಯನ್ನು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಜನರಿಗೆ, ಅವರ ಕುಟುಂಬಗಳು ಮತ್ತು ಆರೈಕೆದಾರರಿಗೆ ನೀಡಲು ಬಯಸುವೆ. ಅವರಿಗೆ ಈ ಹಣ ಸೇರಲಿದೆ. ಇದರಿಂದ ಅವರಿಗೆ ಶಿಕ್ಷಣ, ತರಬೇತಿ, ವೈದ್ಯರ ಸಮಾಲೋಚನೆ ಸೇರಿದಂತೆ ನಾನಾ ಕಾರಣಗಳಿಗೆ ಬಳಕೆಯಾಗಲಿದೆ. ಆಸ್ಟ್ರೇಲಿಯಾದ ಲಾಭರಹಿತ ಬುದ್ಧಿಮಾಂದ್ಯ ಸಂಸ್ಥೆಯನ್ನು ನಾವು ಬೆಂಬಲಿಸಬೇಕಿದೆ ಎಂದು ಕೋರಿದ್ದರು.
3 ಗಂಟೆ ವ್ಯರ್ಥ ಮಾಡಿದೆ: 8 ಸಾವಿರಕ್ಕೂ ಅಧಿಕ ಪುಲ್ ಅಪ್ ಮಾಡಿ ಜಗತ್ತೇ ಕಣ್ಣರಳಿಸುವಂತೆ ಮಾಡಿದ ಜಾಕ್ಸನ್ ತನ್ನ ಸಾಧನೆಯ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದು, ತನ್ನ ಪ್ರಯತ್ನದಲ್ಲಿ ಮೂರೂವರೆ ಗಂಟೆಯನ್ನು ವ್ಯರ್ಥ ಮಾಡಿದೆ. ಇಲ್ಲವಾದಲ್ಲಿ ಇನ್ನಷ್ಟು ಹಣವನ್ನು ಗಳಿಸಬಹುದಾಗಿತ್ತು. ನಾನು ಪೂರ್ಣ ದಣಿದಿದ್ದೆ. ಹೀಗಾಗಿ ವಿಶ್ರಾಂತಿ ಪಡೆದೆ ಎಂದು ತಿಳಿಸಿದ್ದಾರೆ.
-
New record: Most pull ups in 24 hours (male) - 8,008 by Jaxon Italiano (Australia) 🏋️♂️https://t.co/qgQMVVa7AL
— Guinness World Records (@GWR) March 7, 2023 " class="align-text-top noRightClick twitterSection" data="
">New record: Most pull ups in 24 hours (male) - 8,008 by Jaxon Italiano (Australia) 🏋️♂️https://t.co/qgQMVVa7AL
— Guinness World Records (@GWR) March 7, 2023New record: Most pull ups in 24 hours (male) - 8,008 by Jaxon Italiano (Australia) 🏋️♂️https://t.co/qgQMVVa7AL
— Guinness World Records (@GWR) March 7, 2023
ಜಾಕ್ಸನ್ರ ಈ ಸಾಹಸದ ಬಗ್ಗೆ ಪ್ರತಿಕ್ರಿಯಿಸಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, "ಇಟಾಲಿಯನ್ ಅವರು ಮಾಡಿದ ಈ ಸಾಧನೆ ಸಾಧಾರಣವಲ್ಲ. ಇದರಿಂದ ಆತ ಶಾಶ್ವತ ಅಂಗವೈಕಲ್ಯಕ್ಕೂ ಒಳಗಾಗಬಹುದಿತ್ತು. ಗಾಯ, ಮಾನಸಿಕ ಒತ್ತಡ ಮತ್ತು ಗಂಭೀರ ಕಾಯಿಲೆಯಾದ ರಾಬ್ಡೋಮಿಯೊಲಿಸಿಸ್ ಆತಂಕವೂ ಇತ್ತು. ಅಷ್ಟೇ ಅಲ್ಲ, ಇದು ಮಾರಣಾಂತಿಕ ಅಥವಾ ಶಾಶ್ವತ ಅಂಗವೈಕಲ್ಯಕ್ಕೂ ದಾರಿಯಾಗುವ ಕೆಲಸ" ಎಂದು ಹೇಳಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ: ಹೋಳಿ ಸಂಭ್ರಮದಲ್ಲಿ ಭಾಗಿ