ETV Bharat / international

ಮಾಲಿ: ಇಸ್ಲಾಮಿಸ್ಟ್​ ದಂಗೆಕೋರರ ದಾಳಿಗೆ 49 ನಾಗರಿಕರು, 15 ಸೈನಿಕರು ಸಾವು - Malian military

ಮಾಲಿಯಲ್ಲಿ ಇಸ್ಲಾಮಿಸ್ಟ್​ ದಂಗೆಕೋರರು ನಡೆಸಿದ ಭೀಕರ ದಾಳಿಯಲ್ಲಿ ಹಲವು ಮಂದಿ ನಾಗರಿಕರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ.

attacks by Islamist insurgents in Mali
ಇಸ್ಲಾಮಿಸ್ಟ್​ ದಂಗೆಕೋರರ ದಾಳಿ
author img

By PTI

Published : Sep 8, 2023, 7:02 AM IST

ಬಮಾಕೊ (ಮಾಲಿ) : ಆಫ್ರಿಕಾದ ದೇಶ ಮಾಲಿಯ ಉತ್ತರ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಇಲ್ಲಿ ಇಸ್ಲಾಮಿಸ್ಟ್​ ಬಂಡುಕೋರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 49 ನಾಗರಿಕರು ಮತ್ತು 15 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ದೇಶದ ಮಿಲಿಟರಿ ತಿಳಿಸಿದೆ. ನೈಜರ್ ನದಿಯ ಟಿಂಬಕ್ಟು ನಗರದ ಸಮೀಪವಿದಲ್ಲಿರುವ ಪ್ರಯಾಣಿಕರ ಬೋಟ್​ ಮತ್ತು ಗಾವೊ ಪ್ರದೇಶದಲ್ಲಿರುವ ಮಾಲಿಯನ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಶೋಕಾಚರಣೆ: ಇಸ್ಲಾಮಿಸ್ಟ್ ಉಗ್ರಗಾಮಿ ದಂಗೆಕೋರ ಗುಂಪು ಜೆಎನ್‌ಐಎಂ ಮತ್ತು ಅಲ್ ಖೈದಾದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕೆಲವು ಸಶಸ್ತ್ರ ಸಜ್ಜಿತ ಗುಂಪುಗಳು ದಾಳಿಯ ಕುರಿತು ಹೇಳಿಕೊಂಡಿವೆ. ಹಾಗೆಯೇ, ಮಿಲಿಟರಿ ಪಡೆಗಳು ಕೂಡ ಸುಮಾರು 50 ದಾಳಿಕೋರರನ್ನು ಕೊಂದು ಹಾಕಿವೆ ಎಂದು ಮಾಲಿಯನ್ ಸರ್ಕಾರ ಪ್ರಕಟಣೆ ತಿಳಿಸಿದೆ. ಹುತಾತ್ಮರಾದ ನಾಗರಿಕರು ಮತ್ತು ಸೈನಿಕರ ಗೌರವಾರ್ಥ ಶುಕ್ರವಾರದಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ವಿಶ್ವಸಂಸ್ಥೆಯ ಮಾನವೀಯ ಏಜೆನ್ಸಿಯು ಆಗಸ್ಟ್​ನಲ್ಲಿ ನೀಡಿದ ವರದಿಯ ಪ್ರಕಾರ, 30,000 ಕ್ಕೂ ಹೆಚ್ಚು ನಿವಾಸಿಗಳು ನಗರ ಮತ್ತು ಹತ್ತಿರದ ಪ್ರದೇಶದಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ. ಇನ್ನೊಂದೆಡೆ, ಸರ್ಕಾರದ ಕೋರಿಕೆಯ ಮೇರೆಗೆ ಯುಎನ್ ತನ್ನ 17,000 ಬಲವಾದ ಶಾಂತಿಪಾಲನಾ ಕಾರ್ಯಾಚರಣೆ MINUSMA ಅನ್ನು ಮಾಲಿಯಿಂದ ಹಿಂಪಡೆಯಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಈ ಮಾರಣಾಂತಿಕ ದಾಳಿ ಸಂಭವಿಸಿದೆ. ಮಾಲಿಯಲ್ಲಿ ಶಾಂತಿಪಾಲನಾ ಕಾರ್ಯಾಚರಣೆ ಹಿಂತೆಗೆದುಕೊಳ್ಳುವಿಕೆಯು ವರ್ಷಾಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : ಬಾಂಬ್​ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಬಸ್.. 11 ಜನ ಸಾವು, ಹಲವಾರು ಜನ ಗಾಯ

ಹಿಂದಿನ ದಾಳಿ ಪ್ರಕರಣಗಳು: ಪಶ್ವಿಮ ಆಫ್ರಿಕಾದ ಮಾಲಿ ದೇಶವು ಅಲ್ ಖೈದಾ ಮತ್ತು ಇಸ್ಲಾಮಿಕ್​ ಸ್ಟೇಟ್​ನ ದಂಗೆಕೋರರ ದಾಳಿಯನ್ನು ಎದುರಿಸುತ್ತಿದೆ. 2012 ರಲ್ಲಿ ಟುವಾರೆಗ್​ ಪ್ರದೇಶದಲ್ಲಿ ಪ್ರತ್ಯೇಕವಾದಿಗಳ ಗುಂಪು ನಡೆಸಿದ ದಂಗೆಯ ಬಳಿಕ ದಾಳಿಗಳು ಹೆಚ್ಚಾಗಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ ಮಾಲಿಯ ಮಾಪ್ಟಿ ಪ್ರದೇಶದ ಹಳ್ಳಿಗೆ ನುಗ್ಗಿದ ಗುಂಪೊಂದು ಗುಂಡಿನ ದಾಳಿ ನಡೆಸಿ 21 ನಾಗರಿಕರನ್ನು ಹತ್ಯೆ ಮಾಡಿತ್ತು. ದುರಂತದಿಂದ 11 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಟಿಟಿಪಿ, ಐಎಸ್‌ ಸಂಘಟನೆಯ ಎಂಟು ಶಂಕಿತ ಉಗ್ರರ ಹತ್ಯೆ

ಕಳೆದ 2022 ರ ಮಾರ್ಚ್​​ ತಿಂಗಳಿನಲ್ಲಿ ಸುಮಾರು 8 ದಿನಗಳ ಕಾಲ ಮಾಲಿ ದೇಶದ ಮಧ್ಯ ಭಾಗದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಸುಮಾರು 203 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಮಾರ್ಚ್ 23 ರಿಂದ 31ರವರೆಗೆ ಮೋರಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು, ಈ ವೇಳೆ ಮಾಲಿಯನ್ ಪಡೆಗಳು 51 ಉಗ್ರರನ್ನು ಬಂಧಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಮಾಲಿಯನ್ ಮಿಲಿಟರಿ ಮಾಹಿತಿ ನೀಡಿತ್ತು.

ಇದನ್ನೂ ಓದಿ : ಮಾಲಿಯಲ್ಲಿ ಸೇನಾ ಕಾರ್ಯಾಚರಣೆ.. 200ಕ್ಕೂ ಉಗ್ರರ ಬೇಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.