ETV Bharat / international

ಜೆರುಸಲೇಂನಲ್ಲಿ ಭೀಕರ ಗುಂಡಿನ ದಾಳಿ.. 8 ಜನರ ನೆತ್ತರು ಹರಿಸಿದ ಭಯೋತ್ಪಾದಕ

ಜೆರುಸಲೇಂನಲ್ಲಿ ಭಯೋತ್ಪದನಾ ದಾಳಿ - ದಾಳಿಯಲ್ಲಿ 8 ಜನರ ಸಾವು- ಓರ್ವ ಭಯೋತ್ಪಾದಕನಿಂದ ಗುಂಡಿನ ದಾಳಿ- ಪ್ಯಾಲೆಸ್ತೇನ್ ಅಟ್ಯಾಕ್​ ಬಳಿಕ ಮರು ದಾಳಿ

jerusalem-terror-attack
ಜೆರುಸಲೇಂನಲ್ಲಿ ಭೀಕರ ಗುಂಡಿನ ದಾಳಿ
author img

By

Published : Jan 28, 2023, 9:09 AM IST

ಜೆರುಸಲೇಂ (ಇಸ್ರೇಲ್): ಭಯೋತ್ಪಾದನೆ ಸಮಸ್ಯೆ ಯಾವ ದೇಶಗಳನ್ನೂ ಬಿಟ್ಟಿಲ್ಲ. ಭಾರತದ ಗಡಿಯಲ್ಲಿ ಪಾಕಿಸ್ತಾನದ ಕೃಪಾಪೋಷಿತ ಉಗ್ರರು ನಿತ್ಯವೂ ಉಪಟಳ ನಡೆಸುವುದು ಕಾಣುತ್ತೇವೆ. ಇದೀಗ ಇಸ್ರೇಲ್​ನಲ್ಲಿ ಅಟ್ಟಹಾಸ ಮೆರೆದಿರುವ ಪಾತಕಿಗಳು 8 ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಜೆರುಸಲೇಮ್‌ನ ಸಿನಗಾಗ್‌ನಲ್ಲಿ ಶುಕ್ರವಾರ ರಾತ್ರಿ ಭೀಕರ ಭಯೋತ್ಪಾದಕ ದಾಳಿ ನಡೆಸಿ ನೆತ್ತರು ಹರಿಸಿದ್ದಾರೆ. ಗುರುವಾರವಷ್ಟೇ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಮಹಿಳೆ ಸೇರಿದಂತೆ ಒಂಬತ್ತು ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲಿ ಭಯೋತ್ಪಾದಕ ಗುಂಡಿನ ಸುರಿಮಳೆಗೈದಿದ್ದಾನೆ ಎಂದು ಹೇಳಲಾಗಿದೆ.

ಓದಿ: ತೆಲುಗು ಯುವನಟ ತಾರಕರತ್ನಗೆ ಲಘು ಹೃದಯಾಘಾತ.. ಬೊಮ್ಮಸಂದ್ರದಲ್ಲಿ ಮುಂದುವರಿದ ಚಿಕಿತ್ಸೆ

ನೆವ್ ಯಾಕೋವ್ ಸ್ಟ್ರೀಟ್‌ನಲ್ಲಿರುವ ಸಿನಗಾಗ್ ಬಳಿ ರಾತ್ರಿ 8:15 ರ ಸುಮಾರಿಗೆ ಬಂದೂಕುದಾಗಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರೆ, 10 ಜನರು ಗಾಯಗೊಂಡಿದ್ದಾರೆ. ದಾಳಿ ನಡೆದ ತಕ್ಷಣ ವೈದ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ, ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಬಂದೂಕುದಾರಿ ವ್ಯಕ್ತಿಯನ್ನು ಇಸ್ರೇಲ್​ ಪಡೆಗಳು ಕೊಂದು ಹಾಕಿವೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಇಸ್ರೇಲ್​ ಪೊಲೀಸ್​ ವಿದೇಶಾಂಗ ಸಚಿವಾಲಯ, "ಜೆರುಸಲೇಮ್ ಭಯೋತ್ಪಾದನಾ ದಾಳಿಯಲ್ಲಿ ಸಿನಗಾಗ್‌ನಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಬಂದೂಕುಧಾರಿ ವ್ಯಕ್ತಿಯನ್ನು ಇಸ್ರೇಲ್​ ಪಡೆಗಳು ಹೊಡೆದುರುಳಿಸಿವೆ" ಎಂದು ತಿಳಿಸಿದ್ದಾರೆ.

ಪ್ಯಾಲೆಸ್ತೇನ್​ ಮೇಲೆ ಇಸ್ರೇಲ್​ ದಾಳಿ: ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ನಡೆಸಿದ ಈ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಜೊತೆಗಿನ ಭದ್ರತಾ ಸಂಬಂಧಗಳನ್ನು ಕಡಿದುಕೊಳ್ಳಲು ಆಗ್ರಹಿಸಿ ಪ್ಯಾಲೆಸ್ತೇನ್ ನಾಯಕರ ಮೇಲೆ ಒತ್ತಡ ಹಾಕಲಾಗುತ್ತಿದೆ.

ಇಸ್ರೇಲಿ ಪಡೆಗಳು ಪ್ಯಾಲೆಸ್ತೇನ್‌ನ ಸರ್ಕಾರಿ ಆಸ್ಪತ್ರೆಯ ಮೇಲೆ ಅಶ್ರುವಾಯು ಪ್ರಯೋಗಿಸಿದವು. ಆಸ್ಪತ್ರೆಯಲ್ಲಿ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿನ ಮಕ್ಕಳು, ಯುವಕರು ಮತ್ತು ಮಹಿಳೆಯರನ್ನು ರಕ್ಷಿಸಲು ಅಮೆರಿಕ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಘಟನೆಯ ಬಗ್ಗೆ ಪ್ಯಾಲೆಸ್ತೇನಿಯನ್ ಪ್ರಧಾನಿ ಮುಹಮ್ಮದ್ ಶ್ತಾಯೆಹ್ ಒತ್ತಾಯಿಸಿದರು.

ರಷ್ಯಾದ ದಾಳಿಗೆ 11 ಉಕ್ರೇನಿಯನ್ನರು ಸಾವು: ದಾಳಿಗೆ ಒಳಗಾಗಿರುವ ಉಕ್ರೇನ್‌ಗೆ ಸುಧಾರಿತ ಯುದ್ಧ ಟ್ಯಾಂಕ್‌ಗಳನ್ನು ಪೂರೈಸಲು ಅಮೆರಿಕ ಮತ್ತು ಜರ್ಮನಿ ನಿರ್ಧರಿಸಿದ ಬೆನ್ನಲ್ಲೇ, ರಷ್ಯಾ ಉಕ್ರೇನ್​ ಮೇಲೆ ಬಾಂಬ್​ ದಾಳಿ ನಡೆಸಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಕೀವ್ ಮತ್ತು ಒಡೆಸ್ಸಾ ಪ್ರದೇಶಗಳಲ್ಲಿ ಡಜನ್​ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಇದರಿಂದ 11 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವಾ ಘಟಕ ಬಹಿರಂಗಪಡಿಸಿವೆ. ದಾಳಿಯಿಂದಾಗಿ, ಒಡೆಸ್ಸಾದಲ್ಲಿ ಎರಡು ವಿದ್ಯುತ್ ಕೇಂದ್ರಗಳು ನಾಶವಾಗಿವೆ. ಕೀವ್ ಜೊತೆಗೆ ಒಡೆಸ್ಸಾ ಮತ್ತು ವಿನ್ನಿಟ್ಸಿಯಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ.

ಓದಿ: ಪೂರ್ವ ಲಡಾಖ್​ನಲ್ಲಿ ಚೀನಾ ಸೇನೆ ಕಿರಿಕ್..ಸಿಕ್ಕಿಂ, ಅರುಣಾಚಲಪ್ರದೇಶದಲ್ಲಿ ಸಮಸ್ಯೆ ಇಲ್ಲ: ಭಾರತೀಯ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.