ವಾಷಿಂಗ್ಟನ್(ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ವಿಜ್ಞಾನಿಗಳು ಆರ್ಟೆಮಿಸ್ ಮಿಷನ್ ಅಡಿ ಮತ್ತೆ ಚಂದ್ರನ ಮೇಲೆ ಮಾನವನನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಆರ್ಟೆಮಿಸ್ 1 ಮಿಷನ್ ರಾಕೆಟ್ ಉಡಾವಣೆ ಪ್ರಯತ್ನ ನಡೆಸಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ರಾಕೆಟ್ ಉಡಾವಣೆಗೊಂಡಿಲ್ಲ.
-
The launch of #Artemis I is no longer happening today as teams work through an issue with an engine bleed. Teams will continue to gather data, and we will keep you posted on the timing of the next launch attempt. https://t.co/tQ0lp6Ruhv pic.twitter.com/u6Uiim2mom
— NASA (@NASA) August 29, 2022 " class="align-text-top noRightClick twitterSection" data="
">The launch of #Artemis I is no longer happening today as teams work through an issue with an engine bleed. Teams will continue to gather data, and we will keep you posted on the timing of the next launch attempt. https://t.co/tQ0lp6Ruhv pic.twitter.com/u6Uiim2mom
— NASA (@NASA) August 29, 2022The launch of #Artemis I is no longer happening today as teams work through an issue with an engine bleed. Teams will continue to gather data, and we will keep you posted on the timing of the next launch attempt. https://t.co/tQ0lp6Ruhv pic.twitter.com/u6Uiim2mom
— NASA (@NASA) August 29, 2022
ನಾಸಾ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಆರ್ಟೆಮಿಸ್ 1 ಮಿಷನ್ ಉಡಾವಣೆಗೊಳ್ಳಬೇಕಾಗಿತ್ತು. ಆದರೆ, ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ರಾಕೆಟ್ ನೆಲ ಬಿಟ್ಟು ಮೇಲೇಳಲಿಲ್ಲ. ಇದರ ಬಗ್ಗೆ ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಡೇಟಾ ಸಂಗ್ರಹ ಕಾರ್ಯ ಮುಂದುವರೆದಿದೆ. ಉಡಾವಣೆಯ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ನಾಸಾ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಇಂದು ಚಂದ್ರನತ್ತ ಸಾಗಲಿದೆ ನಾಸಾದ ಆರ್ಟೆಮಿಸ್ 1 ಮಿಷನ್
2025ಕ್ಕೆ ಆರ್ಟೆಮಿಸ್ ಯೋಜನೆಯ 3ನೇ ಭಾಗ ಆರಂಭವಾಗಲಿದೆ. ಬಾಹ್ಯಾಕಾಶದ ಕಾರ್ಯಾಚರಣೆಯ ಹಿಂದಿನ ಮುಖ್ಯ ಉದ್ದೇಶ ಮಾನವರನ್ನು ಮತ್ತೊಮ್ಮೆ ಚಂದ್ರ ಲೋಕಕ್ಕೆ ಕಳುಹಿಸುವುದೇ ಆಗಿದೆ. ಇಂದಿನ ಉಡಾವಣೆ ವಿಫಲಗೊಂಡಿರುವ ಕಾರಣ ಇದೀಗ ಸೆಪ್ಟೆಂಬರ್ 2ರಂದು ಮತ್ತೊಮ್ಮೆ ರಾಕೆಟ್ ಉಡಾವಣೆ ಕಾರ್ಯ ನಡೆಯಲಿದೆ.