ETV Bharat / international

ಅರ್ಜೆಂಟೀನಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರ: ಕಂಗಾಲಾದ ಜನರು - ಅರ್ಜೆಂಟೀನಾ ಆರ್ಥಿಕ ಬಿಕ್ಕಟ್ಟು

ಅರ್ಜೆಂಟೀನಾದಲ್ಲಿ ಉಂಟಾದ ವಿಪರೀತ ಬೆಲೆಯೇರಿಕೆಯಿಂದ ಜನತೆ ಕಂಗಾಲು. ಸತತವಾದ ರಾಜಕೀಯ ಬಿಕ್ಕಟ್ಟಿನಿಂದ ಹಣದುಬ್ಬರ ಹೆಚ್ಚಳ. ಸರ್ಕಾರದ ದಿನನಿತ್ಯದ ಖರ್ಚಿಗೆ ಹೆಚ್ಚು ಕರೆನ್ಸಿ ನೋಟುಗಳ ಮುದ್ರಣ.

Argentina hikes key interest rate  one of the highest in the world
ಅರ್ಜೆಂಟೀನಾದಲ್ಲಿ ಸಾಲದ ಮೇಲಿನ ಬಡ್ಡಿದರ ಶೇ 69, ಹಣದುಬ್ಬರ ಶೇ 70: ಜನತೆ ಕಂಗಾಲು
author img

By

Published : Aug 12, 2022, 4:50 PM IST

ಬೆಂಗಳೂರು: ಅರ್ಜೆಂಟೀನಾದಲ್ಲಿ ಈ ಹಿಂದೆಂದೂ ಕಾಣದಷ್ಟು ಹಣದುಬ್ಬರ ಸಮಸ್ಯೆ ಉದ್ಭವಿಸಿದೆ. ಕಳೆದ ತಿಂಗಳಲ್ಲಿ ದೇಶದ ಹಣದುಬ್ಬರವು ಶೇ 70ನ್ನು ಮೀರಿ ಹೋಗಿದೆ. ಇದು ಇಡೀ ವಿಶ್ವದಲ್ಲೇ ಅತಿ ಹೆಚ್ಚು ವೇಗದಲ್ಲಿ ಬೆಳೆದ ಹಣದುಬ್ಬರ ಎಂದು ಹೇಳಲಾಗಿದೆ. ದೇಶದಲ್ಲಿ ಮತ್ತೆ ಮರುಕಳಿಸಿದ ರಾಜಕೀಯ ಸ್ಥಿತ್ಯಂತರಗಳ ಕಾರಣದಿಂದ ಇಂಧನ ದರಗಳು ಹೆಚ್ಚಾಗಿದ್ದು, ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ.

ಕಳೆದ ವರ್ಷದ ಜುಲೈನಿಂದ ಇಲ್ಲಿಯವರೆಗೆ ಗ್ರಾಹಕ ಸರಕುಗಳ ದರಗಳು ಶೇ 71 ರಷ್ಟು ಏರಿಕೆಯಾಗಿವೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಇದು 30 ವರ್ಷಗಳಲ್ಲೇ ಅತ್ಯಧಿಕ. ತಿಂಗಳಿನ ಆಧಾರದಲ್ಲಿ ನೋಡಿದರೆ ಹಣದುಬ್ಬರವು ಶೇ 7.4 ರಷ್ಟು ಏರಿಕೆಯಾಗಿದೆ. ಇದು ಹಿಂದಿನ ಎರಡು ದಶಕಗಳಲ್ಲಿ ದಾಖಲಾದ ಅತಿ ವೇಗದ ಹಣದುಬ್ಬರ ಏರಿಕೆಯಾಗಿದೆ.

ಇನ್ನು ದೇಶದ ಸೆಂಟ್ರಲ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕಳೆದ ದಿನದಲ್ಲಿ ಸೆಂಟ್ರಲ್ ಬ್ಯಾಂಕ್ ಸಾಲದ ಮೂಲ ಬಡ್ಡಿದರಗಳನ್ನು ಶೇ 69.5 ಕ್ಕೆ ಹೆಚ್ಚಿಸಿದೆ. ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್ ಇಂಥದೊಂದು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು.

ಮೊದಲೇ ಹಣದುಬ್ಬರದಿಂದ ಕಂಗೆಟ್ಟಿದ್ದ ಅರ್ಜೆಂಟೀನಾದಲ್ಲಿ, ಆರ್ಥಿಕ ಸಚಿವ ಮಾರ್ಟಿನ್ ಗುಜ್​ಮ್ಯಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಜುಲೈನಲ್ಲಿ ಹಣದುಬ್ಬರ ಮತ್ತೂ ವೇಗ ಪಡೆದುಕೊಂಡಿದೆ. ಈ ಮಧ್ಯೆ ಆಡಳಿತಾರೂಢ ರಾಜಕೀಯ ಮೈತ್ರಿಕೂಟದಲ್ಲಿನ ಬಿರುಕು ದಿನೇ ದಿನೇ ಹೆಚ್ಚಾಗುತ್ತಿದೆ. ಗುಜ್​ಮ್ಯಾನ್ ಅವರ ಜಾಗಕ್ಕೆ ಅಷ್ಟೇನೂ ಪರಿಚಿತರಲ್ಲದ ಆರ್ಥಿಕ ತಜ್ಞ ಸಿಲ್ವಿನಾ ಬಟಾಕಿಸ್ ಅವರನ್ನು ತಂದು ಕೂರಿಸಿದ್ದರು ಪ್ರಧಾನಿ ಆಲ್ಬರ್ಟೊ ಫರ್ನಾಂಡಿಸ್. ಆದರೆ ಮೂರೇ ವಾರಗಳಲ್ಲಿ ಇವರೂ ರಾಜೀನಾಮೆ ನೀಡಿದರು. ನಂತರ ಈ ಜಾಗಕ್ಕೆ ಬಂದಿದ್ದಾರೆ ಸರ್ಗಿಯೊ ಮಾಸ್ಸಾ. ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ನಾಯಕ ಹಾಗೂ ರಾಜಕೀಯದಲ್ಲಿ ಪಳಗಿದ ವ್ಯಕ್ತಿಯಾಗಿದ್ದಾರೆ ಮಾಸ್ಸಾ. ಮೊದಲೇ ಅಸ್ಥಿರವಾಗಿದ್ದ ಆರ್ಥಿಕತೆಯು ರಾಜಕೀಯ ಪಲ್ಲಟಗಳಿಂದ ಮತ್ತಷ್ಟು ಪಾತಾಳಕ್ಕೆ ಕುಸಿಯುವಂತಾಗಿದೆ.

ಹಣದುಬ್ಬರದ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಮಾಸ್ಸಾ, ಸರ್ಕಾರದ ಖರ್ಚು ವೆಚ್ಚಗಳಿಗೆ ಇನ್ನು ಮುಂದೆ ಹೊಸ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ದಿನಬಳಕೆಯ ವಸ್ತು ಮತ್ತು ಸೇವೆಗಳ ಮೇಲೆ ನೀಡಲಾಗುತ್ತಿರುವ ಸಬ್ಸಿಡಿ ತೆಗೆದುಹಾಕುವುದು ಸೇರಿದಂತೆ ಇನ್ನೂ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸೆಂಟ್ರಲ್ ಬ್ಯಾಂಕ್ ಸಮೀಕ್ಷೆಯ ಪ್ರಕಾರ ಅರ್ಜೆಂಟೀನಾದಲ್ಲಿ ಈ ವರ್ಷಾಂತ್ಯಕ್ಕೆ ವಾರ್ಷಿಕ ಹಣದುಬ್ಬರವು ಶೇ 90ಕ್ಕೆ ತಲುಪಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.