ETV Bharat / international

ಇಸ್ರೇಲ್​ನ ಮತ್ತೊಬ್ಬ ಯೋಧ ಸಾವು: 51ಕ್ಕೆ ಏರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ - 51ಕ್ಕೇರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ

ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಇಸ್ರೇಲ್​ನ ಮತ್ತೊಬ್ಬ ಸೈನಿಕ ಸಾವಿಗೀಡಾಗಿದ್ದಾನೆ.

IDF announces death of 51st soldier during combat in Gaza

author img

By ETV Bharat Karnataka Team

Published : Nov 16, 2023, 7:41 PM IST

ಟೆಲ್ ಅವೀವ್ (ಇಸ್ರೇಲ್) : ಹಮಾಸ್ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಕ್ಯಾಪ್ಟನ್ ಶ್ಲೋಮೊ ಬೆನ್ ನನ್ (22) ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ಪ್ರಕಟಿಸಿದೆ. ಇದರೊಂದಿಗೆ, ಅಕ್ಟೋಬರ್ 27 ರಿಂದ ಗಾಜಾದಲ್ಲಿ ಇಸ್ರೇಲ್ ಭೂಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಮಾಸ್ ಜೊತೆಗಿನ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಐಡಿಎಫ್ ಸೈನಿಕರ ಸಂಖ್ಯೆ 51 ಕ್ಕೆ ಏರಿದೆ. ಬೆನ್ ನನ್ ಪ್ಯಾರಾ ಟ್ರೂಪ್ ಬ್ರಿಗೇಡ್​ನ 202 ನೇ ಬೆಟಾಲಿಯನ್​ನಲ್ಲಿ ಉಪ ಕಮಾಂಡರ್ ಆಗಿದ್ದರು.

ಬುಧವಾರ ರಾತ್ರಿ ಹಮಾಸ್ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಇಬ್ಬರು ಮೀಸಲು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ. ಇಬ್ಬರೂ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ವಿಮಾನದಲ್ಲಿ ಕರೆದೊಯ್ಯಲಾಗಿದೆ.

ಅಕ್ಟೋಬರ್ 27ರಿಂದ ಐಡಿಎಫ್ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುತ್ತಿದೆ. ಹೋರಾಟವು ಈಗ ಉತ್ತರ ಗಾಜಾದಲ್ಲಿರುವ ಹಮಾಸ್ ಕಮಾಂಡ್ ಕೇಂದ್ರವನ್ನು ಪ್ರವೇಶಿಸಿದೆ. ಉತ್ತರ ಗಾಜಾದಿಂದ ಗಾಜಾದ ದಕ್ಷಿಣ ಭಾಗಕ್ಕೆ 8,00,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಐಡಿಎಫ್ ಹೇಳಿಕೊಂಡಿದೆ.

ಐಡಿಎಫ್ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ, ಹಮಾಸ್ ವೈಮಾನಿಕ ಕಮಾಂಡರ್ ಅಬು ರುಬೆಖಾ ಮತ್ತು ನೌಕಾ ಕಮಾಂಡರ್ ಅಬು ಶಾಹಿನಾಬಾ ಸೇರಿದಂತೆ ಹಲವಾರು ಹಮಾಸ್ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ಹಮಾಸ್​ನ ಪ್ರಮುಖ ನಾಕುಬ್ ಬೆಟಾಲಿಯನ್​ನ ಇತರ ಅನೇಕ ಹಿರಿಯ ಮಿಲಿಟರಿ ಕಮಾಂಡರ್​ಗಳು ಸಹ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ.

ಏತನ್ಮಧ್ಯೆ ಗಾಜಾದಲ್ಲಿನ 27 ರೋಗಿಗಳು ಮತ್ತು ಅವರ 13 ಪರಿಚಾರಕರು ಗುರುವಾರ ಟರ್ಕಿಯ ರಾಜಧಾನಿ ಅಂಕಾರಾಗೆ ಆಗಮಿಸಿದ್ದಾರೆ. ರಾಫಾ ಗಡಿ ಮೂಲಕ ಗಾಜಾ ಪಟ್ಟಿಯಿಂದ ಈಜಿಪ್ಟ್​ಗೆ ಬಂದಿದ್ದ ಇವರು ಈಗ ಟರ್ಕಿಗೆ ಆಗಮಿಸಿದ್ದಾರೆ. ನವೆಂಬರ್ 2 ಮತ್ತು 13 ರ ನಡುವೆ ಗಾಜಾದಿಂದ ಗಾಯಗೊಂಡ ಸುಮಾರು 135 ಜನರನ್ನು ಹಮಾಸ್ ಹಿಡಿತದಲ್ಲಿರುವ ಪ್ರದೇಶ ಮತ್ತು ಆಫ್ರಿಕನ್ ರಾಷ್ಟ್ರದ ನಡುವಿನ ಏಕೈಕ ಗಡಿ ದಾಟುವ ಸ್ಥಳವಾದ ರಾಫಾ ಮೂಲಕ ಈಜಿಪ್ಟ್​ಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಸುಮಾರು 600 ವಿದೇಶಿ ಪ್ರಜೆಗಳು ಮತ್ತು ದ್ವಿ-ನಾಗರಿಕರು ಮತ್ತು ಗಾಯಗೊಂಡ ನಾಲ್ಕು ಜನರನ್ನು ಸ್ಥಳಾಂತರಿಸಲು ಮಂಗಳವಾರ ಈಜಿಪ್ಟ್ ಗಡಿಯನ್ನು ತೆರೆಯಲಾಗಿತ್ತು. ಅಕ್ಟೋಬರ್ 7ರಂದು ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಭುಗಿಲೆದ್ದ ಬಳಿಕ ಗಾಜಾದಲ್ಲಿ 11,078, ಇಸ್ರೇಲ್​ನಲ್ಲಿ 1,200 ಹಾಗೂ ಪಶ್ಚಿಮ ದಂಡೆಯಲ್ಲಿ 194 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಶಿಫಾ ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರ ಪತ್ತೆ, ಇದು ಹಮಾಸ್​ ಉಗ್ರರ ನೆಲೆ: ಐಡಿಎಫ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.