ETV Bharat / international

ಇಸ್ರೇಲ್ ಪರ ಗೂಢಚಾರಿಕೆ ಆರೋಪ; ವೆಸ್ಟ್​ಬ್ಯಾಂಕ್​ನಲ್ಲಿ ಇಬ್ಬರು ಶಂಕಿತರ ಕೊಲೆ - ಇಸ್ರೇಲಿ ಭದ್ರತಾ ಪಡೆ

ಇಸ್ರೇಲ್​ ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ ಆರೋಪದ ಮೇಲೆ ಇಬ್ಬರು ಶಂಕಿತರನ್ನು ವೆಸ್ಟ್​ ಬ್ಯಾಂಕ್​ನಲ್ಲಿ ಪ್ಯಾಲೆಸ್ಟೈನ್ ಪರ ಉಗ್ರ ಗುಂಪು ಸಾಯಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

2 'informers' for Israel killed in West Bank, mob drags their bodies, ties to pole

author img

By ETV Bharat Karnataka Team

Published : Nov 26, 2023, 5:10 PM IST

ಟೆಲ್ ಅವಿವ್ (ಇಸ್ರೇಲ್) : ವೆಸ್ಟ್​ ಬ್ಯಾಂಕ್​ನ ನಿರಾಶ್ರಿತರ ಶಿಬಿರದಲ್ಲಿದ್ದುಕೊಂಡು ಇಸ್ರೇಲ್​ಗೆ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪ್ಯಾಲೆಸ್ಟೈನ್ ಉಗ್ರರು ಶನಿವಾರ ಬೆಳಗ್ಗೆ ಸಾರ್ವಜನಿಕರ ಎದುರು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ನೆರೆದಿದ್ದ ಜನರ ಗುಂಪು ಇಬ್ಬರು ಶಂಕಿತ ವ್ಯಕ್ತಿಗಳ ಶವಗಳನ್ನು ಗಲ್ಲಿಗಳ ಮೂಲಕ ಕಾಲಿನಿಂದ ಒದ್ದು ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ನೇತು ಹಾಕಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವು ಎರಡನೇ ದಿನಕ್ಕೆ ಕಾಲಿಟ್ಟ ಮಧ್ಯೆ ಈ ಬೆಳವಣಿಗೆ ನಡೆದಿದೆ.

ಮೃತರನ್ನು 31 ವರ್ಷದ ಹಮ್ಜಾ ಮುಬಾರಕ್ ಮತ್ತು 29 ವರ್ಷದ ಅಜಮ್ ಜುಬ್ರಾ ಎಂದು ಗುರುತಿಸಲಾಗಿದೆ ಎಂದು ಟೈಮ್ಸ್​ ಆಫ್ ಇಸ್ರೇಲ್ ವರದಿ ಮಾಡಿದೆ. ನವೆಂಬರ್ 6 ರಂದು ತುಲ್ಕರೆಮ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಭದ್ರತಾ ಪಡೆಗಳಿಗೆ ಇಬ್ಬರು ಪ್ಯಾಲೆಸ್ಟೈನಿಯರು ಸಹಾಯ ಮಾಡಿದ್ದಾರೆ ಎಂದು ಸ್ಥಳೀಯ ಉಗ್ರಗಾಮಿ ಗುಂಪು ಆರೋಪಿಸಿತ್ತು. ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೂವರು ಪ್ರಮುಖ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಶಂಕಿತ ಮಾಹಿತಿದಾರರನ್ನು ಕೊಂದ ವೀಡಿಯೊ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಜನರ ಗುಂಪು ಈ ಇಬ್ಬರು ವ್ಯಕ್ತಿಗಳನ್ನು ನಿಂದಿಸುವುದು ಕೇಳಿ ಬರುತ್ತದೆ. ಇನ್ನು ಈ ಇಬ್ಬರು ಶಂಕಿತರು ತಾವು ಇಸ್ರೇಲ್ ರಕ್ಷಣಾ ಪಡೆಗಳಿಗಾಗಿ (ಐಡಿಎಫ್) ಕೆಲಸ ಮಾಡಿರುವುದಾಗಿ ಒಪ್ಪಿಕೊಂಡಿರುವುದು ಒಂದು ವೀಡಿಯೊ ತುಣುಕಿನಲ್ಲಿ ಕಾಣಿಸುತ್ತದೆ.

"ಯಾವುದೇ ಮಾಹಿತಿದಾರ ಅಥವಾ ಯಾವುದೇ ದೇಶದ್ರೋಹಿಗೆ ಯಾವುದೇ ವಿನಾಯಿತಿ ಇಲ್ಲ ಮತ್ತು ನಮ್ಮ ಹೋರಾಟಗಾರರ ಹತ್ಯೆಯ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ನಾವು ಅಂಥವರ ಮೇಲೆ ದಾಳಿ ಮಾಡುತ್ತೇವೆ ಮತ್ತು ಅವರಿಗೆ ಮರಣದಂಡನೆ ವಿಧಿಸುತ್ತೇವೆ" ಎಂದು ತನ್ನನ್ನು 'ರೆಸಿಸ್ಟೆನ್ಸ್ ಸೆಕ್ಯುರಿಟಿ' ಎಂದು ಗುರುತಿಸಿಕೊಳ್ಳುವ ಸಂಘಟನೆ ಹೇಳಿದೆ ಎಂದು ಇಸ್ರೇಲಿ ಮೂಲದ ಚಾನೆಲ್ ಐ 24 ನ್ಯೂಸ್ ವರದಿ ಮಾಡಿದೆ. ಆದಾಗ್ಯೂ, ಹಮಾಸ್ ಅಥವಾ ಐಡಿಎಫ್ ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಶುಕ್ರವಾರ, 13 ಇಸ್ರೇಲಿಗಳು ಸೇರಿದಂತೆ 24 ಸೆರೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿ ಇಸ್ರೇಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಒಟ್ಟಾರೆಯಾಗಿ, ಹಮಾಸ್ ಗುಂಪು ಹಿಡಿದಿಟ್ಟುಕೊಂಡಿರುವ 240 ಒತ್ತೆಯಾಳುಗಳ ಪೈಕಿ 50 ಜನರನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ. ಮತ್ತೊಂದೆಡೆ, ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ 150 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ : ಕದನ ವಿರಾಮ: ಗಾಜಾಗೆ ಸಿಗಲಿದೆ ನಿತ್ಯ 1 ಲಕ್ಷ 30 ಸಾವಿರ ಲೀಟರ್ ಡೀಸೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.