ETV Bharat / international

Afghanistan: ಅಫ್ಘನ್ ಸರ್ಕಾರಕ್ಕೆ 2 ವರ್ಷ; ತಾಲಿಬಾನ್ ಸಂಭ್ರಮಾಚರಣೆ - ಕೇಳುವವರಿಲ್ಲ ಮಹಿಳೆಯರ ಸಂಕಷ್ಟ! - ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ

Taliban rulers celebration: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭಗೊಂಡು ಆಗಸ್ಟ್​ 15ಕ್ಕೆ ಎರಡು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತವು ದೇಶಾದ್ಯಂತ ಸಂಭ್ರಮಾಚರಣೆ ಮಾಡಿತು.

Afghanistan's Taliban rulers celebrate
Afghanistan's Taliban rulers celebrate
author img

By

Published : Aug 16, 2023, 6:51 PM IST

ಕಾಬೂಲ್ (ಅಫ್ಘಾನಿಸ್ತಾನ) : ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಮಂಗಳವಾರ ಅಧಿಕಾರಕ್ಕೆ ಮರಳಿದ ಎರಡನೇ ವಾರ್ಷಿಕೋತ್ಸವ ಆಚರಿಸಿದರು. ಆಡಳಿತದಲ್ಲಿರುವ ತಾಲಿಬಾನ್ ಗುಂಪು ಆಗಸ್ಟ್ 15, 2021 ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿತ್ತು. ಅಂದಿನ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಅದರ ಹೆಚ್ಚಿನ ನಾಯಕರು ದೇಶ ತೊರೆದಿದ್ದರು. ಯುಎಸ್ ಬೆಂಬಲಿತ ಸರ್ಕಾರ ಪತನಗೊಂಡ ನಂತರ ತಾಲಿಬಾನ್ ತನ್ನ ಸರ್ಕಾರ ರಚಿಸಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ದೇಶವು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿಲ್ಲ.

ಆಡಳಿತದ ಎರಡನೇ ವರ್ಷಾಚರಣೆ ಅಂಗವಾಗಿ ತಾಲಿಬಾನ್ ಅಧಿಕಾರಿಗಳು ದೇಶಾದ್ಯಂತ ಅಧಿಕೃತ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ನಡೆಸಿದರು. ಯುಎಸ್ ಆಕ್ರಮಣದಿಂದ ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನ ಎಂದು ಇಂದಿನ ದಿನ ಆಚರಿಸಲಾಯಿತು. "ಕಾಬೂಲ್ ವಿಜಯದ ಎರಡನೇ ವಾರ್ಷಿಕೋತ್ಸವದಂದು, ನಾವು ಅಫ್ಘಾನಿಸ್ತಾನದ ಮುಜಾಹಿದ್ (ಪವಿತ್ರ ಯೋಧ) ರಾಷ್ಟ್ರವನ್ನು ಅಭಿನಂದಿಸಲು ಬಯಸುತ್ತೇವೆ ಮತ್ತು ಈ ಮಹಾನ್ ವಿಜಯಕ್ಕಾಗಿ ಸರ್ವಶಕ್ತ ಅಲ್ಲಾಹನಿಗೆ ಧನ್ಯವಾದ ಹೇಳುತ್ತೇವೆ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

1996 ರಿಂದ 2001 ರವರೆಗೆ ಅಧಿಕಾರ ನಡೆಸಿದ್ದ ತಾಲಿಬಾನ್ 2021 ರಲ್ಲಿ ಅಧಿಕಾರ ಮರಳಿ ಪಡೆದ ನಂತರ ಶರಿಯಾ (ಮುಸ್ಲಿಂ ವೈಯಕ್ತಿಕ ಕಾನೂನು) ನಿಯಮಗಳ ಅನ್ವಯ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಮಹಿಳೆಯರು, ಜನಾಂಗೀಯ ಅಲ್ಪಸಂಖ್ಯಾತರು, ಮಾಧ್ಯಮಗಳು, ಹಕ್ಕುಗಳ ಗುಂಪುಗಳು ಮತ್ತು ಇತತರ ಮೇಲಿನ ನಿರ್ಬಂಧಗಳು ಸೇರಿದಂತೆ ಸರ್ವಾಧಿಕಾರಿ ನೀತಿಗಳು ಮರಳಿವೆ ವರದಿಗಳು ಹೇಳಿವೆ.

ಅಫ್ಘಾನಿಸ್ತಾನದಲ್ಲಿನ ತಮ್ಮ ಆಡಳಿತವು ಮುಕ್ತ ಮನಸ್ಥಿತಿಯದ್ದಾಗಿದೆ ಎಂದು ತಾಲಿಬಾನ್ ಹೇಳಿಕೊಳ್ಳುತ್ತಿದೆ. ಇಸ್ಲಾಮಿಕ್ ಕಾನೂನು ಪ್ರೇರಿತ ನ್ಯಾಯದಾನ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಮಹಿಳಾ ಶಿಕ್ಷಣದ ಮೇಲಿನ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಜಬಿಹುಲ್ಲಾ ಮುಜಾಹಿದ್ ತಿಳಿಸಿದರು. ಬಾಲಕಿಯರು ಮತ್ತು ಮಹಿಳೆಯರ ಮೇಲಿನ ನಿರ್ಬಂಧಗಳ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳನ್ನು ತಳ್ಳಿಹಾಕಿದ ಜಬಿಹುಲ್ಲಾ ಮುಜಾಹಿದ್, ಯಥಾಸ್ಥಿತಿ ಮುಂದುವರಿಯಲಿದೆ ಎಂದು ಹೇಳಿದರು.

ತಾಲಿಬಾನ್​ನ ಜನ್ಮಸ್ಥಳವಾದ ದಕ್ಷಿಣ ನಗರ ಕಂದಹಾರ್​ನಲ್ಲಿ ಮಿಲಿಟರಿ ಸಿಬ್ಬಂದಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಪೋಸ್ ನೀಡಿದರು. ಯುವಕರು ಬೈಸಿಕಲ್, ಮೋಟಾರ್ ಸೈಕಲ್ ಮತ್ತು ಕಾರುಗಳಲ್ಲಿ ನಗರದಾದ್ಯಂತ ಸವಾರಿ ಮಾಡಿದರು, ಧ್ವಜಗಳನ್ನು ಬೀಸಿದರು ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದರು. ಮಕ್ಕಳು ರಕ್ಷಣಾ ಸಚಿವ ಮೌಲ್ವಿ ಮೊಹಮ್ಮದ್ ಯಾಕೂಬ್ ಅವರ ಭಾವಚಿತ್ರವಿರುವ ಸಣ್ಣ ಬಿಳಿ ತಾಲಿಬಾನ್ ಧ್ವಜಗಳನ್ನು ಹಿಡಿದು ನಿಂತ ದೃಶ್ಯಗಳು ಕಾಣಿಸಿದವು.

ತಾಲಿಬಾನ್ ಆಡಳಿತವು ಮಹಿಳೆಯರ ಸ್ವಾತಂತ್ಯದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಸಾರ್ವಜನಿಕವಾಗಿ ಕಟ್ಟುನಿಟ್ಟಾದ ಡ್ರೆಸ್ ಕೋಡ್, ಜಿಮ್​ಗಳು ಮತ್ತು ಉದ್ಯಾನವನಗಳಿಗೆ ಮಹಿಳೆಯರಿಗೆ ನಿರ್ಬಂಧ ಮತ್ತು ಮಹಿಳೆಯರನ್ನು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದಿಂದ ಹೊರಗಿಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಇದನ್ನೂ ಓದಿ: Russia Ukraine War: ಒಡೆಸಾ ಬಂದರಿನ ಮೇಲೆ ರಷ್ಯಾ ದಾಳಿ; 13 ಡ್ರೋನ್ ಹೊಡೆದುರುಳಿಸಿದ ಉಕ್ರೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.