ETV Bharat / international

ಆಗ ಟಿವಿ ಆ್ಯಂಕರ್‌, ಈಗ ಬೀದಿಬದಿ ವ್ಯಾಪಾರಿ! ತಾಲಿಬಾನ್‌ ಆಡಳಿತದ ಪರಿಣಾಮ - afghan journalist dire situation in taliban rule

ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಪತ್ರಕರ್ತರಾಗಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಮೂಸಾ ಮೊಹಮ್ಮದಿ ಎಂಬುವವರು ರಸ್ತೆಬದಿ ಕುಳಿತು ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

afghan journalist dire situation in taliban rule
ಕುಟುಂಬದ ಪಾಲನೆಗಾಗಿ ರಸ್ತೆ ಬದಿ ಆಹಾರ ಪದಾರ್ಥ ಮಾರುತ್ತಿರುವ ಅಫ್ಘಾನ್ ಟಿವಿ ಆ್ಯಂಕರ್​
author img

By

Published : Jun 17, 2022, 5:07 PM IST

Updated : Jun 17, 2022, 5:17 PM IST

ಕಾಬೂಲ್​ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಜಾರಿಗೆ ಬಂದ ನಂತರ ಅಲ್ಲಿನ ಜನತೆ ಹೊರ ಜಗತ್ತಿನ ಸಂಬಂಧ, ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ತೀವ್ರ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆ ಎದುರಿಸುತ್ತಿರುವ ಅಫ್ಘಾನ್​ನಲ್ಲಿ ಅದೆಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ. ತಾಲಿಬಾನ್‌ ಆಡಳಿತಕ್ಕೂ ಮುನ್ನ ಟಿವಿ ಆ್ಯಂಕರ್ ಆಗಿದ್ದ ವ್ಯಕ್ತಿಯೊಬ್ಬ ಈಗ ರಸ್ತೆ ಬದಿಯಲ್ಲಿ ಕುಳಿತು ಕುಟುಂಬ ನಿರ್ವಹಣೆಗಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.

ಪತ್ರಕರ್ತರಾಗಿ ಕೆಲವು ವರ್ಷಗಳ ಕೆಲಸ ಮಾಡಿದ್ದ ಮೂಸಾ ಮೊಹಮ್ಮದಿ ಎಂಬುವವರು ರಸ್ತೆಯಲ್ಲಿ ಕುಳಿತು ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದರ ಫೋಟೋಗಳನ್ನು ಈ ಹಿಂದೆ ಅಫ್ಘಾನ್​ ಅಧ್ಯಕ್ಷರ ಕಾರ್ಯಾಲಯದಲ್ಲಿ ಕೆಲಸ ಮಾಡಿದ್ದ ಕಬೀರ್​ ಹಕ್ಮಲ್​ ಎಂಬುವವರು ಹಂಚಿಕೊಂಡಿದ್ದಾರೆ.

  • Journalists life in #Afghanistan under the #Taliban. Musa Mohammadi worked for years as anchor & reporter in different TV channels, now has no income to fed his family. & sells street food to earn some money. #Afghans suffer unprecedented poverty after the fall of republic. pic.twitter.com/nCTTIbfZN3

    — Kabir Haqmal (@Haqmal) June 15, 2022 " class="align-text-top noRightClick twitterSection" data=" ">

ತಾಲಿಬಾನ್​ ಆಡಳಿತ ಅಫ್ಘಾನಿಸ್ತಾನದಲ್ಲಿ ಇದು ಪತ್ರಕರ್ತರ ಬದುಕು. ವಿವಿಧ ಚಾನೆಲ್​​ಗಳಲ್ಲಿ ಆ್ಯಂಕರ್​ ಮತ್ತು ವರದಿಗಾರರಾಗಿ ಕೆಲಸ ಮಾಡಿದ್ದ ಮೂಸಾ ಅವರಿಗೆ ತಮ್ಮ ಕುಟುಂಬವದರಿಗೆ ಊಟ ಹಾಕಲು ಆದಾಯವಿಲ್ಲದಂತಾಗಿದೆ. ಹೀಗಾಗಿ, ಸ್ವಲ್ಪ ಕಾಸು ಸಂಪಾದನೆ ಮಾಡಲು ಬೀದಿ ಆಹಾರಗಳನ್ನು ಮಾರಾಟ ಮಾಡುತ್ತಿದ್ದಾರೆ. ಗಣರಾಜ್ಯ ಬಿದ್ದು ಹೋದ ಬಳಿಕ ಅಫ್ಘನ್ನರು ಈ ಹಿಂದೆ ಎಂದೂ ಅನುಭವಿಸದ ಬಡತನ ಅನುಭವಿಸುತ್ತಿದ್ದಾರೆ ಎಂದು ಕಬೀರ್​ ಹಕ್ಮಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ 'ವಿಕಿಲೀಕ್ಸ್​' ಅಸಾಂಜ್ ಹಸ್ತಾಂತರಿಸಲು ಯುಕೆ ಸರ್ಕಾರ ಒಪ್ಪಿಗೆ

Last Updated : Jun 17, 2022, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.