ಡೆಟ್ರಾಯಿಟ್ (ಅಮೆರಿಕ): ಡೆಟ್ರಾಯಿಟ್ ಸಿನಗಾನ್ ಅಧ್ಯಕ್ಷೆ ಸಮಂತಾ ವೋಲ್ ಶನಿವಾರ ತಮ್ಮ ಮನೆಯ ಹೊರಗೆ ಇರಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಮೃತರ ನಿವಾಸಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತನಿಖೆ ಆರಂಭಿಸಿದ್ದಾರೆ.
40 ವರ್ಷದ ಸಮಂತಾ ವೋಲ್ ಅವರು 2022 ರಿಂದ ಐಸಾಕ್ ಅಗ್ರೀ ಡೌನ್ಟೌನ್ ಸಿನಗಾನ್ ಅನ್ನು ಮುನ್ನಡೆಸಿದ್ದರು. ಡೆಮಾಕ್ರಟಿಕ್ ರೆಪ್ ಎಲಿಸ್ಸಾ ಸ್ಲಾಟ್ಕಿನ್ ಅವರ ಮಾಜಿ ಸಹಾಯಕರಾಗಿದ್ದರು ಮತ್ತು ಅಟಾರ್ನಿ ಜನರಲ್ ಡಾನಾ ನೆಸ್ಸೆಲ್ ಅವರ ಪ್ರಚಾರ ಸಿಬ್ಬಂದಿಯಾಗಿದ್ದರು ಎಂದು ಡೆಟ್ರಾಯಿಟ್ ಫ್ರೀ ಪ್ರೆಸ್ ವರದಿ ಮಾಡಿದೆ.
ಸಮಂತಾ ವೋಲ್ ಶವವಾಗಿ ನೆಲದ ಮೇಲೆ ಬಿದ್ದಿದ್ದರು. ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಯಾರೋ ಕರೆ ಮಾಡಿ ಪೊಲೀಸರಿಗೆ ವೋಲ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ಪೊಲೀಸರು ಸದ್ಯ ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಫ್ರೀ ಪ್ರೆಸ್ ಜರ್ನಲ್ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿ, ಮೂವರನ್ನ ಕೊಂದು ಹಾಕಿದ ಯುವಕ.. ಕೊನೆಗೆ ತಾನೂ ಆತ್ಮಹತ್ಯೆಗೆ ಶರಣು!
ಗವರ್ನರ್ ಗ್ರೆಚೆನ್ ವಿಟ್ಮರ್ ಅವರು ವೋಲ್ ಸಾವಿಗೆ ಸಂತಾಪ ಸೂಚಿಸಿದ್ದು, ಇದು ಅತ್ಯಂತ ದುಃಖಕರ ವಿಚಾರ ಎಂದಿದ್ದಾರೆ. ಸಮಂತಾ ಅವರು ಮಿಚಿಗನ್ ಅನ್ನು ಅಭಿವೃದ್ಧಿ ಪಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. ತಮ್ಮ ತಂಡಕ್ಕೆ ದಾರಿದೀಪವಾಗಿದ್ದರು ಎಂದು ಗವರ್ನರ್ ಹೇಳಿದ್ದಾರೆ. ಸಮಂತಾ ವೋಲ್ ಸಾವಿನ ತನಿಖೆಯಲ್ಲಿ ಡೆಟ್ರಾಯಿಟ್ ಪೊಲೀಸ್ ಇಲಾಖೆಗೆ ಸಹಾಯ ಮಾಡಲು ಮಿಚಿಗನ್ ಸ್ಟೇಟ್ ಪೊಲೀಸ್ ಅನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ನೆಸ್ಸೆಲ್ ಅವರು ಸಮಂತಾ ವೋಲ್ ಕರುಣಾಮಯಿ ವ್ಯಕ್ತಿ ಎಂದು ಹೇಳಿದ್ದಾರೆ. ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, "ಅವಳ ಸಮುದಾಯ, ರಾಜ್ಯ ಮತ್ತು ದೇಶದ ಮೇಲೆ ಆಕೆಗೆ ಪ್ರಾಮಾಣಿಕ ಪ್ರೀತಿ ಇತ್ತು. ಪ್ರತಿಯೊಬ್ಬರ ಅಭಿವೃದ್ಧಿಗಾಗಿ ನಂಬಿಕೆ ಮತ್ತು ಕ್ರೀಯಾಶೀಲತೆಯಿಂದ ಕೆಲಸ ಮಾಡಿದ್ದಾಳೆ" ಎಂದು ಹೇಳಿದರು.
ಮೇಯರ್ ಸ್ಲಾಟಿನ್ ಕೂಡ ಎಕ್ಸ್ನಲ್ಲಿ ಸಮಂತಾ ವೋಲ್ ಸಾವು ಆಘಾತಕಾರಿಯಾಗಿದೆ ಎಂದಿದ್ದಾರೆ. 'ಈ ಸುದ್ದಿ ತಿಳಿದು ಆಘಾತವಾಯಿತು. ಡಗ್ಗನ್ ಅವರು ಸಮಂತಾ ವೋಲ್ ಸಾವಿನ ವಿಚಾರ ತಿಳಿದು ದುಃಖಿತರಾಗಿದ್ದಾರೆ. ಸ್ಯಾಮ್ ಅವರ ಮರಣ ಡೆಟ್ರಾಯಿಟ್ ಸಮುದಾಯಕ್ಕೆ ತುಂಬಲಾರದ ನಷ್ಟ. ಇಡೀ ನಗರವೇ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇರುತ್ತದೆ" ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಹಮಾಸ್ ಉಗ್ರರಿರುವ ಗಾಜಾ ಮೇಲೆ ಇಸ್ರೇಲ್ ಭೂದಾಳಿ ತಡೆದ ಅಮೆರಿಕ, ಇಂಗ್ಲೆಂಡ್: ವರದಿ