ETV Bharat / international

2020 election subversion case: ಡೊನಾಲ್ಡ್ ಟ್ರಂಪ್ ನಿರ್ದೋಷಿ.. ಆ.28ಕ್ಕೆ ಮುಂದಿನ ವಿಚಾರಣೆ

author img

By

Published : Aug 4, 2023, 7:25 AM IST

ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020ರ ಯುಎಸ್ ಚುನಾವಣಾ ಫಲಿತಾಂಶಗಳನ್ನು ತಡೆಯಲು ಯತ್ನಿಸಿದ ಆರೋಪದಡಿ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್(ಅಮೆರಿಕ): 2020ರ ಚುನಾವಣಾ ಫಲಿತಾಂಶಗಳನ್ನು ತಡೆಯಲು ಯತ್ನಿಸಿದ ನಾಲ್ಕು ಫೆಡರಲ್ ಆರೋಪಗಳಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪೊಪ್ಪಿಕೊಂಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಟ್ರಂಪ್ ಚುನಾವಣಾ ಹಸ್ತಕ್ಷೇಪ ಪ್ರಕರಣದ ಮುಂದಿನ ವಿಚಾರಣೆಯನ್ನು ಆ. 28ಕ್ಕೆ ನಿಗದಿಪಡಿಸಲಾಗಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಮೋಕ್ಸಿಲಾ ಉಪಾಧ್ಯಾಯ ಅವರು ಚುನಾವಣಾ ಅವ್ಯವಹಾರ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 28 ರಂದು ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಿದ್ದಾರೆ. ಆ ಪ್ರಕ್ರಿಯೆ ಅಮೆರಿಕದ​ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್ ಅವರ ಮುಂದೆ ನಡೆಯುತ್ತದೆ.

ವಿಶೇಷ ಸಲಹೆಗಾರ ಜ್ಯಾಕ್ ಸ್ಮಿತ್ ಅವರ ಕಚೇರಿಯ ಪ್ರಾಸಿಕ್ಯೂಟರ್‌ಗಳು ಡೊನಾಲ್ಡ್ ಟ್ರಂಪ್‌ಗೆ ಪೂರ್ವಭಾವಿ ಬಂಧನವನ್ನು ಕೋರಲಿಲ್ಲ. ಬದಲಾಗಿ, ಮಾಜಿ ಅಧ್ಯಕ್ಷರನ್ನು ಬಿಡುಗಡೆಯ ಅತ್ಯಂತ ಕನಿಷ್ಠ ಷರತ್ತುಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ವಕೀಲರ ಮೂಲಕ ಹೊರತು ಪ್ರಕರಣದಲ್ಲಿ ಸಾಕ್ಷಿ ಎಂದು ತಿಳಿದಿರುವ ಯಾರೊಂದಿಗೂ ಸಂವಹನ ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಟ್ರಂಪ್ ನಿಂತು ತಮ್ಮ ಬಲಗೈಯನ್ನು ಮೇಲಕ್ಕೆತ್ತಿ, ಬಿಡುಗಡೆಯ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಿದರು. ಬಳಿಕ ಅವರು ಷರತ್ತುಗಳ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕಿದರು.

ಜನವರಿ 6, 2021 ರಂದು ಯುಎಸ್ ಸಂಸತ್​ ಮೇಲೆ ದಾಳಿ ಮಾಡಿ ಚುನಾವಣೆಯನ್ನು ಹಿಮ್ಮೆಟ್ಟಿಸಲು ಟ್ರಂಪ್ ಮಾಡಿದ ಪ್ರಯತ್ನಗಳ ಕುರಿತು ವಿಶೇಷ ಸಲಹೆಗಾರ ಜ್ಯಾಕ್ ಸ್ಮಿತ್ ಅವರ ತನಿಖೆಯ ಭಾಗವಾಗಿ ಮಂಗಳವಾರ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದರು. ಇದರಲ್ಲಿ 4 ಆರೋಪಗಳನ್ನು ಹೊರಿಸಲಾಗಿದೆ.

ನೀವು ಹೇಗೆ ಮನವಿ ಮಾಡುತ್ತಿರಾ?ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಮೊಕ್ಸಿಲಾ ಉಪಾಧ್ಯಾಯ ಟ್ರಂಪ್ ಅವರನ್ನು ಕೇಳಿದರು. ಅದರಲ್ಲಿ " ನಾನು ತಪ್ಪಿತಸ್ಥನಲ್ಲ" ಎಂದು ಟ್ರಂಪ್ ಹೇಳಿದರು. ಟ್ರಂಪ್ ಪರ ವಕೀಲರಾದ ಜಾನ್ ಲಾರೊ ಮತ್ತು ಟಾಡ್ ಬ್ಲಾಂಚೆ ಜೊತೆಗಿದ್ದರು. ಈ ಪ್ರಕರಣದಲ್ಲಿ ಔಪಚಾರಿಕವಾಗಿ ಹಾಜರಾಗದ ಇನ್ನೊಬ್ಬ ಟ್ರಂಪ್ ಅಟಾರ್ನಿ ಇವಾನ್ ಕೊರ್ಕೊರಾನ್ ಅವರು ರಕ್ಷಣಾ ಮೇಜಿನ ಹಿಂದೆ ಸಾಲಿನಲ್ಲಿ ಕುಳಿತಿದ್ದರು.

ಟ್ರಂಪ್ ಅವರು ಅಧಿಕಾರದಲ್ಲಿರುವ ಅಥವಾ ಅವರ ಅವಧಿಯ ನಂತರ, ದೇಶದ 247 ವರ್ಷಗಳ ಇತಿಹಾಸದಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಟ್ರಂಪ್ ಎದುರಿಸುತ್ತಿರುವ ಹೆಚ್ಚುತ್ತಿರುವ ಕ್ರಿಮಿನಲ್ ಆರೋಪಗಳ ಹೊರತಾಗಿಯೂ, ಅವರು ಪಕ್ಷದ 2024ರ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ ಪ್ರಮುಖ ರಿಪಬ್ಲಿಕನ್ ಸ್ಪರ್ಧಿಯಾಗಿದ್ದಾರೆ.

ಟಂಪ್​ ವಿರುದ್ಧ ಇರುವ ಆರೋಪಗಳೇನು?:

  • ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಡೊನಾಲ್ಡ್‌ ಟ್ರಂಪ್‌ 2006ರ ಜುಲೈನಲ್ಲಿ ಗಾಲ್ಫ್‌ ಟೂರ್ನಮೆಂಟ್‌ ಸಂದರ್ಭದಲ್ಲಿ ನೀಲಿ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ ಅನ್ನು ಭೇಟಿಯಾಗಿದ್ದರು. ಟ್ರಂಪ್ ಅಂಗರಕ್ಷಕರೊಬ್ಬರು ಟ್ರಂಪ್‌ ಪೆಂಟ್‌ ಹೌಸ್‌ "ದಿ ಅಪ್ರೆಂಟಿಸ್"ನಲ್ಲಿ ಭೋಜನಕ್ಕೆ ಆಹ್ವಾನಿಸಿದ್ದರು ಎಂದು ಡೇನಿಯಲ್ಸ್‌ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಅದಲ್ಲದೇ ನಾನು ನನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ಕಡಿಮೆ ಲೈಂಗಿಕ ಅನುಭವ ಎಂದು ಟ್ರಂಪ್‌ ಅವರ ದೇಹ ವರ್ಣನೆಯನ್ನು ಕೂಡ ಡೇನಿಯಲ್ಸ್‌ ತಮ್ಮ ಫುಲ್‌ ಡಿಸ್ಕ್ಲೋಸರ್‌ನಲ್ಲಿ ಬರೆದಿದ್ದರು.
  • ಆದರೆ ಡೇನಿಯಲ್ಸ್‌ ಆರೋಪವನ್ನು ತಳ್ಳಿ ಹಾಕಿರುವ ಡೊನಾಲ್ಡ್‌ ಟ್ರಂಪ್‌, ಯಾವತ್ತೂ ನಾನು ಡೇನಿಯಲ್ಸ್‌ ಜೊತೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದರು.
  • ಬಳಿಕ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದಿಂದ ಟ್ರಂಪ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಡೇನಿಯಲ್ಸ್‌ 2006ರ ಪ್ರಕರಣದ ಬಗ್ಗೆ ಏನು ಮಾತನಾಡಬಾರದು, ಆ ವಿಷಯದ ಬಗ್ಗೆ ಮೌನ ವಹಿಸಬೇಕು ಎಂದು ಟ್ರಂಪ್‌ ಅವರ ವೈಯಕ್ತಿಕ ವಕೀಲ ಮೈಕೆಲ್‌ ಕೋಹೆನ್‌ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ ಬದಲಾಗಿ ಡೇನಿಯಲ್ಸ್‌ಗೆ 1 ಲಕ್ಷ 30 ಸಾವಿರ ಅಮೆರಿಕನ್‌ ಡಾಲರ್‌ ಪಾವತಿಸಲಾಗಿದೆ ಎಂಬ ಆರೋಪವಿದೆ.
  • ಮತ್ತೊಂದು ಪ್ರಕರಣದಲ್ಲಿ, ಸ್ಮಿತ್ ಅವರು ಟ್ರಂಪ್​ 2021ರ ಆರಂಭದಲ್ಲಿ ಅಧಿಕಾರವನ್ನು ತೊರೆದ ನಂತರ ಫ್ಲೋರಿಡಾದ ತನ್ನ ಸಾಗರದ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ 32 ಹೆಚ್ಚು ವರ್ಗೀಕರಿಸಿದ ರಾಷ್ಟ್ರೀಯ ಭದ್ರತಾ ದಾಖಲೆಗಳನ್ನು ಅಕ್ರಮವಾಗಿ ಉಳಿಸಿಕೊಂಡರು ಮತ್ತು ನಂತರ ಕೈಗೆ ಸಿಗದಂತೆ ನೋಡಿಕೊಳ್ಳಲು ವೈಯಕ್ತಿಕ ಸಹಾಯಕನೊಂದಿಗೆ ಪಿತೂರಿ ನಡೆಸಿದರು ಎಂಬ ಆರೋಪದ ಮೇಲೆ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಿದರು.

ಇದನ್ನೂ ಓದಿ: ಶ್ವೇತಭವನಕ್ಕೆ ಮುತ್ತಿಗೆ ಹಾಕಿದ್ದಕ್ಕೆ ಡೊನಾಲ್ಡ್​ ಟ್ರಂಪ್​ ವಿರುದ್ಧ 3ನೇ ಕ್ರಿಮಿನಲ್​ ಕೇಸ್​..ಚುನಾವಣೆ ಸ್ಪರ್ಧೆಗೆ ಅಡ್ಡಿಯಾಗುತ್ತವಾ ಆರೋಪಗಳು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.