ETV Bharat / international

ನೈಜೀರಿಯಾದಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ: 20 ಕ್ಕೂ ಹೆಚ್ಚು ಮಂದಿ ಸಾವು

author img

By

Published : Aug 11, 2023, 9:15 AM IST

ನಿನ್ನೆ ಬೆಳಗ್ಗೆ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ.

Nigeria
ಗುಂಡಿನ ದಾಳಿ

ನೈಜೀರಿಯಾ : ಉತ್ತರ - ಮಧ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಗುರುವಾರ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಪಶ್ಚಿಮ ಆಫ್ರಿಕನ್ ರಾಷ್ಟ್ರದ ದೂರದ ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಾಜಧಾನಿ ಜೋಸ್‌ನಿಂದ 25 ಕಿಲೋಮೀಟರ್ (15 ಮೈಲಿಗಳು) ದೂರದಲ್ಲಿರುವ ಪ್ಲಾಟಿವ್​ ರಾಜ್ಯದ ಹೈಪಾಂಗ್ ಗ್ರಾಮಕ್ಕೆ ಮಧ್ಯಾಹ್ನ 1 ಗಂಟೆಯ ಬಳಿಕ ಎಂಟ್ರಿ ಕೊಟ್ಟ ಸುಮಾರು 12 ಕ್ಕೂ ಹೆಚ್ಚು ಬಂದೂಕುಧಾರಿಗಳು, ಗ್ರಾಮಸ್ಥರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಅನೇಕರು ಮನೆಯೊಳಗೆ ವಿಶ್ರಾಂತಿ ಪಡೆಯಲು ಮಲಗಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಘಟನೆ ಕುರಿತು ದಾಳಿಯಿಂದ ಬದುಕುಳಿದ ಜಾಕೋಬ್ ದಾಡಿ ಎಂಬುವರು ಮಾಹಿತಿ ನೀಡಿದ್ದು, ದುರಂತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ತಂದೆ, ತಾಯಿ ಮತ್ತು ಮಕ್ಕಳು ಸೇರಿದಂತೆ ಒಟ್ಟು ಐವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಹೈಪಾಂಗ್‌ನಲ್ಲಿ ಒಟ್ಟು 17 ಮೃತದೇಹಗಳು ಪತ್ತೆಯಾಗಿವೆ. ಇಲ್ಲಿ ದಾಳಿ ನಡೆಸಿದ ಬಳಿಕ ಹತ್ತಿರದ ಬ್ರಷ್ ಲ್ಯಾಂಡ್‌ಗೆ ತೆರಳಿದ ದಾಳಿಕೋರರು, ಅಲ್ಲಿ ಸಹ ಅನೇಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ವ್ಯಕ್ತಿಯ ಮೇಲೆ ಗುಂಡಿನ ದಾಳಿ, 15 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ದಿ ಬೆರೊಮ್ ಯೂತ್ ಮೂವ್ಮೆಂಟ್ ಎಂಬ ಸ್ಥಳೀಯ ಯುವ ಗುಂಪೊಂದು ಈ ಕುರಿತು ಮಾಹಿತಿ ನೀಡಿದ್ದು, ಬಂದೂಕುದಾರಿಗಳು ನಡೆಸಿದ ದಾಳಿಯಲ್ಲಿ ಒಟ್ಟು 21 ಜನರು ಮೃತಪಟ್ಟಿದ್ದಾರೆ. ಏಳು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಇನ್ನು ದಾಳಿ ಸಂಭವಿಸಿರುವ ಬಗ್ಗೆ ಪೊಲೀಸರು ಸಹ ದೃಢಪಡಿಸಿದ್ದಾರೆ. ಜೊತೆಗೆ, ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಗವರ್ನರ್ ಕ್ಯಾಲೆಬ್ ಮುಟ್ಫ್ವಾಂಗ್ ಅವರು ಭದ್ರತಾ ಏಜೆನ್ಸಿಗಳು ಇಂತಹ ಹತ್ಯೆಗಳನ್ನು ಕೊನೆಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಮಗಳೆದುರು ಮಾನ ಕಳ್ಕೊಂಡ ತಂದೆ ! ತಡೆದ ಮಗನಿಗೆ ಗುಂಡೇಟು, 8 KM ದೂರದ ಆಸ್ಪತ್ರೆಗೆ ರಾತ್ರಿ ನಡೆದೇ ಸಾಗಿದ ಅಣ್ಣ - ತಂಗಿ !

ಇನ್ನು ನೈಜೀರಿಯಾದ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಇಂತಹ ದಾಳಿಗಳು ಆಗಾಗ ನಡೆಯುತ್ತಿರುತ್ತವೆ. ಹಲವಾರು ಸಶಸ್ತ್ರಸಜ್ಜಿತ ಗುಂಪುಗಳು ಹಳ್ಳಿಗಳನ್ನು ಗುರಿಯಾಗಿಕೊಂಡು ದಾಳಿ ನಡೆಸುತ್ತಿರುತ್ತವೆ. ಸುಲಿಗೆಗಾಗಿ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರನ್ನು ಕೊಲ್ಲುವುದು, ಅಪಹರಿಸುವ ಘಟನೆಗಳು ಮರುಕಳಿಸುತ್ತಿರುತ್ತವೆ. ಕಳೆದ ಕೆಲ ತಿಂಗಳುಗಳಲ್ಲಿ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಜನರು ಇಂತಹ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ.

ಇದನ್ನೂ ಓದಿ : Shooting in US : ವಾಷಿಂಗ್ಟನ್​ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ : ಮೂವರು ಸಾವು , ಇಬ್ಬರು ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.